ಇತ್ತೀಚಿನ ಸುದ್ದಿ
ಕಾರಿನಲ್ಲಿ ಅಕ್ರಮ ಗೋ ಸಾಗಾಟ ಯತ್ನ: ದನಗಳ್ಳರ ಬೆನ್ನಟ್ಟಿದ ಪೊಲೀಸರು; ರಾಡ್ ನಿಂದ ಹಲ್ಲೆಗೆ ಯತ್ನ; ಇಬ್ಬರ ಬಂಧನ
11/07/2025, 10:13

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಹಳುವಳ್ಳಿ ಗ್ರಾಮದಲ್ಲಿ ಝೈಲೋ ಕಾರಿನಲ್ಲಿ ಹಸುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ತಂಡವನ್ನು ತಡೆಯಲೆತ್ನಿಸಿದಾಗ ದುಷ್ಕರ್ಮಿಗಳು ಪೊಲೀಸರ ಮೇಲೆ ರಾಡ್ ನಿಂದ ದಾಳಿಗೆ ಯತ್ನಿಸಿದ್ದು, ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ.
ಹೈಟೆಕ್ ಕಾರು ಝೈಲೋ ಕಾರಿನಲ್ಲಿ ನಾಲ್ಕು ಹಸುಗಳನ್ನು ಕಳ್ಳತನ ಮಾಡಿ ಸಾಗಿಸಲಾಗುತ್ತಿತ್ತು. ಗಾಡಿ ಅಡ್ಡ ಹಾಕಿದ ಪೊಲೀಸರ ಮೇಲೆ ದನಗಳ್ಳರು ರಾಡ್ ಬೀಸಿ ಹಲ್ಲೆಗೆ ಯತ್ನಿಸಿದ್ದಾರೆ. ಕಾರನ್ನು ಪೊಲೀಸರು ಸಿನಿಮಿಯ ರೀತಿ ಚೇಸ್ ಮಾಡಿದಾಗ ದನಗಳ್ಳರು
ಗಾಡಿ ಬಿಟ್ಟು ಪರಾರಿಯಾದರು.
ಮಧ್ಯರಾತ್ರಿವರೆಗೂ ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರು ದನಗಳ್ಳರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಕಾರು, ರಾಡ್, 4 ಮೊಬೈಲ್, 4 ಹಸು ವಶಪಡಿಸಿಕೊಳ್ಳಲಾಗಿದೆ.
ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.