ಇತ್ತೀಚಿನ ಸುದ್ದಿ
ಅಥಣಿಯಲ್ಲಿ ವಿದ್ಯಾರ್ಥಿಗಳಿಗೆ ಬಸ್ ಸಮಸ್ಯೆ: ಕೆಎಸ್ಸಾರ್ಟಿಸಿ ಡಿಪೋ ಮೆನೇಜರ್ ಜತೆ ಜಯ ಕರ್ನಾಟಕ ಸಂಘಟನೆ ಚರ್ಚೆ
28/12/2022, 11:47

ಬೆಳಗಾವಿ(reporterkarnataka.com): ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಬಸ್ಸು ಸರಿಯಾದ ಸಮಯಕ್ಕೆ ಬಾರದೇ ಇರುವ ಕಾರಣ ಉಂಟಾಗಿರುವ ಸಮಸ್ಯೆ ಬಗ್ಗೆ ತಕ್ಷಣ ಸ್ಪಂದಿಸಿದ ಅಥಣಿ ತಾಲೂಕಿನ ಜಯ ಕರ್ನಾಟಕ ಸಂಘಟನೆ ಕೆಎಸ್ಸಾರ್ಟಿಸಿ
ಡಿಪೋ ಮ್ಯಾನೇಜರ್ ಅವರ ಜತೆ ಚರ್ಚೆ ನಡೆಸಿತು.
ನಾಳೆಯಿಂದ ಮುಂಜಾನೆ ಸರಿಯಾಗಿ 9.00 ಗಂಟೆಗೆ ದಿನಾಲು ಬಸ್ ಬಿಡುವುದಾಗಿ ಜಯ ಕರ್ನಾಟಕ ಸಂಘಟನೆಯ ವತಿಯಿಂದ ಒತ್ತಾಯಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಪ್ರಹ್ಲಾದ್ ವಾಗಮೊರೆ, ತಾಲೂಕು ಉಪಾಧ್ಯಕ್ಷ ಆಕಾಶ್ ನಂದಗಾವ್, ಪಾರ್ಥನ ಹಳ್ಳಿ ಶಾಖಾಧ್ಯಕ್ಷ ರಿಯಾಜ ಬಿರಾದರ, ಸುನಿಲ ನಾಯ್ಕ್, ಆಶಿಪ್ ಮೊಳೆ ಹಾಗೂ ಪಾರ್ಥನಹಳ್ಳಿ ಗ್ರಾಮದವರಾದ ರಫಿ ಪಟೇಲ್, ಇಲಾಯಿ ಮೋಳೆ, ಸಿಕಂದರ ಬಿರಾದರ, ಇನ್ನಿತರರು ಉಪಸ್ಥಿತರಿದ್ದರು.