ಇತ್ತೀಚಿನ ಸುದ್ದಿ
ಅಥಣಿ: ಹೆಸ್ಕಾಂ ದಿವ್ಯ ನಿರ್ಲಕ್ಷ್ಯ; ವಿದ್ಯುತ್ ಅವಘಡಕ್ಕೆ 2 ಜೀವ ಬಲಿ
13/11/2022, 10:29

ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ಬದುಕು ಕಟ್ಟಿಕೊಳ್ಳಲು ಬಂದ ಬಡ ಜೀವಗಳು HESCOM ಇಲಾಖೆಯ ದಿವ್ಯ ನಿರ್ಲಕ್ಷಕ್ಕೆ ಈಗ ಬಲಿಯಾಗಿವೆ.
ಸಬ್ ಕಾಂಟ್ರಾಕ್ಟ್ ಸಮರ್ಥ್ ಎಲೆಕ್ಟ್ರಿಕಲ್ ಗುತ್ತಿಗೆದಾರ ಜತೆ ಮೇನ್ ಲೈನ್ ಕೆಲಸ ಮಾಡುವ ಸಮಯದಲ್ಲಿ ಈ ಅವಘಡ ಸಂಭವಿಸಿದೆ. ಮೇನ್ ಲೈನ್ ತಂತಿ ಜೋಡಿಸುವ ಕೆಲಸ ಮಾಡುವ ಸಮಯದಲ್ಲಿ ವಿದ್ಯುತ್ ಹರದಾಡಿ, ವಿದ್ಯುತ್ ಕಂಬ ಹತ್ತಿದ ಇಬ್ಬರು ಯುವಕರ ಜೀವ ಬಲಿ ಪಡೆದಿದೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕು ಹಿಡಕಲ್ ಮೂಲದ ಹಣಮಂತ ಮುಗುದುಮ್ (34) ಹಾಗೂ ಅಶೋಕ್ ಮಾಳಿ (35)
ಮೃತ ದುರ್ದೈವಿಗಳು ಮೇನ್ ಲೈನ್ ವಿದ್ಯುತ್ ಅಂಟಿಕೊಂಡು ನಂತರ ಇಬ್ಬರು ಸ್ಥಳದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಾರೆ. ನಂತರ ಅಥಣಿ ಆಸ್ಪತ್ರೆ ಸೇರುವಷ್ಟರಲ್ಲಿ ಕೊನೆ ಉಸಿರು ಎಳೆದಿದ್ದಾರೆ.
ಬೆಳಗಾವಿ ಜೆಲ್ಲೆಯ ಅಥಣಿ ತಾಲೂಕಿನ ಬಳ್ಳಿಗೇರಿ 110/11 ವಿದ್ಯುತ್ ವಿತರಣಾ ಕೇಂದ್ರ ಹತ್ತಿರದಲ್ಲೇ ಕೆಲಸ ವೇಳೆ ಈ ಘಟನೆ ಸಂಭವಿಸಿದೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕೆಲಸ ಪ್ರರಂಬಿಸುವ ಮುಂಚೆ ಏರಿಯಾ ಲೈನ್ ಮೆನ್ ಕಡೆಯಿಂದ ಎಲ್ ಸಿ ಪಡೆಯಲಾಗಿತ್ತು..! ಎಲ್ ಸಿ ಪಡೆದ ಸುಮಾರು ಎರಡು ಘಂಟೆಯ ವರೆಗೆ ಟ್ರ್ಯಾಕ್ಟರ್ ಸಹಾಯದಿಂದ ಕಂಬ ಹತ್ತಿ ತಂತಿ ಜೋಡಣೆ ಕೆಲಸ ನಡೆದಿತ್ತು.
ಎಲ್ ಸಿ ವಾಪಸ ಪಡೆಡೆಯಿಲ್ಲ ಆದರೂ ವಿದ್ಯುತ್ ಸಪ್ಲಯ್ ಹೇಗೆ ಬಂತು ಅನ್ನೋದರ ಬಗ್ಗೆ ಮಾಹಿತಿ ಲಭ್ಯವಾಗಬೇಕಾಗಿದೆ.
ಅಥಣಿ ವಲಯದ HESCOM ಇಲಾಖೆಯ ಸೆಕ್ಷನ್ ಆಫೀಸರ್ ದಾಸರ ಅವರನ್ನು ದೂರವಾಣಿ ಮುಕಾಂತರ ಸಂಪರ್ಕಿಸೀದಾಗ ವಿದ್ಯುತ್ ಹರಿದಾಡಿದ ಬಗ್ಗೆ ನಿಖರ ಕಾರಣ ಗೊತ್ತಾಗಿಲ್ಲ ಪರಿಶೀಸಲಾಗುತ್ತಿದೆ ಅಂತಾ ಮಾಹಿತಿ ನೀಡಿದ್ದಾರೆ..
ಒಟ್ಟಿನಲ್ಲಿ HESCOM ಇಲಾಖೆಯ ದಿವ್ಯ ನಿರ್ಲಕ್ಷಕ್ಕೆ ಬಾಳಿ ಬದುಕಬೇಕಿದ್ದ ಇಬ್ಬರ ಯುವಕನ್ನು ಬಲಿ ಪಡೆದಿದೆ.