2:51 PM Wednesday4 - March 2026
ಬ್ರೇಕಿಂಗ್ ನ್ಯೂಸ್
ದನದ ಅವಶೇಷ ಪತ್ತೆ: ಕೊಪ್ಪ-ತೀರ್ಥಹಳ್ಳಿ ರಾಷ್ಟಿಯ ಹೆದ್ದಾರಿ ತಡೆದು ಭಜರಂಗ ದಳ ಕಾರ್ಯಕರ್ತರ… ಡಿಕೆಶಿ ಮೇಲೆ ಕಣ್ಗಾವಲು | ಎಚ್ ಡಿಕೆ, ಆರ್. ಅಶೋಕ್ ಹೇಳಿಕೆ ‘’ತಾ… ಚೆನ್ನೈ ವಿಶೇಷ ಸಮಾವೇಶದಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್: ಸಾರ್ವಜನಿಕ ಆರೋಗ್ಯ ಮೂಲಸೌಕರ್ಯ ಕುರಿತು… ಚೆನ್ನಪಟ್ಟಣ | ಕೊಡಗಿನ ಸಾಕಾನೆಗಳ ಯಶಸ್ವಿ ಕಾರ್ಯಾಚರಣೆ: ನಿರಂತರ ಉಪಟಳ ನೀಡುತ್ತಿದ್ದ ಮಕ್ನಾ… ಬೆಂಗಳೂರಿನ ನೈಜೆಲ್ ಫೆರ್ನಾಂಡಿಸ್‌ಗೆ ಅಪರೂಪದ ‘ಪಾಪಲ್ ನೈಟ್‌ಹುಡ್’ ಗೌರವ ಪ್ರದಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಜಾಗತಿಕ ಮುಂಚೂಣಿಯತ್ತ ಸಾಗಿದೆ: ಕೃಷಿ ವಿಜ್ಞಾನಿ ಡಾ. ತಿಮಕಾಪುರ ನಿರಂತರ ಕಾಡಾನೆ ದಾಳಿಗೆ ಕಂಗಾಲಾದ ಮಲೆನಾಡಿಗರು: ಕಳೆದೊಂದು ವರ್ಷದಲ್ಲಿ 9 ಜನ ಕಾಡಾನೆ… ನಾಪೋಕ್ಲು: ಹಿಂದೂ ಸಂಗಮ ಸಮಾವೇಶ ಪ್ರಚಾರ ವೇಳೆ ಮಾತಿನ ಚಕಮಕಿ; ಓರ್ವನಿಗೆ ಗಾಯ ಯೋಗೀಶ್ ಗೌಡ ಕೊಲೆ ಪ್ರಕರಣ: ಶಾಸಕ ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್‌ನಿಂದ ಜಾಮೀನು… “ನಾನು ಭ್ರಷ್ಟನಲ್ಲ”: ದಿಲ್ಲಿ ಅಬಕಾರಿ ಪ್ರಕರಣದಲ್ಲಿ ಖುಲಾಸೆಗೊಂಡ ಅರವಿಂದ್ ಕೇಜ್ರಿವಾಲ್ ಕಣ್ಣೀರು

ಇತ್ತೀಚಿನ ಸುದ್ದಿ

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಮುಡಿಪು ಶಾಖೆ 8ನೇ ವಾರ್ಷಿಕೋತ್ಸವ: ಗ್ರಾಹಕರ ಸಭೆ

21/10/2024, 23:35

ಮಂಗಳೂರು(reporterkarnataka.com): ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಮುಡಿಪು ಶಾಖೆಯ 8ನೇ ವಾರ್ಷಿಕೋತ್ಸವದ ಪ್ರಯುಕ್ತ ಗ್ರಾಹಕರ ಸಭೆಯು ಸಂಘದ ಅಧ್ಯಕ್ಷರಾದ ‘ಸಹಕಾರ ರತ್ನ’ ಚಿತ್ತರಂಜನ್ ಬೋಳಾರ್ ಅವರ ಅಧ್ಯಕ್ಷತೆಯಲ್ಲಿ ಮುಡಿಪು ಶಾಖೆಯಲ್ಲಿ ಜರಗಿತು.
