ಇತ್ತೀಚಿನ ಸುದ್ದಿ
ಅಥಣಿ: ಆಕಸ್ಮಿಕ ಬೆಂಕಿ ಅವಘಡ; ಸುಮಾರು 21 ಎಕರೆ ಕಬ್ಬು ಹಾನಿ
19/11/2022, 20:15

ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ಆಕಸ್ಮಿಕ ಬೆಂಕಿ ಅವಘಡದಿಂದ ಸುಮಾರು 21 ಎಕರೆದಷ್ಟು ರೈತರ ಕಬ್ಬು ಹಾನಿಯಾದ ಘಟನೆ ನಡೆದಿದೆ. ಅಥಣಿ ಗ್ರಾಮೀಣ ಭಾಗದ ಹುಲಗಬಾಳಿ ರಸ್ತೆ ಹತ್ತಿರ ಇರುವ ಕ್ಲಬ್ ರೋಡ್ ಬಳಿ ಬೆಂಕಿ ಅವಘಡ ಸಂಭವಿಸಿದೆ.
ಕಲ್ಲಪ್ಪ ಮುರಗೆಪ್ಪಾ ಕಲ್ಲೋಳ ಲಕ್ಷ್ಮಣ್ ಯಲ್ಲಪ್ಪ ಠಕ್ಕಣ್ಣವರ, ಉಸ್ಮಾನಗಣಿ ಅಬ್ದುಲ ಗುಡನಬಿ ರೈತರಿಗೆ ಸೇರಿದ ಸುಮಾರು 21 ಎಕರೆ ಕಬ್ಬು ಬೆಳೆ ನಾಶವಾಗಿದೆ. ಸ್ಥಳಕ್ಕೆ ಅಥಣಿ ಅಗ್ನಿ ಶಾಮಕದಳ ಸಿಬ್ಬಂದಿ ಆಗಮಿಸಿ ಕಾರ್ಯಾಚರಣೆ ನಡೆಸಿದ್ದಾರೆ.