8:47 PM Wednesday13 - August 2025
ಬ್ರೇಕಿಂಗ್ ನ್ಯೂಸ್
Kodagu | ಮಡಿಕೇರಿ: ಅಸ್ಸಾಂ ಕಾರ್ಮಿಕರಿಂದ ಆಧಾರ್ ಕಾರ್ಡಿನ ದುರ್ಬಳಕೆ ಆರೋಪ ರಾಜ್ಯ ಸರಕಾರದ ವಿನೂತನ ಯೋಜನೆ: ವಿದೇಶದಲ್ಲಿ ವ್ಯಾಸಂಗ ಮಾಡುವವರಿಗೆ ಮಾಹಿತಿ ನೀಡಲು ಆ.… ಬಾಲ್ಯವಿವಾಹ ತಡೆಗಟ್ಟಲು ಸರ್ಕಾರದಿಂದ ಕಠಿಣ ಕ್ರಮ: ವಿಧಾನ ಸಭೆಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಮಶಾನ ಜಾಗ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕ್ರಮ: ವಿಧಾನಸಭೆಯಲ್ಲಿ ಸಚಿವ ಕೃಷ್ಣ ಬೈರೇಗೌಡ ಬಂಡೀಪುರ: ಕಾಡಾನೆ ಜತೆ ಸೆಲ್ಫಿಗೆ ಹೋಗಿ ದಾಳಿಗೊಳಗಾಗಿದ್ದ ವ್ಯಕ್ತಿಗೆ 25 ಸಾವಿರ ರೂ.… ವಿಶ್ವ ವಿಖ್ಯಾತ ಮೈಸೂರು ದಸರಾ: ಗಜಪಡೆಯ ತೂಕ ಪರೀಕ್ಷೆ; ಯಾರ್ಯಾರು, ಎಷ್ಟೆಷ್ಟು ಕೆಜಿ? ವಿಧಾನ ಮಂಡಲ ಮುಂಗಾರು ಅಧಿವೇಶನ: ಧರ್ಮಸ್ಥಳ ಪ್ರಕರಣ ಪ್ರಸ್ತಾಪ; ಸನಾತನ ಧರ್ಮದ ಪಾವಿತ್ರ್ಯಕ್ಕೆ… ಬೆಂಗಳೂರು ಟೆಕ್ ಸಮ್ಮಿತ್-2025: 100ಕ್ಕೂ ಹೆಚ್ಚು ಕಂಪನಿಗಳ ಸಿಇಒಗಳ ಜತೆ ಮುಖ್ಯಮಂತ್ರಿ Breakfast… Kodagu | ವಿರಾಜಪೇಟೆ: ಚೆಂಬು ವ್ಯಾಪ್ತಿಯಲ್ಲಿ ಪುoಡಾನೆ ಸೆರೆಗೆ ಸರ್ಕಾರದ ಅನುಮತಿ; ತಂಡ… ಮೈಸೂರು -ಕೊಡಗು ಲೋಕಸಭೆ ಕ್ಷೇತ್ರದಲ್ಲೂ ಮತಗಳ್ಳತನ: ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆರೋಪ

ಇತ್ತೀಚಿನ ಸುದ್ದಿ

ಅಥಣಿ: ತುಂಬಿ ಹರಿಯುತ್ತಿದ್ದ ಕರಿಮಸೂತಿ ಕಾಲುವೆಗೆ ಬಿದ್ದ 4 ಮಂದಿ ಮಕ್ಕಳು; 2  ಪುಟಾಣಿಗಳ ದಾರುಣ ಅಂತ್ಯ

10/10/2021, 11:20

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.com

ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದಲ್ಲಿ ಕಾಲುವೆ ಬಳಿ ಆಟವಾಡುತ್ತಿದ್ದ ಇಬ್ಬರು ಮಕ್ಕಳು ಅಕಸ್ಮಾತ್ ಕಾಲು ಜಾರಿ ಕರಿಮಸೂತಿ ಕಾಲುವೆಗೆ ಬಿದ್ದು ಸಾವನ್ನಪ್ಪಿದ ದಾರುಣ ಘಟನೆ ಶನಿವಾರ ಸಂಜೆ ನಡೆದಿದೆ.

ಗ್ರಾಮದ ಸರಕಾರಿ ಪ್ರೌಢ ಶಾಲೆ ಸಮೀಪ ಹಾದು ಹೋಗಿರುವ ಕರಿಮಸೂತಿ ಕಾಲುವೆಯಲ್ಲಿ ನೀರು ತುಂಬಿ ಹರಿಯುತ್ತಿದ್ದು, ಶನಿವಾರ ಸಂಜೆ 5 ಗಂಟೆ ಸುಮಾರಿಗೆ ಮಕ್ಕಳಾದ ಶ್ರೀಧರ ಶಂಕರ ಪುಂಡಿಪಲ್ಲೆ (3), ವಿಶ್ವನಾಥ ವಿನಾಯಕ ಪುಂಡಿಪಲ್ಲೆ (8), ವಿಜಯ ವಿನಾಯಕ ಪುಂಡಿಪಲ್ಲೆ (7) ಹಾಗೂ ಸ್ವಪ್ನಾ ವಿನಾಯಕ ಪುಂಡಿಪಲ್ಲೆ (11) ಎಂಬ ನಾಲ್ವರು ಮಕ್ಕಳು ಆಟವಾಡಲು ಕಾಲುವೆ ಹತ್ತಿರ ಹೋಗಿ ಕಾಲುವೆಯಲ್ಲಿ ಬಿದ್ದಿದ್ದರು. ಇವರಲ್ಲಿ ಶ್ರೀಧರ ಶಂಕರ ಪುಂಡಿಪಲ್ಲೆ (3), ವಿಶ್ವನಾಥ ವಿನಾಯಕ ಪುಂಡಿಪಲ್ಲೆ (8) ಇವರನ್ನು ಕಾಲುವೆಯಿಂದ ಬಚಾವ್ ಮಾಡಲಾಗಿದೆ. ವಿಜಯ ವಿನಾಯಕ ಪುಂಡಿಪಲ್ಲೆ (7) ಹಾಗೂ ಸ್ವಪ್ನಾ ವಿನಾಯಕ ಪುಂಡಿಪಲ್ಲೆ (11) ಇಬ್ಬರು ಸಾವನ್ನಪ್ಪಿದ್ದಾರೆ.


ಅಗ್ನಿಶಾಮಕ ದಳ ಸಿಬ್ಬಂದಿಯ ಸಹಾಯದಿಂದ ಎಲ್ಲರನ್ನು ಹೊರ ತಗೆಯುವಷ್ಟರಲ್ಲಿ ಇಬ್ಬರು ನೀರಿನಲ್ಲಿಯೇ ಸಾವನ್ನಪ್ಪಿದ್ದರು. ಈ ಕುರಿತು ಐಗಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳದಲ್ಲಿ ಮಕ್ಕಳು ಸಾವನ್ನಪಿದ ಘಟನೆಯನ್ನು ನೋಡಿ ಗ್ರಾಮಸ್ಥರ ಹಾಗೂ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

ಇತ್ತೀಚಿನ ಸುದ್ದಿ

ಜಾಹೀರಾತು