11:27 PM Wednesday15 - January 2025
ಬ್ರೇಕಿಂಗ್ ನ್ಯೂಸ್
ಗರೋಡಿ ಜಾತ್ರೆಗೂ ಊರವರಿಗೆ ನೀರಿಲ್ಲ!: 5 ದಿನಗಳಿಂದ ನೋ ವಾಟರ್!!; ಮೇಯರ್ ಅವರೇ… ಹಸುಗಳ ಕೆಚ್ಚಲು ಕೊಯ್ದ ಪ್ರಕರಣ: ಸಚಿವ ಜಮೀರ್‌ ಭಾವಚಿತ್ರಕ್ಕೆ ಸಗಣಿ ಬಳಿದು ಬಿಜೆಪಿ… ಕೆಚ್ಚಲು ಕೊಯ್ದ ಪ್ರಕರಣ: ದನದ ಮಾಲೀಕನ ತಾಯಿಗೆ 3 ಹಸು ಕೊಡಿಸಿದ ಸಚಿವ… 5 ವರ್ಷದ ಕಂದಮ್ಮನ ಮೇಲೆ ಅತ್ಯಾಚಾರ: ಆರೋಪಿಯ ತಕ್ಷಣ ಬಂಧಿಸಲು ಆಗ್ರಹಿಸಿ ಎಐಎಂಎಸ್ಎಸ್… ಕಾಡಾನೆಯ ಚಿತ್ರೀಕರಣ ಮಾಡಲು ಹೋದ ಯೂಟ್ಯೂಬರ್ ಮೇಲೆ ಸಲಗ ದಾಳಿ: ಕೂದಲೆಳೆ ಅಂತರದಲ್ಲಿ… ವಿಕಲಚೇತನ ಉದ್ಯೋಗಿಗಳ ಜತೆ ಸಂಕ್ರಾಂತಿ ಹಬ್ಬ ಆಚರಿಸಿಕೊಂಡ ಕೇಂದ್ರ ಸಚಿವ ಕುಮಾರಸ್ವಾಮಿ ಶಬರಿಮಲೆ: ಆಕಾಶದತ್ತ ಮುಖ ಮಾಡಿ ಕಾಯುತ್ತಿದ್ದ ಭಕ್ತರಿಗೆ ಮಕರ ಜ್ಯೋತಿ ದರ್ಶನ: ಪುನೀತರಾದ… ನಂಜನಗೂಡು: ಶಿವಶರಣ ಶ್ರೀ ಸಿದ್ದರಾಮೇಶ್ವರ ರ ಜಯಂತಿ ಆಚರಣೆ ಜಿಹಾದಿ ಮನಸ್ಥಿತಿಯನ್ನು ಪೋಷಿಸಿ ಬೆಳೆಸುತ್ತಿರುವ ಸಿದ್ದರಾಮಯ್ಯ ಸರಕಾರ: ಸಂಸದ ಕ್ಯಾ ಬ್ರಿಜೇಶ್ ಚೌಟ… ವಿಜಯಪುರ: 4 ಮಂದಿ ಮಕ್ಕಳ ಜತೆ ಕಾಲುವೆಗೆ ಜಿಗಿದ ಹೆತ್ತಬ್ಬೆ: ಮಕ್ಕಳ ದಾರುಣ…

ಇತ್ತೀಚಿನ ಸುದ್ದಿ

ಅಥಣಿಗೆ ಆಗಮಿಸಿದ ವೀರರಾಣಿ ಕಿತ್ತೂರು ಚನ್ನಮ್ಮ ಜ್ಯೋತಿ ಯಾತ್ರೆ: ಭವ್ಯ ಸ್ವಾಗತ; ಭಾರೀ ಮೆರವಣಿಗೆ

