ಇತ್ತೀಚಿನ ಸುದ್ದಿ
ನಕಲಿ ದಾಖಲೆ ಸೃಷ್ಟಿಸಿ 512 ಎಕರೆ ಅರಣ್ಯ-ಕಂದಾಯ ಭೂಮಿ ಕಬಳಿಕೆ ಯತ್ನ: ಆರೋಪಿ ಬಂಧನ
17/12/2025, 15:35
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarmataka@gmail.com
ನಕಲಿ ದಾಖಲೆ ಸೃಷ್ಠಿಸಿ 512 ಎಕರೆ ಅರಣ್ಯ-ಕಂದಾಯ ಭೂಮಿ ಕಬಳಿಕೆ ಆರೋಪದ ಹಿನ್ನೆಲೆಯಲ್ಲಿ ಮೂಡಿಗೆರೆ ತಹಶೀಲ್ದಾರ್ ಮೂಡಿಗೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.



ನಕಲಿ ದಾಖಲೆ ಮೂಲಕ ಅಷ್ಟು ಜಮೀನನ್ನೂ ತಮ್ಮ ಹೆಸರಿಗೆ ಖಾತೆ ಮಾಡಿಕೊಳ್ಳಲು ಯತ್ನಿಸಲಾಗಿದೆ. ಪ್ರಕರಣ ಸಂಬಂಧಿಸಿದಂತೆ ಮೂಡಿಗೆರೆ ಪೊಲೀಸರು ಮರೇಬೈಲ್ ಗ್ರಾಮದ ಮನ್ಮಥ (ನೇಮಣ್ಣಗೌಡ) ಎಂಬಾತನನ್ನು ಬಂಧಿಸಿದ್ದಾರೆ.
ಮೂಡಿಗೆರೆಯ ವಿವಿಧ ಸರ್ವೇ ನಂಬರ್ ಗಳಲ್ಲಿ 512 ಎಕರೆ 21 ಗುಂಟೆ ಕಬಳಿಸಲು ಯತ್ನ ನಡೆದಿದೆ. 512 ಎಕರೆಯನ್ನೂ ನಮ್ಮ ಪೂರ್ವಜರಾದ ಈರೇಗೌಡ ಸಾಗುವಳಿ ಮಾಡುತ್ತಿದ್ದರು. 1956ರಲ್ಲಿ ಇನಾಂ ರದ್ಧತಿ ಕಾಯ್ದೆ ಪ್ರಕಾರ ಸರ್ಕಾರಕ್ಕೆ ವಾಪಸ್ ಹೋಗಿದೆ.
1974ರಲ್ಲಿ ಈರೇಗೌಡರಿಗೆ ಹಕ್ಕು ಮರು ವರ್ಗಾವಣೆಯಾಗಿದೆ ಎಂಬ ನಕಲಿ ದಾಖಲೆ ಸೃಷ್ಟಿಸಲಾಗಿದೆ.
ಮೇಲ್ನೋಟಕ್ಕೆ ಗ್ರಾಮ ಲೆಕ್ಕಾಧಿಕಾರಿಯ ನಕಲಿ ಸಹಿ, ನಕ್ಷೆ ನಕ್ಷೆ ಮಾಡಿರುವುದು ಕಂಡು ಬಂದಿದೆ.
ಮೂಡಿಗೆರೆ ತಹಶೀಲ್ದಾರ್ ಗೆ ಪೊಲೀಸ್ ಠಾಣೆಗೆ ದೂರು ನೀಡುವಂತೆ ಎಸಿ ಸೂಚನೆ ನೀಡಿದ್ದರು. ಎಸಿ ಸೂಚನೆ ಮೇರೆಗೆ ಮೂಡಿಗೆರೆ ಠಾಣೆಗೆ ತಹಶೀಲ್ದಾರ್ ದೂರು ನೀಡಿದ್ದಾರೆ.
ತಹಶೀಲ್ದಾರ್ ದೂರನನ್ವಯ ಮನ್ಮಥನನ್ನು ಪೊಲೀಸರು
ಬಂಧಿಸಿದ್ದಾರೆ.












