ಇತ್ತೀಚಿನ ಸುದ್ದಿ
ಅಥಣಿ 110 ಕೆವಿ ವಿದ್ಯುತ್ ಸ್ಟೇಶನ್ ನಲ್ಲಿ ಅಗ್ನಿ ಅನಾಹುತ: ಆಕಾಶದೆತ್ತರಕ್ಕೆ ಹಬ್ಬಿದ ದಟ್ಟ ಹೊಗೆ; ವಿದ್ಯುತ್ ಸರಬರಾಜು ವ್ಯತ್ಯಯ
19/01/2023, 18:32

ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ಜಿಲ್ಲೆಯ ಅಥಣಿ ಶಿವಯೋಗಿ ನಗರದಲ್ಲಿರುವ ಮಿನಿ ವಿಧಾನಸೌಧ ಸಮೀಪ 110 ಕೆವಿ ವಿದ್ಯುತ್ ಸ್ಟೇಶನ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅನಾಹುತ ಸಂಭವಿಸಿದ್ದು, ಅಗ್ನಿ ಶಾಮಕ ದಳದಿಂದ ಬೆಂಕಿಯನ್ನು ನಿಯಂತ್ರಿಸಲಾಯಿತು.
ಅಥಣಿ ತಾಲೂಕಿನ ಯಂಕಚ್ಚಿ, ಗುಂಡೆವಾಡಿ, ಮಸರಗುಪ್ಪಿ, ಕಟಗೇರಿ, ತಂಗಡಿ, ಬಸವನ ಗುಡಿ, ಬಡಚಿ, ಅಥಣಿ ಮಿನಿವಿಧಾನ ಸೌಧ ಮತ್ತು ಜಲ್ಲಿಕ್ರಷರ್ ಗಳಿಗೆ ಇಲ್ಲಿಂದ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಇದರಿಂದ ಅಥಣಿ ತಾಲೂಕಿನ ಯಂಕಚ್ಚಿ, ಗುಂಡೆವಾಡಿ, ಮಸರಗುಪ್ಪಿ, ಕಟಗೇರಿ, ವಿದ್ಯುತ್ ವ್ಯತ್ಯಾಸ ಉಂಟಾಗಿದೆ.