ಇತ್ತೀಚಿನ ಸುದ್ದಿ
ಅ. 27: ಪಾಲ್ದನೆ ರಾಫಯಲ್ ಮೇರಿ ಕಾನ್ವೆಂಟ್ನಲ್ಲಿ ಉಚಿತ ಕ್ಯಾನ್ಸರ್ ತಪಾಸಣೆ ಮತ್ತು ಮಾಹಿತಿ ನೀಡುವ ಶಿಬಿರ
14/10/2024, 11:21

ಮಂಗಳೂರು(reporterkarnataka.com): ಪಾಲ್ದನೆಯಲ್ಲಿರುವ ಸಂತ ರಾಪಾಯೆಲ್ ಮೇರಿ ಕಾನ್ವೆಂಟ್ ಹಾಗೂ ಸಂತ ತೆರೆಜಾ ಚರ್ಚು ಇದರ ಜಂಟಿ ಸಹಭಾಗಿತ್ವದಲ್ಲಿ ಹಾಗೂ ಜ್ಯುವೆಲ್ಸ್ ಗ್ರೂಪ್ ಇದರ ನೇತೃತ್ವದಲ್ಲಿ ಪರಿಸರದ ಜನರಿಗಾಗಿ ಫಾದರ್ ಮುಲ್ಲರ್ಸ್ ಮೆಡಿಕಲ್ ಕಾಲೇಜು ಮಂಗಳೂರು ಇದರ ನುರಿತ ವೈದ್ಯರ ಮಾರ್ಗದರ್ಶನದಲ್ಲಿ ಇಂಡಿಯನ್ ಕ್ಯಾನ್ಸರ್ ಸೊಸೈಟಿ ಇದರ ಸಹಯೋಗದೊಂದಿಗೆ “ಉಚಿತ ಕ್ಯಾನ್ಸರ್ ತಪಾಸಣೆ ಮತ್ತು ಮಾಹಿತಿ ನೀಡುವ ಶಿಬಿರ”
ಅಕ್ಟೋಬರ್ 27ರ ಭಾನುವಾರ ಬೆಳಿಗ್ಗೆ ಗಂಟೆ 8.00 ರಿಂದ ಮಧ್ಯಾಹ್ನ ಗಂಟೆ 1 ರ ತನಕ ಪಾಲ್ದನೆ ಸಂತ ತೆರೆಜಾ ಚರ್ಚಿನ ಬಳಿ ಇರುವ ಸಂತ ರಾಫಯಲ್ ಮೇರಿ ಕಾನ್ವೆಂಟ್ನಲ್ಲಿ ನಡೆಯಲಿದೆ.
ಶಿಬಿರದಲ್ಲಿ ಸ್ತನದ ಕ್ಯಾನ್ಸರ್, ಮುಟ್ಟಿನ ಸಮಸ್ಯೆ,ಗುಣವಾಗದ ಹುಣ್ಣು, ಅಜೀರ್ಣ, ರಕ್ತ ಹೀನತೆ, ಮೂಳೆ ನೋವು, ರಕ್ತ ಸ್ರಾವ ಮುಂತಾದ ಸಮಸ್ಯೆಗಳ ಕಾರಣ ಹುಡುಕುವುದು ಹಾಗೂ ಸ್ತಿçÃಯರ ಆರೋಗ್ಯ ಮತ್ತು ಪುರುಷರ ಆರೋಗ್ಯ ತಪಾಸಣೆ ಪ್ರತ್ಯೇಕವಾಗಿ ನಡೆಸಿ ತಜ್ಞರಿಂದ ಜಾಗೃತಿಯನ್ನು ನೀಡುವುದು ಮುಂತಾದುವುಗಳು ಲಭ್ಯವಾಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಇದರ ಸದುಪಯೋಗ ಪಡೆಯಲು ಸಾರ್ವಜನಿಕರಿಗೆ ಕೋರಲಾಗಿದೆ.