ಇತ್ತೀಚಿನ ಸುದ್ದಿ
ಅಥಣಿ: ಎರಡು ಬೈಕ್ ನಡುವೆ ಭೀಕರ ಅಪಘಾತ; ಒಬ್ಬ ಸಾವು, ಇನ್ನೋರ್ವ ಗಂಭೀರ ಗಾಯ
23/01/2023, 21:09

ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ಅಥಣಿ ತಾಲೂಕಿನ ಸಂಬರಗಿ ಗ್ರಾಮದಲ್ಲಿ ಎರಡು ಬೈಕ್ ಮಧ್ಯೆ ನಡೆದ ಅಫಘಾತದಲ್ಲಿ ಓರ್ವ ಸಾವನ್ನಪ್ಪಿದ ಘಟನೆ ನಡೆದಿದೆ.ಸಂಬರಗಿ ಶಿರೂರ ರಸ್ತೆಯಲ್ಲಿ ಈ ಭೀಕರ ರಸ್ತೆ ಅಪಘಾತ ನಡೆದಿದೆ. ಸಾವನ್ನಪ್ಪಿದವರನ್ನು
ದಿಲೀಪ್ ಮಾನೆ (58) ಎಂದು ಗುರುತಿಸಲಾಗಿದೆ.
ಗಾಯಾಳುವನ್ನು ಆಸ್ಪತ್ರೆ ಸಾಗಿಸುವ ಮದ್ಯದಲ್ಲಿ ಉಸಿರು ನಿಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನೋರ್ವ ಬೈಕ್ ಸವಾರಿಗೆ ಗಂಭೀರ ಗಾಯಗೊಂಡಿದ್ದಾನೆ. ಗಾಯಾಳುವನ್ನು ಸ್ಥಳೀಯ ಅಥಣಿ ಪಟ್ಟಣದ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ.