3:11 PM Wednesday27 - November 2024
ಬ್ರೇಕಿಂಗ್ ನ್ಯೂಸ್
ರಾಜ್ಯ ಸರಕಾರದ ಜನಪರ ಕೆಲಸಕ್ಕೆ ಮತದಾರರ ಜೈ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್… ತೀರ್ಥಹಳ್ಳಿ ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ: ತನಿಖೆ ಆರಂಭ ಕಳೆದ ಬಾರಿ ಅರ್ಧಂಬರ್ಧ ಸುಣ್ಣಬಣ್ಣ ಕಂಡ ತುಂಗಾ ಕಮಾನು ಸೇತುವೆಗೆ ಈ ಬಾರಿ… ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ… ಚನ್ನಪಟ್ಟಣದಲ್ಲಿ ಸೋಲು: ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ ಕಾರ್ಯಕರ್ತ! ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ… ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣಗೆ ಜಯ: ಬಿಜೆಪಿ ಮೈತ್ರಿಕೂಟಕ್ಕೆ ತೀವ್ರ ಮುಖಭಂಗ ​ ಮಹಾರಾಷ್ಟ್ರ: ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ? ಆರೆಸ್ಸೆಸ್ ಮುಖ್ಯಸ್ಥ ಡಾ. ಭಾಗವತ್ ಡಿ. 7ರಂದು ಕಲ್ಲಡ್ಕಕ್ಕೆ: ಶ್ರೀರಾಮ ವಿದ್ಯಾಕೇಂದ್ರ ಕ್ರೀಡೋತ್ಸವದಲ್ಲಿ…

ಇತ್ತೀಚಿನ ಸುದ್ದಿ

ಅತಿಥಿ ಉಪನ್ಯಾಸಕರಿಗೆ 3 ಸಾವಿರ ರೂ. ಹೆಚ್ಚಿಸಿದ ಆದೇಶ ಅವೈಜ್ಞಾನಿಕ, ಹೋರಾಟ ಮುಂದುವರಿಯುವುದು: ಡಾ ಲಕ್ಷ್ಮೀದೇವಿ

19/01/2022, 16:59

ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ

info.reporterkarnataka@gmail.com

ಕೇವಲ ಮೂರು ಸಾವಿರ ಮಾತ್ರ ಹೆಚ್ಚಿಸಿ ಮತ್ತೆ ನಿರುದ್ಯೋಗ ಸೃಷ್ಟಿಸಿದ ಸರ್ಕಾರದ ನಡೆ ಸರಿಯಲ್ಲ. ಈ ಕೂಡಲೆ ರದ್ದುಗೊಳಿಸಿ ರಾಜ್ಯದ ಎಲ್ಲಾ ಅತಿಥಿ ಉಪನ್ಯಾಸಕರನ್ನು ಖಾಯಂ ಗೊಳಿಸಬೇಕೆಂದು ಕೋಲಾರ ಜಿಲ್ಲಾ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಡಾ. ಲಕ್ಷ್ಮೀದೇವಿ ಒತ್ತಾಯಿಸಿದರು.

ಅವರು ನಗರದ ನೀರಾವರಿ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ಅತಿಥಿ ಉಪನ್ಯಾಸಕರ ಪ್ರತಿಭಟನೆಯ ನೇತೃತ್ವ ವಹಿಸಿ ಮಾತಾನಾಡುತ್ತಿದ್ದರು.

ಹಲವಾರು ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಸುತ್ತಿರುವ ಅತಿಥಿ ಉಪನ್ಯಾಸಕರು , ರಾಜ್ಯದ ಇತಿಹಾಸದಲ್ಲೇ ಅತೀ ಹೆಚ್ಚು ಸಹಾಯ ಧನವನ್ನ ಅತಿಥಿ ಉಪನ್ಯಾಸಕರಿಗೆ ನೀಡಿದ್ದೇವೆ ಎಂದು ಸರ್ಕಾರ ಹೇಳಿರುವುದು ಶುದ್ಧ ಸುಳ್ಳು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಉಪಾಧ್ಯಕ್ಷ ವೆಂಕಟೇಶ್ ಬಾಬು ಮಾತನಾಡಿ, ಸರ್ಕಾರ ಕಳೆದ ಎರಡು ದಿನಗಳ ಹಿಂದೆ ಹೊರಡಿಸಿದ ಆದೇಶ ಅವೈಜ್ಞಾನಿಕವಾಗಿದೆ . ಟೆಕ್ನಿಕಲಿ ಯೋಚನೆ ಮಾಡಿದರೆ ಒಬ್ಬರಿಗೆ 3 ಸಾವಿರ ಮಾತ್ರ ಹೆಚ್ಚು ಮಾಡಿದ್ದಾರೆ. ಆದರೆ , 30 , 32 ಸಾವಿರ ಕೊಡುತ್ತೇವೆ ಎಂದು ಮಾಧ್ಯಮಗಳಲ್ಲಿ ಬಿಂಬಿಸುತ್ತಿರುವುದು ಶುದ್ಧ ಸುಳ್ಳು ಎಂದು ಆರೋಪಿಸಿದ್ದಾರೆ. 

ಕಾರ್ಯದರ್ಶಿ ವಿ ಬಿ ಶಿವಣ್ಣ ಮಾತಾನಾಡಿ, ಇನ್ನು ಸರ್ಕಾರದ ತೀರ್ಮಾನದಲ್ಲಿ ಉದ್ಯೋಗ ಭದ್ರತೆ ಇಲ್ಲ . ಇದೊಂದು ಒಡೆದು ಆಳುವ ನೀತಿ , ಯಾರೂ ಕೂಡ ಧೃತಿಗೆಡೋದು ಬೇಡ . ನಮ್ಮ ಹೋರಾಟ ಮುಂದುವರೆಯುತ್ತದೆ . 14 ಸಾವಿರ ಮಂದಿಗೂ ನ್ಯಾಯ ದೊರೆಯುವವರೆಗೂ ನಮ್ಮ ಹೋರಾಟ ನಿಲ್ಲೋದಿಲ್ಲ ಎಂದು ಪ್ರತಿಭಟನಾ ನಿರತ ಅಥಿತಿ ಉಪನ್ಯಾಸಕರು ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ .

ಉಪಾದ್ಯಕ್ಷ ಡಾ . ಶರಣಪ್ಪ ಗಬ್ಬರು ಮಾತಾನಾಡಿ ನಮ್ಮ ಮೂಲ ಬೇಡಿಕೆಯನ್ನೇ ಬಿಟ್ಟು ಸಂಬಳವನ್ನು ಮಾತ್ರ ಹೆಚ್ಚಿಗೆ ಮಾಡಿರೋದು ಬೇಸರದ ಸಂಗತಿ . ಆದರೆ ಅತಿಥಿ ಉಪನ್ಯಾಸಕರಿಗೆ ಬೇಕಿರೋದು ಸಂಬಳ ಅಲ್ಲ . ಸೇವಾ ಭದ್ರತೆ ಬೇಕು . ಖಾಯಂ ಹಾಗೂ ಹೆಚ್ಚುವರಿ ಉಪನ್ಯಾಸಕರು ಬಂದಾಗ ನಮ್ಮ ವೃತ್ತಿಯನ್ನೇ ತೊರೆಯಬೇಕಿದೆ , ಈ ಕ್ರಮ ಸರಿ ಇಲ್ಲ . ಈ ಹಿಂದಿನಿಂದಲೂ ಸೇವಾ ಅಭದ್ರತೆ ಕಾಡ್ತಿತ್ತು . ಸೇವಾ ಭದ್ರತೆಗಾಗಿ ನಾವು ಹೋರಾಟ ಕೈಗೊಂಡಿದ್ದೇವೆ . ನಮ್ಮ ಮೂಲ ಬೇಡಿಕೆಯನ್ನೇ ಈಡೇರಿಸದೇ ಸರ್ಕಾರ ಕೈ ಚೆಲ್ಲಿದ್ದಾರೆ. 

ಇದು ನಿರಾಶಾದಾಯಕವಾದ ಕ್ರಮ. ನಮ್ಮ ಮೂಲ ಬೇಡಿಕೆ ಈಡೇರೋವರೆಗೂ ನಮ್ಮ ಹೋರಾಟ ನಿಲ್ಲದು ಎಂದು ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತಿದ್ದ ಅತಿಥಿ ಉಪನ್ಯಾಸಕರು ಸರ್ಕಾರದ ವಿರುದ್ಧ ಗರಂ ಆಗಿದ್ದಾರೆ . 

ಇದೇ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ನೂರ್‌ ಅಹಮದ್‌ , ಗೌರವಾಧ್ಯಕ್ಷ ಲಕ್ಷ್ಮೀನಾರಾಯಣ , ಪ್ರಧಾನ ಕಾರ್ಯದರ್ಶಿ ಶಿವ , ಡಾ . ಸರಿತಕುಮಾರಿ ಸೋಮಶೇಖರ್ , ಶ್ರೀನಿವಾಸ್ , ಚೇತನ , ಸುಮಿತ್ರಾ , ಪುಷ್ಪ , ರವಿ ಎಸ್ , ಶೋಭಾ , ಲಕ್ಷ್ಮೀದೇವಿ , ಕುಸುಮ , ರಾಜೇಶ್ವರಿ , ಕಾವ್ಯ , ಮಾಲತಿ , ಲಾವಣ್ಯ , ಮಮತಾ , ಸರಿತಾ , ಕುಸುಮ , ಜಲಜ , ಶಿಲ್ಪ , ಕವಿತಾ , ಗೌರಿ , ಡಾ . ರವೀಂದ್ರ , ಸಂದೀಪ್ , ಪ್ರದೀಪ್ , ಪ್ರಕಾಶ್ , ಕಿಶೋರ್ , ಬಾಲಾಜಿ , ಶಿವಶಂಕರ್ , ಚಂಜಿಮಲೆ ಶ್ರೀನಿವಾಸ್ , ಮುರುಳೀಧರ , ಹರೀಶ್ , ನಾಗರಾಜ್ , ಚಾಣಕ್ಯ , ಅಶೋಕ್ , ಶಂಕರ್ , ಮುಹಮ್ಮದ್ ಇಮ್ರಾನ್ , ಗೀತಾ , ಸರಣ್ಯ ಯಲ್ಲಪ್ಪ , ಮಂಜುಳ , ಮುನಿವೆಂಕಟಸ್ವಾಮಿ , ರಮೇಶ್ , ಗೌರಿಪೇಟೆಯ ಸಾಮಾಜಿಕ ಕಾರ್ಯಕರ್ತ ಕೆ.ಎನ್ ರವೀಂದ್ರನಾಥ್ ಇನ್ನೂ ಮುಂತಾದ ಅತಿಥಿ ಉಪನ್ಯಾಸಕರು ಉಪಸ್ಥಿತರಿದ್ದರು .

ಇತ್ತೀಚಿನ ಸುದ್ದಿ

ಜಾಹೀರಾತು