ಈ ಕಾರ್ಯಕ್ರಮವನ್ನು ಸಂಘದ ಸದಸ್ಯರುಗಳಾದ ಶಿವರಾಮ್ ಬಿ., ಎಂ. ಶಂಕರ್ ಭಟ್, ಸುಂದರ್ ಪೂಜಾರಿ, ಗುರುವಪ್ಪ ಪೂಜಾರಿ, ಶಶಿಕಲಾ ಎಂ. ಮತ್ತು ಅಮೀನಾ ಅವರು ದೀಪ ಪ್ರಜ್ವಲನೆ ಮಾಡುವುದರ ಮೂಲಕ ಉದ್ಟಾಟಿಸಿದರು.
ಸಂಘದ ಸದಸ್ಯರಾದ ಶಿವರಾಮ್ ಬಿ. ಅವರು ಮಾತನಾಡಿ ಸಂಘದ ಬೆಳವಣಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ದಕ್ಷಿಣ ಕನ್ನಡದಲ್ಲಿ ಮಾತ್ರವಲ್ಲದೆ ಸಂಘದ ಶಾಖೆಗಳು ಕರ್ನಾಟಕದಾದ್ಯಂತ ಪ್ರಾರಂಭವಾಗಲಿ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಸಂಘದ ಸದಸ್ಯರಾದ ಮುರಳಿಧರ್ ರಾವ್ ಅವರು ಮಾತನಾಡಿ, ಸಂಘದ ಸಿಬ್ಬಂದಿ ವರ್ಗದವರು ಉತ್ತಮ ರೀತಿಯಲ್ಲಿ ಗ್ರಾಹಕರಿಗೆ ಸೇವೆ ನೀಡುತ್ತಿದ್ದಾರೆ. ಸಂಘವು ಬ್ಯಾಂಕಿಂಗ್ ಸೇವೆಯ ಜೊತೆಗೆ ಉಚಿತ ವೈದ್ಯಕೀಯ ಶಿಬಿರಗಳನ್ನು ಆಯೋಜಿಸಿ, ಸಾರ್ವಜನಿಕರು ಆರೋಗ್ಯದ ಮೇಲೆ ಹೆಚ್ಚಿನ ಕಾಳಜಿ ವಹಿಸುವಂತೆ ಪ್ರೇರೇಪಿಸುತ್ತದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಅಧ್ಯಕ್ಷರಾದ “ಸಹಕಾರ ರತ್ನ’’ ಚಿತ್ತರಂಜನ್ ಬೋಳಾರ್ ಅವರು ಮಾತನಾಡಿ, ಶಾಖೆಯ ವಾರ್ಷಿಕೋತ್ಸವದ ಪ್ರಯುಕ್ತ ಎಲ್ಲಾ ಗ್ರಾಹಕರಿಗೆ ಅಭಿನಂದನೆ ಸಲ್ಲಿಸಿದರು. ಸಂಘದ ಪ್ರತಿ ಶಾಖೆಗಳಲ್ಲೂ ವಾರ್ಷಿಕೋತ್ಸವದ ಪ್ರಯುಕ್ತ ಉಚಿತ ವೈದ್ಯಕೀಯ ಶಿಬಿರವನ್ನು ಆಯೋಜಿಸುತ್ತಿದ್ದು, ಈಗಾಗಲೇ ೭೫ಕ್ಕೂ ಮಿಕ್ಕಿ ಉಚಿತ ವೈದ್ಯಕೀಯ ಶಿಬಿರಗಳನ್ನು ಆಯೋಜಿಸಲಾಗಿದೆ. ಮುಡಿಪು ಶಾಖೆಯಲ್ಲಿಯೂ ಮುಂದಿನ ದಿನಗಳಲ್ಲಿ ವೈದ್ಯಕೀಯ ಶಿಬಿರವನ್ನು ಆಯೋಜಿಸಲಾಗುವುದು ಎಂದರು.
