2:57 PM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಅಥಣಿ ಗ್ರಾಮೀಣ ಭಾಗದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ: ಚುನಾಯಿತ ಪ್ರತಿನಿಧಿಗಳ ಸಹಕಾರಕ್ಕೆ ಕೋರಿಕೆ

30/07/2021, 18:27

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.com

ಅಥಣಿ ಗ್ರಾಮೀಣ ಭಾಗದ ರಸ್ತೆಗಳು ಅಚ್ಚುಕಟ್ಟಾಗಿ ಇದ್ದರೆ ಮಾತ್ರ ಸಾರ್ವಜನಿಕರು  ಸುಲಭವಾಗಿ ಸಂಚರಿಸಲು ಸಾಧ್ಯ ಹಾಗಾಗಿ ಅಥಣಿ ಗ್ರಾಮೀಣ ಭಾಗದ ಎಲ್ಲ ರಸ್ತೆಗಳು ಉತ್ತಮವಾಗಿ ನಿರ್ಮಾಣವಾಗಬೇಕು. ಈ ಕಾರ್ಯಕ್ಕೆ ಎಲ್ಲ ಚುನಾಯಿತ ಪ್ರತಿನಿಧಿಗಳು ಕೈ ಜೋಡಿಸಬೇಕು ಎಂದು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಶೇಖರ ಕರಬಸಪ್ಪಗೋಳ ಹೇಳಿದರು.

ಅವರು ಸ್ಥಳೀಯ ಮಸರಗುಪ್ಪಿ ರಸ್ತೆಗೆ ಅಡ್ಡಲಾಗಿ ಅಥಣಿಕರ ವಸತಿ ವರೆಗೆ (ಅಥಣಿ ಗ್ರಾ) ದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ 02.10 ಲಕ್ಷ ರೂ ರಸ್ತೆಗೆ ಮುರುಮ ಹಾಕುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ನಂತರ ಮಾತನಾಡಿದ ಗ್ರಾ.ಪಂ ಸದಸ್ಯ ಪರಶುರಾಮ್ ಸೊಂಕರ್, ನಮ್ಮ ವಾರ್ಡಿನ ಜನತೆ ನನಗೆ ಮತಹಾಕಿ ಗೆಲ್ಲಿಸಿ ಸಾರ್ವಜನಿಕರ ಸೇವೆ ಮಾಡಲು ಅವಕಾಶ ಕೊಟ್ಟಿದ್ದು ಅದಕ್ಕಾಗಿ ಮೊದಲನೇಯ ಕೆಲಸವಾಗಿ ಈ ರಸ್ತೆ ಕಾಮಗಾರಿ ನಂತರ ದಿನಗಳಲ್ಲಿ ವಾರ್ಡಿನ ಎಲ್ಲ ಕೆಲಸ ಮಾಡಿ ಜನರ ಹಿತಕಾಪಾಡುತ್ತೆನೆ ಈ ಕೆಲಸಕ್ಕೆ ಪಂಚಾಯತಿಯ ಎಲ್ಲ ಸದಸ್ಯ, ಅಧ್ಯಕ್ಷ ಹಾಗೂ ಎಲ್ಲ ಅಧಿಕಾರಿಗಳ ಬೆಂಬಲವಿದೆ ಎಂದರು.


ಈ ವೇಳೆ ಜಿಪಂ ಅಭಿಯಂತರ ವೀರಣ್ಣಾ ವಾಲಿ, ಗ್ರಾಪಂ ಸದಸ್ಯ ಪರಶುರಾಮ ಸೋನಕರ, ಭರಮು ಸೋನಕರ, ಅಪ್ಪಾಸಾಬ ಆಲಬಾಳ, ಅರುಣ ಭಾಸಿಂಗಿ, ಸಂಜೀವ ಹಣಮಾಪೂರೆ, ಶಂಕರ ಗಡದೆ, ಮಹಿಬೂಬ ಮಕಾಂದಾರ, ಅಪ್ಪಾಸಾಬ ಕೋರಿಶೇಟ್ಟಿ, ಗ್ರಾ‌ಪಂ ಅಭಿವೃದ್ದಿ ಅಧಿಕಾರಿ ಸುಭಾಷ ಹುಬ್ಬಳ್ಳಿ, ಗೌತಮ ಪರಾಂಜಪೆ, ಸಂಜೀವ ಭಜಂತ್ರಿ, ದುಂಡಪ್ಪಾ ಕಲಗುಣಿ, ಭೀರಪ್ಪ ಕಾಂಬಳೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು