ಇತ್ತೀಚಿನ ಸುದ್ದಿ
ಆಟೋರಿಕ್ಷಾಕ್ಕೆ ಖಾಸಗಿ ಬಸ್ ಡಿಕ್ಕಿ: ಚಾಲಕ ಆಸ್ಪತ್ರೆಗೆ ದಾಖಲು
03/10/2024, 23:43
ಮಂಗಳೂರು(reporterkarnataka.com):ಮಂಗಳೂರಿನಿಂದ ಪುತ್ತೂರಿಗೆ ಹೋಗುತ್ತಿದ್ದ ಖಾಸಗಿ ಬಸ್ ವೊಂದು ನಗರದ ಹೊರವಲಯದ ಅಡ್ಯಾರ್ ಸಹ್ಯಾದ್ರಿ ಕಾಲೇಜು ಬಳಿ ಆಟೋರಿಕ್ಷಾವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕ ಗಾಯಗೊಂಡಿದ್ದಾರೆ.
ಬಸ್ ಮಾರುತಿ ಶೋ ರೂಮ್ ಪಕ್ಕದಲ್ಲಿ ಎಲೆಟ್ರಿಕಲ್ ಆಟೋಗೆ ಗುದ್ದಿ ಇನ್ನೊಂದು ಬದಿಗೆ ಹೋಗಿ ನಿಂತಿದೆ.
ಅಪಘಾತದಲ್ಲಿ ಗಾಯಗೊಂಡ ಆಟೋ ಚಾಲಕನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಂಕನಾಡಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.