ಇತ್ತೀಚಿನ ಸುದ್ದಿ
ಅಥಣಿ: ಮೀನಿನ ಬಲೆಗೆ ಸಿಲುಕಿ ಮೀನುಗಾರ ದಾರುಣ ಸಾವು; ಬೆಳ್ಳಂಬೆಳಗೆ ನಡೆದ ದುರ್ಘಟನೆ
02/05/2024, 12:44
ಬೆಳಗಾವಿ(reporterkarnataka.com): ಮೀನು ಹಿಡಿಯಲು ಹೋದ ಮೀನುಗಾರರೊಬ್ಬರು ಬಲೆಗೆ ಸಿಲುಕಿ ನದಿಯಲ್ಲಿ ಮುಳುಗಿ ಜೀವ ಕಳೆದುಕೊಂಡ ಹೃದಯ ವಿದ್ರಾವಕ ಘಟನೆ ಇಂದು ಬೆಳಂ ಬೆಳಿಗ್ಗೆ ಅಥಣಿ ತಾಲೂಕಿನ
ಸತ್ತಿ ಗ್ರಾಮದಲ್ಲಿ ನಡೆದಿದೆ.
ಅಥಣಿ ತಾಲೂಕಿನ ಹಳ್ಯಾಳ ಗ್ರಾಮದ ಮಹಾಂತೇಶ ದುರ್ಗಪ್ಪ ಕರಕರಮುಂಡಿ (35) ಮೃತ ದುರ್ದೈವಿ. ಮೀನುಗಾರಿಕೆ ವೃತ್ತಿ ಮಾಡುತ್ತಿದ್ದ ಮಹಾಂತೇಶ ಅವರು ಎಂದಿನಂತೆ ಇಂದು ಬೆಳಿಗ್ಗೆ ಸತ್ತಿ ಗ್ರಾಮದ ಹೊರವಲಯದ ಕೃಷ್ಣ ನದಿಯಲ್ಲಿ ಮೀನು ಹಿಡಿಯಲು ಹೋಗಿ ಮೀನಿಗೆ ಬಲೆ ಹಾಕುವ ವೇಳೆ ಕಾಲಿಗೆ ಬಲೆ ಸಿಲುಕಿ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಸ್ಥಳೀಯರ ಸಹಾಯದಿಂದ ಮೃತ ದೇಹ ಹೊರತೆಗೆಯಲಾಗಿದ್ದು ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಮಹಾಂತೇಶ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.