ಇತ್ತೀಚಿನ ಸುದ್ದಿ
ಅಥಣಿ: ಕೃಷ್ಣಾ ನದಿಯಲ್ಲಿ ತೇಲಿಬಂದ ಮೃತ ದೇಹ; ಮೃತರ ಗುರುತು ಪತ್ತೆಗೆ ಹರಸಾಹಸ
11/08/2022, 19:10
ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸತ್ತಿ ಗ್ರಾಮದ ಕೃಷ್ಣಾ ನದಿಯಲ್ಲಿ ಮೃತ ದೇಹವೊಂದು ತೇಲಿಬಂದಿದೆ. ಕೃಷ್ಣಾ ನದಿಯಲ್ಲಿ ಒಳಹರಿವು ಹೆಚ್ಚಳವಾಗಿದ್ದರಿಂದ ಬೇರೆ ಕಡೆಯಿಂದ ತೇಲಿ ಬಂದಿರಬಹುದು ಎಂದು ಜನರು ಶಂಕೆ ವ್ಯಕ್ತಪಡಿಸುತ್ತಿದ್ದಾರೆ.
ಪೊಲೀಸ್ ತನಿಖೆಯಿಂದ ಮೃತನ ಗುರುತು ಪತ್ತೆ ಸಿಗಬೇಕಾಗಿದೆ, ಅಥಣಿ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.