ಪ್ರತಿ ಶಾಖೆಯಲ್ಲಿಯೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಇರುವಂತೆ ಭದ್ರತೆಯ ನಿಟ್ಟಿನಲ್ಲಿ ಅಲಾರಾಮ್ ವ್ಯವಸ್ಥೆ ಇದ್ದು, ಎಸ್.ಎಮ್.ಎಸ್ ಹಾಗೂ ದೂರವಾಣಿ ಕರೆಯ ಮೂಲಕ ಎಚ್ಚರಿಕೆ ನೀಡುವ ನೂತನ ವ್ಯವಸ್ಥೆ ಇರುವ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಿದರು, ಶಾಖೆಯಲ್ಲಿ ಪಿಗ್ಮಿ ಸಂಗ್ರಾಹಕರು ಹುದ್ದೆಗಳು ಖಾಲಿ ಇದ್ದು, ಆಸಕ್ತ ನಿರುದ್ಯೋಗಿಗಳು ಹಾಗೂ ಮಹಿಳೆಯರು ಪಿಗ್ಮಿ ಸಂಗ್ರಾಹಕರಾಗಿ ಉತ್ತಮ ಆದಾಯವನ್ನು ಗಳಿಸಬಹುದು ಎಂದು ತಿಳಿಸಿದರು. ಸಂಘದಲ್ಲಿ ಈಗಾಗಲೇ ಸಂಘದ ಸದಸ್ಯರಿಗೆ ಹಬ್ಬದ ಕೊಡುಗೆಯಾಗಿ ೧೦೦೦ ದಿನಗಳ ಠೇವಣಿಗಳಿಗೆ ವಿಶೇಷ ಬಡ್ಡಿ ದರ ಶೇ. ೧೦.೫೦ ವನ್ನು ನೀಡಲಾಗುತ್ತಿದ್ದು, ಚಿನ್ನಾಭರಣ ಸಾಲಗಳಿಗೆ ಪ್ರತಿ ಗ್ರಾಂ ಗೆ ಗರಿಷ್ಟ ಮೌಲ್ಯ ರೂ. ೬೨೫೦/- ರವರೆಗೆ ಯಾವುದೇ ಸೇವಾ ಶುಲ್ಕವಿಲ್ಲದೆ ಸಾಲ ನೀಡಲಾಗುತ್ತಿದೆ. ಸಂಘದಲ್ಲಿ ಲಭ್ಯವಿರುವ ಇ-ಸ್ಟಾಂಪಿAಗ್ ಸೇವೆ, ವಿಮಾ ಸೇವೆ, ಭವಿಷ್ಯ ಸುರಕ್ಷಾ ಯೋಜನೆಯ ಜೊತೆಗೆ ಎಲ್ಲಾ ಸೇವೆಗಳನ್ನು ಸದುಪಯೋಗ ಮಾಡಿಕೊಳ್ಳುವಂತೆ ಗ್ರಾಹಕರಲ್ಲಿ ವಿನಂತಿಸಿದರು. ಸಂಘವು ಈ ಕಿರು ಅವಧಿಯಲ್ಲಿ ಬೆಳೆಯಬೇಕಾದರೆ ಸಂಘದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರ ಪರಿಶ್ರಮ ಹಾಗೂ ಗ್ರಾಹಕರ ಸಹಕಾರದಿಂದ ಸಾದ್ಯವಾಗಿದೆ. ಗ್ರಾಹಕರ ಸಲಹೆ ಸಹಕಾರವನ್ನು ಸದಾ ಬಯಸುತ್ತಾ ಸಂಘವು ಇನ್ನಷ್ಟು ಎತ್ತರಕ್ಕೆ ಏರಲು ಇನ್ನು ಮುಂದೆಯೂ ಗಾಹಕರು ಕೈ ಜೋಡಿಸುವಂತೆ ಹೇಳಿದರು.
ಈ ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀ ನೇಮಿರಾಜ್ ಪಿ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್ ಮತ್ತಿತ್ತರರು ಉಪಸ್ಥಿತರಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಸಂಘದ ಗ್ರಾಹಕರು ಭಾಗವಹಿಸಿದರು.
ಸಿಬ್ಬಂದಿಯಾದ ಚೇತನ್ ಬಿ. ರವರು ಸ್ವಾಗತಿಸಿ, ಸಂಘದ ಸಿಬ್ಬಂದಿ ದೀಪ್ತಿ ವಂದಿಸಿದರು. ಶಾಖೆಯ ಶಾಖಾಧಿಕಾರಿ ವಿಂಕಿತಾ ಅವರು ನಿರೂಪಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು