4:35 PM Friday27 - December 2024
ಬ್ರೇಕಿಂಗ್ ನ್ಯೂಸ್
ಮಾಜಿ ಪ್ರಧಾನಿ, ಆರ್ಥಿಕ ಸುಧಾರಣೆಯ ಹರಿಕಾರ ಡಾ. ಮನಮೋಹನ್ ಸಿಂಗ್ ನಿಧನ 16 ದಿನಗಳ ಬೆಂಗಳೂರು ಹಬ್ಬಕ್ಕೆ ಅದ್ಧೂರಿ ತೆರೆ: 500ಕ್ಕೂ ಅಧಿಕ ಕಾರ್ಯಕ್ರಮ; 2… 28ರಂದು ಬಂಗ್ರಕೂಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ‘ಮಂಗಳೂರು ಕಂಬಳ’: 6 ವಿಭಾಗಗಳಲ್ಲಿ ಸ್ಪರ್ಧೆ ಕೂಡ್ಲಿಗಿ ತಲುಪಿದ ಸನ್ನತಿ ಪಂಚಶೀಲ ಬೌದ್ಧ ಪಾದಯಾತ್ರಿಕರು: ಸನ್ನತಿಯಿಂದ ಬೆಂಗಳೂರಿಗೆ 27ನೇ ಬ್ರಹ್ಮೋತ್ಸವ: ನಂಜನಗೂಡು ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯ ವತಿಯಿಂದ ಬೃಹತ್ ಪಾದಯಾತ್ರೆ ತೀರ್ಥಹಳ್ಳಿ ಶ್ರೀ ರಾಮೇಶ್ವರ ದೇಗುಲದಲ್ಲಿ ಈ ಬಾರಿ ಬಿಕಾಂ ಜಾತ್ರೆ!: ಹಾಗಂದ್ರೆ ಏನು… ಸಿ.ಟಿ.ರವಿ ಅವರದ್ದು ಕೊಳಕು ಮನಸ್ಸಿನ ವ್ಯಕ್ತಿತ್ವ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಿ.ಟಿ‌. ರವಿ ಪತ್ರ ಬರೆದಿದ್ದಾರೆ, ಹೆಬ್ಬಾಳ್ಕರ್ ಅವರಿಂದ ಯಾವುದೇ ಪತ್ರ ಬಂದಿಲ್ಲ: ಸಭಾಪತಿ… ಶಸ್ತ್ರ ಚಿಕಿತ್ಸೆಗೊಳಗಾಗಿರುವ ಕನ್ನಡದ ಪ್ರಸಿದ್ಧ ನಟ ಡಾ. ಶಿವರಾಜ್‌ ಕುಮಾರ್ ಚೇತರಿಕೆ; ಆರೋಗ್ಯ… ಸಿ.ಟಿ. ರವಿಗೆ ರಕ್ಷಣೆ ನೀಡಲು ರಾಜ್ಯಪಾಲರಿಗೆ ಮನವಿ; ನ್ಯಾಯಾಂಗ ತನಿಖೆಗೆ ಪ್ರತಿಪಕ್ಷ ನಾಯಕ…

ಇತ್ತೀಚಿನ ಸುದ್ದಿ

ಔಷಧಿ ಆನ್ ಲೈನ್ ವಿತರಣೆ: ಅನುಮತಿ ರದ್ದತಿಗೆ ಅಖಿಲ ಭಾರತ ಔಷಧ ಮತ್ತು ಔಷಧಿ ವ್ಯಾಪಾರಿಗಳ ಸಂಘ ಆಗ್ರಹ

27/12/2024, 15:39

ಮಂಗಳೂರು(reporterkarnataka.com): ಕೋವಿಡ್-19(COVID -19) ಮಹಾಮಾರಿಯ ಸಂದರ್ಭದಲ್ಲಿ ಔಷಧಿಗಳನ್ನು ಮನೆ ಬಾಗಿಲಿಗೆ ವಿತರಿಸಲು ನೀಡಲಾಗಿದ್ದ ವಿಶೇಷ ಅನುಮತಿಯನ್ನು ಅಕ್ರಮ ಆನ್ಲೈನ್ ವೇದಿಕೆಗಳು ದುರುಪಯೋಗ ಮಾಡುತ್ತಿದ್ದು, ಇದು ಸಾರ್ವಜನಿಕ ಆರೋಗ್ಯಕ್ಕೆ ಅಪಾಯವನ್ನುಂಟುಮಾಡುತ್ತಿದೆ. ಈ ಅನುಮತಿಯನ್ನು ತಕ್ಷಣವೇ ಹಿಂಪಡೆಯುವಂತೆ
ಅಖಿಲ ಭಾರತ ಔಷಧ ಮತ್ತು ಔಷಧಿ ವ್ಯಾಪಾರಿಗಳ ಸಂಘ
(ಎಐಡಿಸಿಡಿ) ಕೇಂದ್ರ ಸರ್ಕಾರವನ್ನು ಕೋರಿದೆ.
ಅಖಿಲ ಭಾರತ ಔಷಧ ಮತ್ತು ಔಷಧಿ ವ್ಯಾಪಾರಿಗಳ ಸಂಘ (AIOCD )ಮತ್ತು ರಾಜ್ಯ ಮತ್ತು ಭಾರತಾದ್ಯಂತದ ಎಲ್ಲಾ ಔಷಧಿ ಮಾರಾಟಗಾರರು ಹಾಗೂ ವಿತರಕರನ್ನು ಪ್ರತಿನಿಧಿಸುವ ದಕ್ಷಿಣ ಕನ್ನಡ ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿಗಳಿಗೆ ಮೂರನೇ ಸಲ ಪತ್ರ ಬರೆದಿದ್ದು, COVID -19 ಮಹಾಮಾರಿಯ ವೇಳೆ ಜಾರಿಗೊಂಡಿದ್ದ G.S.R.220(E) ಅಧಿಸೂಚನೆಯನ್ನು ಹಿಂಪಡೆಯುವಂತೆ ಮನವಿ ಮಾಡಿದೆ.
ಈ G.S.R.220(E) ಅಧಿಸೂಚನೆಯನ್ನು COVID -19 ಮಹಾಮಾರಿಯ ಸಮಯದಲ್ಲಿ, 2020 ರ ಮಾರ್ಚ್ನಲ್ಲಿ ಪ್ರಕಟಿಸಲಾಗಿದ್ದು, ತುರ್ತು ಪರಿಸ್ಥಿತಿಯಡಿಯಲ್ಲಿ ಔಷಧಿ ಉತ್ಪಾದನೆ, ಮಾರಾಟ ಮತ್ತು ವಿತರಣೆಯನ್ನು ನಿಯಂತ್ರಿಸಲು ಡ್ರಗ್ಸ್ ಕಾಯ್ದೆಯ 26B ಕಲಮದ ಅನ್ವಯ ಕೆಲವು ಶರತ್ತುಗಳೊಂದಿಗೆ ಔಷಧಿಗಳನ್ನು ಮನೆಬಾಗಿಲಿಗೆ ವಿತರಿಸುವುದಕ್ಕೆ ಅನುಮತಿ ನೀಡಲಾಯಿತು. ಇದರಡಿ, ಔಷಧಿಗಳ ಮನೆಬಾಗಿಲಿನ ವಿತರಣೆಗೆ ಅನುಮತಿ ನೀಡಲಾಯಿತು ಮತ್ತು ಔಷಧಿಗಳ ಮಾರಾಟಕ್ಕಾಗಿ ಪ್ರಿಸ್ಕಿçಪ್ಷನ್ ಮೇಲೆ ಮುದ್ರಣ ಅಗತ್ಯ (ನಿಯಮ 65) ತಾತ್ಕಾಲಿಕವಾಗಿ ನಿರ್ಲಕ್ಷಿಸಲಾಯಿತು, ಅದು ವಿಶೇಷ ಸಂದರ್ಭಕ್ಕೆ ಮಾತ್ರ ಅನ್ವಯಿಸಿತು.
