ಇತ್ತೀಚಿನ ಸುದ್ದಿ
ಅಥಣಿ: ಕೈಕಾಲು ಕಟ್ಟಿ ನೇಣು ಹಾಕಿ ಯುವಕನ ಬರ್ಬರ ಕೊಲೆ; ತಡರಾತ್ರಿ ನಡೆದ ದುಷ್ಕೃತ್ಯ
13/03/2022, 19:14

ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ಕೈ ಕಾಲು ಕಟ್ಟಿ ಹಾಕಿ ನೇಣು ಬಿಗಿದು ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿದ ಘಟನೆ ಅಥಣಿ ಪಟ್ಟಣದ ಹೊರವಲಯದಲ್ಲಿ ನಡೆದಿದೆ.
ಅಥಣಿ ಪಟ್ಟಣದ ಆರ್ ಟಿ ಓ ಕಛೇರಿ ಮುಂಭಾಗದಲ್ಲಿ ಅಥಣಿ ತಾಲೂಕಿನ ದರೂರ ಗ್ರಾಮದ ಸಿದ್ದಾರೂಡ ಶಿರಗುಪ್ಪಿ(25) ಎಂಬ ಯುವಕನ ಕೊಲೆ ಮಾಡಲಾಗಿದೆ.
ಸಿದ್ದಾರೂಡ ಶಿರಗುಪ್ಪಿ ಕಳೆದ ಹಲವು ವರ್ಷಗಳಿಂದ ಪರಪ್ಪಾ ಸವದಿ ಅವರ ಕಾರು ಚಾಲನಕನಾಗಿ ಕೆಲಸ ಮಾಡುತ್ತಿದ್ದ. ಕಳೆದ ರಾತ್ರಿ ಪರಪ್ಪ ಸವದಿ ಜೋತೆ ಉಗಾರ ಗ್ರಾಮಕ್ಕೆ ತೆರಳಿದ್ದ ಸಿದ್ದಾರೂಡ ರಾತ್ರಿ 11 ಗಂಟೆಗೆ ಅಥಣಿಗೆ ವಾಪಸ್ ಬಂದು ರಾತ್ರಿ ಮನೆಗೆ ತೆರಳುತ್ತಿರುವಾಗ ತಡ ರಾತ್ರಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಪರಪ್ಪ ಸವದಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಲಕ್ಷ್ಮಣ ಸವದಿ ಅವರ ಸಹೋದರ.