ಇತ್ತೀಚಿನ ಸುದ್ದಿ
ಅ.11ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಹೊರಗುತ್ತಿಗೆ ನೌಕರರ ಪ್ರತಿಭಟನೆ: ಯಶಸ್ವಿಗೊಳಿಸಲು ಜಂಬಯ್ಯ ನಾಯಕ ಕರೆ
07/10/2023, 18:43
ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ
info.reporterkarnataka@gmail.com
ಬೆಂಗಳೂರಿನ ಪ್ರೀಡ್ಂ ಪಾರ್ಕನಲ್ಲಿ ಅ.11ರಂದು ನಡೆಯಲಿರುವ ಪ್ರತಿಭಟನೆಯಲ್ಲಿ ಕೂಡ್ಲಿಗಿ ತಾಲ್ಲೂಕಿನ ಹಿಂದುಳಿದ ವರ್ಗಗಳ, ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡ, ಮೊರಾರ್ಜಿ, ಡಾ. ಬಿ.ಆರ್.ಅಂಬೇಡ್ಕರ್, ಅಲ್ಪಸಂಖ್ಯಾತ ಇಲಾಖೆಗಳ. ಹಾಗೂ ಮುಂತಾದ ವಸತಿ ಶಾಲೆಗಳ ಮತ್ತು ವಸತಿ ನಿಲಯಗಳ ಹೊರಗುತ್ತಿಗೆ ನೌಕರರು. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು, ಹೋರಾಟಗಾರರಾದ ಜಂಬಯ್ಯನಾಯಕ ಕರೆ ನೀಡಿದರು.
ಅವರು ಕೂಡ್ಲಿಗಿ ಪ್ರವಾಸಿ ಮಂದಿರದಲ್ಲಿ, ಅ5ರಂದು ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಹೊರಗುತ್ತಿಗೆ ನೌಕರರ ಪ್ರಮುಖ ಬೇಡಿಕೆಗಳನ್ನು, ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿ ಪ್ರತಿಭಟಿಸಲಾಗುತ್ತಿದೆ. ಸಂಘದ ರಾಜ್ಯ ಸಮಿತಿಯಿಂದ ಅ.11 ಬುಧವಾರದಂದು, ಬೆಂಗಳೂರಿನ ಪ್ರೀಡಂ ಪಾರ್ಕ ನಲ್ಲಿ, ಸಂಘಟನೆಯ ನೇತೃತ್ವದಲ್ಲಿ “ಹಾಸ್ಟೆಲ್ ನೌಕರರ ಮುಷ್ಕರ” ಹಮ್ಮಿಕೊಂಡಿದ್ದು, ಪ್ರತಿಭಟನೆಯಲ್ಲಿ ತಾಲೂಕಿನ ಸಂಘದ ಎಲ್ಲಾ ಸದಸ್ಯರು ತಪ್ಪದೇ ಭಾಗವಹಿಸಬೇಕಿದೆ. ಮತ್ತು ಇತರೆ ಸದಸ್ಯರನ್ನು ಕರೆತರುವ ಮೂಲಕ ಪ್ರತಿಭಟನೆಯನ್ನು, ಯಶಸ್ವಿ ಗೊಳಿಸಬೇಕಾಗಿ ಹಿರಿಯ ಮುಖಂಡರಾದ ಎಂ.ಜಂಬಯ್ಯನಾಯಕ ಕರೆ ನೀಡಿದರು.
ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ಅನೇಕ ಪ್ರಮುಖ ಬೇಡಿಕೆಗಳನ್ನು, ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು. ಸಭೆಯಲ್ಲಿ ಸಂಘದ ಜಿಲ್ಲಾ ಕಾರ್ಯದರ್ಶಿ ಬಿ.ರಮೇಶ್ ಕುಮಾರ್ ಮಾತನಾಡಿ, ಈ ವರೆಗೆ ಸಂಘದ ಸದಸ್ಯತ್ವ ಪಡೆಯದೇ ಇರುವವರು. ಅಗತ್ಯ ದಾಖಲುಗಳಾದ ಸದಸ್ಯತ್ವ ಶುಲ್ಕ 750 ರೂ. ನಗದು ಹಣ, ಆಧಾರ್ ಕಾರ್ಡ ಜೆರಾಕ್ಸ್, ಬ್ಯಾಂಕ್ ಖಾತೆ ಪುಸ್ತಕದ ಜೆರಾಕ್ಸ್, 2 ಪಾಸ್ಪರ್ಟ್ವ್ ಸೈಜ್ ಫೋಟೋಗಳೊಂದಿಗೆ ಹಾಜರಾಗಿದ್ದು. ಸಂಘದ ಸದಸ್ಯತ್ವ ನೊಂದಣಿ ಮಾಡಿಸಬಹುದಾಗಿದೆ ಎಂದರು. ಪಟ್ಟಣ ಸೇರಿದಂತೆ ತಾಲೂಕಿನ ವಿವಿದೆಡೆಯ, ಅನೇಕ ಹಾಸ್ಟೆಲ್ ಗಳ ಹೊರಗುತ್ತಿಗೆ ನೌಕರರು ಸಭೆಯಲ್ಲಿ ಹಾಜರಿದ್ದರು.