ಇತ್ತೀಚಿನ ಸುದ್ದಿ
ಅಥಣಿ; ಕೃಷ್ಣಾ ನದಿಯಲ್ಲಿ ನೀರುಪಾಲಾಗಿದ್ದ ಬಾಲಕನ ಮೃತದೇಹ ಪತ್ತೆ; ಸ್ನಾನ ಮಾಡುವಾಗ ದುರ್ಘಟನೆ
26/10/2022, 13:09
ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ಅಥಣಿ ತಾಲೂಕಿನ ಹುಲಗಬಾಳಿ ಗ್ರಾಮದ ಸಮೀಪ
ಕೃಷ್ಣಾ ನದಿಯಲ್ಲಿ ಸ್ನಾನ ಮಾಡುವಾಗ ನೀರು ಪಾಲಾಗಿದ್ದ ಬಾಲಕ ಕುಮಾರ್ ಸಿದ್ದಪ್ ವಾಗ್ಮೋಡೆಯ ಮೃತದೇಹ ಇಂದು ಪತ್ತೆಯಾಗಿದೆ.
ಬಾಲಕ ಹುಲಗಬಾಳಿ ಗ್ರಾಮದ ಬಿರೇಶ್ವರ ಜಾತ್ರೆಗೆ ಬಂದಿದ್ದ. ಅಲ್ಲಿ ಸ್ನಾನಕ್ಕೆಂದು ಕೃಷ್ಣಾ ನದಿಗೆ ಇಳಿದಿದ್ದ.





ಸ್ಥಳದಲ್ಲಿ ಎಸ್ ಡಿ ಆರ್ ಎಫ್ ಹಾಗೂ ತಾಲೂಕಿನ ಅಗ್ನಿ ಶಾಮಕ ಇಲಾಖೆಯ ಸಿಬ್ಬಂದಿಗಳಿಂದ ಮೃತದೇಹವನ್ನು ಹೊರತೆಗೆಯಲಾಗಿದೆ
ಮೃತ ಬಾಲಕನ ಶವ ಶೋಧ ಕಾರ್ಯಚರಣೆಯಲ್ಲಿ ಅಥಣಿ ತಾಲೂಕಿನ ಅಗ್ನಿಶಾಮಕ ಸಿಬ್ಬಂದಿಗಳಾದ ರಾಜು ತಳವಾರ, ಅನಿಲ್ ಬಡಚಿ, ನೀಲಪ್ಪ ಹಿರವಾಡೆ, ಸುರೇಶ್ ಮಾದರ, ಶಿವಾನಂದ್ ಶಿರಹಟ್ಟಿ, ಶಿವಯ್ಯ ಮಠಪತಿ ಇವರ ನೇತೃತ್ವದ ತಂಡ ಮೃತ ಬಾಲಕನ ಶವ ಪತ್ತೆ ಮಾಡಲು ಹಗಲು ರಾತ್ರಿ ಎನ್ನದೆ ಕಾರ್ಯಚರಣೆ ನಡೆಸಿದ್ದಾರೆ.
ಮಗ ಮೃತನಾಗಿದ್ದರಿಂದ ನನ್ನ ಕುಟುಂಬ ಬೀದಿಗೆ ಬಂದಿದೆ ದಯವಿಟ್ಟು ಸ್ಥಳೀಯ ಶಾಸಕರುಗಳು ನನ್ನ ಕುಟುಂಬಕ್ಕೆ ಸಹಾಯ ನೀಡಬೇಕೆಂದು ಬಾಲಕನ ತಂದೆ ಈ ಸಂದರ್ಭದಲ್ಲಿ ಮನವಿ ಮಾಡಿದರು.














