ಇತ್ತೀಚಿನ ಸುದ್ದಿ
ಅಥಣಿ: ನೀರು ಪಾಲಾದ ನಾಲ್ವರು ಸಹೋದರರ ಮೃತದೇಹ ಪತ್ತೆಗೆ ಮುಂದುವರಿದ ಶೋಧ ಕಾರ್ಯಾಚರಣೆ; ಗದ್ಗದಿತರಾದ ಸಹಾಯಕ ಕಮಿಷನರ್
29/06/2021, 15:45
ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ಅಥಣಿ ತಾಲೂಕಿನ ಕೃಷ್ಣಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ 4 ಮಂದಿ ಸಹೋದರರ ತಾಯಿಯ ಅಳಲನ್ನು ಕೇಳಿ ಚಿಕ್ಕೋಡಿ ಸಹಾಯಕ ಕಮಿಷನರ್ ಯವಕೀಶ ಕುಮಾರ್ ಮೌನವಾಗಿ ರೋಧಿಸಿದರು. ಈ ನಡುವೆ ಮೃತದೇಹಗಳ ಶೋಧ ಕಾರ್ಯಾಚರಣೆ ಭರದಿಂದ ಮುಂದುವರಿದಿದೆ.
ನಿನ್ನೆ ನಡೆದ ದುರ್ಘಟನೆಯಲ್ಲಿ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದ ಒಂದೇ ಕುಟುಂಬದ 4 ಮಂದಿ ಸಹೋದರರು ನೀರಿನಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿದ್ದರು.
ಚಿಕ್ಕೋಡಿಯ ಎಸಿ ಯವಕೀಶ ಕುಮಾರ್ ಅವರು ಮಡಿದ ಯುವಕರ ತಾಯಿಯ ಆಕ್ರಂಧನವನ್ನು ಕಂಡು ಕರಗಿ ಹೋದರು. ಮೃತ ಸಹೋದರರ ತಂದೆ ತಾಯಿಗೆ ಸಾಂತ್ವನ ಹೇಳಿದರು.
ಘಟನಾ ಸ್ಥಳದಲ್ಲೇ ತಹಶೀಲ್ದಾರ್ ಹಾಗೂ ಕಂದಾಯ ಅಧಿಕಾರಿಗಳು ಬೀಡು ಬಿಟ್ಟಿದ್ದಾರೆ. ಆದಷ್ಟು ಬೇಗ ಮೃತದೇಹಗಳ ಪತ್ತೆಗೆ ಕ್ರಮ ಕೈಗೊಳ್ಳುವಂತೆ ಕಂದಾಯ ಅಧಿಕಾರಿಗಳಿಗೆ ಎಸಿ ಸೂಚಿಸಿದರು.
ನಂತರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಯವಕೀಶ ಕುಮಾರ್, ಈಗಾಗಲೇ ಜಿಲ್ಲಾಧಿಕಾರಿಗಳ ಮುತುವರ್ಜಿಯಿಂದ ಕೊಲ್ಲಾಪುರದ ಈಜುಗಾರರನ್ನು ಸ್ಥಳದಲ್ಲಿ ಕರೆಸಲಾಗಿದ್ದು ಆದಷ್ಟು ಬೇಗ ಮೃತ ಶರೀರಗಳನ್ನು ಪತ್ತೆ ಮಾಡಲಾಗುವುದು ಎಂದರು.