AIOCD ಅಧ್ಯಕ್ಷ ಜೆ.ಎಸ್.ಶಿಂಧೆ ಮತ್ತು ಪ್ರಧಾನ ಕಾರ್ಯದರ್ಶಿ
ರಾಜೀವ್ ಸಿಂಗ್ಹಲ್ ಅವರು ಹೇಳಿರುವಂತೆ, ಈ ಅಧಿಸೂಚನೆಯ ಪ್ರಮುಖ ಉದ್ದೇಶವು ತುರ್ತು ಪರಿಸ್ಥಿತಿಗಳಲ್ಲಿ ಸ್ಥಳೀಯ ಔಷಧಿ ವ್ಯಾಪಾರಿಗಳ ಮೂಲಕ ಔಷಧಿಗಳನ್ನು ವಿತರಿಸುವುದಾದರೂ, ಇತ್ತೀಚಿಗೆ ಸ್ವಿಗ್ಗಿ ಮತ್ತು ಇತರ ಡಿಜಿಟಲ್ ವೇದಿಕೆಗಳು ಔಷಧಿಗಳನ್ನು ಮನೆಬಾಗಿಲಿಗೆ ವಿತರಿಸಲು ಇದನ್ನು ದುರುಪಯೋಗ ಮಾಡುತ್ತಿವೆ, ಅಗತ್ಯವಿರುವ ನಿಯಂತ್ರಣ ಮತ್ತು ಭದ್ರತಾ ಕ್ರಮಗಳನ್ನು ಅನುಸರಿಸಿದೆ.
ಈ ಎಲ್ಲಾ ಅಕ್ರಮ ವೇದಿಕೆಗಳು ಮಾನ್ಯವಾದ ಪ್ರಿಸ್ಕಿçಪ್ಷನ್ ಇಲ್ಲದೆ ಔಷಧಿಗಳನ್ನು ಮಾರಾಟ ಮಾಡುತ್ತಿವೆ, ಇದರಿಂದ ಸ್ವಯಂ ಚಿಕಿತ್ಸಾ ಔಷಧಿಗಳು ದುರುಪಯೋಗ ಮತ್ತು ಆಚಿಟಿಮೈಕ್ರೋಬಿಯಲ್ ಪ್ರತಿರೋಧದಂತಹ ಗಂಭೀರ ಸಮಸ್ಯೆಗಳು ಹೆಚ್ಚಾಗುತ್ತಿವೆ. ಈ ಎಲ್ಲಾ ಅಕ್ರಮ ವೇದಿಕೆಗಳು ರೋಗಿಗಳ ಭದ್ರತೆಯನ್ನು ಕಡೆಗಣಿಸಿ, ತನ್ನ ಲಾಭಗಳನ್ನು ಮಾತ್ರ ಗಮನದಲ್ಲಿಡುತ್ತಿವೆ.
AIOCD ಮತ್ತು ದಕ್ಷಿಣ ಕನ್ನಡ ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘ ಅವರು ಹೇಳಿರುವಂತೆ, ಈ ಅಧಿಸೂಚನೆಯ ಮೂಲ ಉದ್ದೇಶವು ನಿರ್ದಿಷ್ಟ ಪರಿಸ್ಥಿತಿಗಳಲ್ಲಿ ಮಾನ್ಯ ಲೈಸನ್ಸ್ ಹೊಂದಿರುವ ಸ್ಥಳೀಯ ಔಷಧಿ ವ್ಯಾಪಾರಿಗಳಿಂದ ಔಷಧಿಗಳ ವಿತರಣೆಯನ್ನು ಅನುಮತಿಸುವುದಾಗಿತ್ತು- ಆದರೆ ಅದು ಆನ್ಲೈನ್ ವೇದಿಕೆಗಳಿಗೆ ಮಹತ್ವಪೂರ್ಣ ಭದ್ರತಾ ಕ್ರಮಗಳನ್ನು ಅವಗಣಿಸಲು ಅವಕಾಶ ನೀಡುವುದಕ್ಕೆ ಇವು ಉದ್ದೇಶಿತವಾಗಿರಲಿಲ್ಲ.
ಈ ಎಲ್ಲಾ ಆನ್ಲೈನ್ ವೇದಿಕೆಗಳು ತಮ್ಮ ಸುಲಭತೆಗೆ ಅನುಗುಣವಾಗಿ ಔಷಧಿ ವಿತರಣೆಯ ನಿಯಮಗಳನ್ನು ಅವಗಣಿಸುತ್ತಿವೆ, ಇದರಿಂದ ಸಾರ್ವಜನಿಕ ಆರೋಗ್ಯಕ್ಕೆ ನಕಾರಾತ್ಮಕ ಪರಿಣಾಮ ಬೀರುವ ಸಾದ್ಯತೆ ಇದೆ.
AIOCD ಯ ಬೇಡಿಕೆಗಳು:
• ಮಹಾಮಾರಿಯ ತುರ್ತು ಹಂತವು ಈವಾಗ ಇರುವುದಿಲ್ಲ ಮತ್ತು ಸಾಮಾನ್ಯ ಜನಜೀವನಕ್ಕೆ ಬಂದಿರುವುದರಿದ ಈ ಅಧಿಸೂಚನೆ ಇನ್ನು ಕೂಡಾ ಅನ್ವಯಿಸದು, ಮತ್ತು ಅದನ್ನು ತಕ್ಷಣವೇ ಹಿಂಪಡೆಸಬೇಕಾಗಿದೆ.
• ಔಷಧಿಗಳ ಮಾರಾಟ ಮತ್ತು ವಿತರಣೆಗೆ ಸಂಬಂಧಿಸಿದ ಪ್ರಿಸ್ಕಿçಪ್ಷನ್ ಮತ್ತು ಇತರ ಭದ್ರತಾ ನಿಯಮಗಳಿಗೆ ಕಠಿಣವಾಗಿ ಅನುಸರಣೆ ನೀಡಬೇಕು ಎಂದು ಖಾತ್ರಿಪಡಿಸಬೇಕು.
• ದೇಶದಲ್ಲಿ ಅಕ್ರಮ ಆನ್ಲೈನ್ ಔಷಧಿ ಮಾರಾಟವನ್ನು ತಕ್ಷಣವೇ ನಿಲ್ಲಿಸಬೇಕು, ಇದರಿಂದ ನಿಯಂತ್ರಣವಿಲ್ಲದ ಔಷಧಿ ಮಾರಾಟವನ್ನು ತಡೆಯಲು ಸಾಧ್ಯವಾಗುತ್ತದೆ.
AIOCD ಮತ್ತು ದಕ್ಷಿಣ ಕನ್ನಡ ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘ ಅವರು ಸಾರ್ವಜನಿಕ ಆರೋಗ್ಯ ಮತ್ತು ಭದ್ರತೆಯನ್ನು ಕಾಪಾಡಲು ಈ ಕ್ರಮ ಅಗತ್ಯವಾಗಿದೆ ಎಂಬುದನ್ನು ನಂಬುತ್ತೇವೆ. ಸರ್ಕಾರವು ಸಕಾರಾತ್ಮಕವಾಗಿ ಕ್ರಮ ಕೈಗೊಳ್ಳದಿದ್ದಲ್ಲಿ, ಂIಔಅಆ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘವು ತನ್ನ 12.40 ಲಕ್ಷ ಸದಸ್ಯರೊಂದಿಗೆ ಆಂದೋಲನ ಆರಂಭಿಸಲು ಬಾಧ್ಯವಾಗಲಿದೆ.
ದಕ್ಷಿಣ ಕನ್ನಡ ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ಪರವಾಗ
ಅರುಣ್ ಕುಮಾರ್ ಶೆಟ್ಟಿ
(ಅಧ್ಯಕ್ಷರು ) ಹಾಗೂ ಡಾ. ಎ.ಕೆ. ಜಮಾಲ್ (ಕಾರ್ಯದರ್ಶಿ) ಕೋರಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು