ಇತ್ತೀಚಿನ ಸುದ್ದಿ
ತರೀಕೆರೆ: ಟಿಕೆಟ್ ಅನೌನ್ಸ್ ಮೊದಲೇ ಬೀದಿಗಿಳಿದು ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ; ಟಯರ್ ಗೆ ಬೆಂಕಿ
08/04/2023, 15:07
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ತರೀಕೆರೆ ಕಾಂಗ್ರೆಸ್ ಟಿಕೆಟ್ ಸಮಸ್ಯೆ ಮತ್ತಷ್ಟು ಜಟಿಲಗೊಂಡಿದೆ. ಟಿಕೆಟ್ ಅನೌನ್ಸ್ ಆಗುವ ಮೊದಲೇ ಕಾಂಗ್ರೆಸ್ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಟಯರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲಿಂಗಾಯುತ ಸಮುದಾಯದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆದಿದೆ. ತರೀಕೆರೆ ಕಾಂಗ್ರೆಸ್ ಟಿಕೆಟ್ ಲಿಂಗಾಯತ ಸಮುದಾಯಕ್ಕೆ ನೀಡುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ದೋರನಾಳು ಪರಮೇಶ್ ಗೆ ಕಾಂಗ್ರೆಸ್
ಟಿಕೆಟ್ ನೀಡುವಂತೆ ಆಗ್ರಹಿಸಿ ಪ್ರತಿಭಟನಾಕಾರರು ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಟೈರ್ ಗೆ ಬೆಂಕಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲಿಂಗಾಯುತ ಸಮುದಾಯಕ್ಕೆ ಕಾಂಗ್ರೆಸ್ ಟಿಕೆಟ್ ನೀಡಿದ್ರೆ ಗೆಲ್ಲಿಸುತ್ತೇವೆ ಎಂದು ಪ್ರತಿಭಟನಾಕಾರರು ಘೋಷಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯೇ ಕಾಂಗ್ರೆಸ್ ಹೈಕಮಾಂಡ್ ತಲೆನೋವಾಗಿ ಪರಿಣಮಿಸಿದೆ. ತರೀಕೆರೆಯಲ್ಲಿ ಟಿಕೆಟ್ ಗಾಗಿ ಗೋಪಿಕೃಷ್ಣ-ಶ್ರೀನಿವಾಸ್ ನಡುವೆ ತೀವ್ರ ಪೈಪೋಟಿ ನಡೆಸುತ್ತಿದ್ದಾರೆ.
ನಿರ್ಣಾಯಕ ಸಮುದಾಯದ ಮುಖಂಡರು ಬೀದಿಗಿಳಿದಿರೋದು ಕೈ ಹೈಗೆ ಮತ್ತಷ್ಟು ಟೆನ್ಷನ್ ಹುಟ್ಟಿಸಿದೆ. ಚಿಕ್ಕಮಗಳೂರು, ಮೂಡಿಗೆರೆ, ಕಡೂರು, ತರೀಕೆರೆಯಲ್ಲೂ ಕೈ ಬಂಡಾಯದ ಬಣವೇ ದೊಡ್ಡದಾಗಿದೆ. ಟಿಕೆಟ್ ಅನೌನ್ಸ್ ಆದರೆ ಅಲ್ಲೋಲ-ಕಲ್ಲೋಲ ಗ್ಯಾರಂಟಿ ಆಗಿದೆ.