17/10/2023, 14:48

ಶಿವರಾಯ ಲಕ್ಷ್ಮಣ ಕರ್ಕರಮುಂಡಿ ಬೆಳಗಾವಿ

info.reporterkarnataka@gmail.com

ಕಿತ್ತೂರಿನಲ್ಲಿ ಜರುಗಲಿರುವ 2023ರ ವೀರರಾಣಿ ಕಿತ್ತೂರು ಚನ್ನಮ್ಮನ ಉತ್ಸವದ ಅಂಗವಾಗಿ ನಾಡಿನಾದ್ಯಂತ ಸಂಚರಿಸುತ್ತಿರುವ ಕಿತ್ತೂರ ಚನ್ನಮ್ಮನ ಜ್ಯೋತಿ ಯಾತ್ರೆಯ ಭವ್ಯ ಮೆರವಣಿಗೆ ಅಥಣಿಯಲ್ಲಿ ಇಂದು ಬೆಳಗ್ಗೆ ಜರುಗಿತು.
ಗಚ್ಚಿನಮಠದಲ್ಲಿ ಜ್ಯೋತಿಯಾತ್ರೆಗೆ ಪೂಜೆ ನೆರವೇರಿಸಲಾಯಿತು. ಮಾಜಿ ಉಪ ಮುಖ್ಯಮಂತ್ರಿಗಳು, ಅಥಣಿ ಶಾಸಕ ಲಕ್ಷ್ಮಣ ಸವದಿ ಅವರು ಚನ್ನಮ್ಮನ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಭಕ್ತಿ ನಮನ ಸಲ್ಲಿಸಿದರು . ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ್ತಿ, ನಮ್ಮ ನಾಡಿನ ಹೆಮ್ಮೆಯ ಕಿತ್ತೂರು ಚನ್ನಮ್ಮಳ ಶೌರ್ಯ, ಸಾಹಸ, ಹೋರಾಟ ಎಂದೆಂದಿಗೂ ಸ್ಮರಣೀಯವಾದದ್ದು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ, ದೇಶಾಭಿಮಾನ ಮೆರೆದು ತಮ್ಮ ಪ್ರಾಣ ತ್ಯಾಗ ಮಾಡಿದ ದಿಟ್ಟ ಮಹಿಳೆ ಕಿತ್ತೂರು ಚನ್ನಮ್ಮ ಇಂದಿನ ಯುವಜನಾಂಗಕ್ಕೆ ಸ್ಫೂರ್ತಿಯಾಗಿದ್ದಾರೆ ಎಂದು ಹೇಳಿದರು.


ಶ್ರೀ ಮುರುಘೇಂದ್ರ ಶಿವಯೋಗಿಗಳ ಪುಣ್ಯಭೂಮಿಗೆ ಚನ್ನಮ್ಮನ ಜ್ಯೋತಿಯಾತ್ರೆ ಆಗಮಿಸಿರುವುದು ನಮ್ಮೆಲ್ಲರಿಗೂ ಸಂತಸ ಹಾಗೂ ಹೆಮ್ಮೆಯ ಸಂಗತಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಥಣಿ ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ , ಶೆಟ್ಟರ್ ಮಠದ ಮರುಳಸಿದ್ಧ ಸ್ವಾಮೀಜಿ, ಶ್ರೀ ರಾಮನಗೌಡ ಪಾಟೀಲ, ಶ್ರೀ ಶಿವು ಗುಡ್ಡಾಪುರ, ತೆಲಸಂಗ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಕಾಂತ ಪೂಜಾರಿ, ಶ್ರೀಶೈಲ ಹಳ್ಳದಮಳ, ಹಣಮಂತ ಕಾಲವೆ, ರಾಮಣ್ಣ ಧರಿಗೌಡರ, ಪುರಸಭೆ ಸದಸ್ಯರಾದ ದತ್ತಾ ವಾಸ್ಟರ್, ರಾಜು ಗುಡೋಡಗಿ, ಮಲ್ಲು, ಹುದ್ದಾರ, ಅಥಣಿ ತಹಸೀಲ್ದಾರ್ ರಾಜೇಶ ಬುರ್ಲಿ, ತಾ.ಪಂ. ಇ.ಒ. ಶಿವಾನಂದ ಕಲ್ಲಾಪುರ, ಟಿಎಚ್‌ಒ ಬಸಗೌಡ ಕಾಗೆ, ಅಥಣಿ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಅಶೋಕ ಕಾಂಬಳೆ, ಅಥಣಿ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳಾದ ವೆಂಕಟೇಶ ಕುಲಕರ್ಣಿ, ಎಇಇಗಳಾದ ಶ್ರೀ ವೀರಣ್ಣ ವಾಲಿ, ಜಯಕುಮಾರ ಹಿರೇಮಠ, ಶ್ರೀಕಾಂತ ಮಾಕಾಣಿ, ರಾಜ್ಯ ಸರ್ಕಾರಿ ನೌಕರರ ಸಂಘದ ಅಥಣಿ ತಾಲೂಕು ಘಟಕದ ಅಧ್ಯಕ್ಷರಾದ ಆರ್.ಎಸ್. ಪಾಟೀಲ ಸೇರಿದಂತೆ ಇತರ ಗಣ್ಯಮಾನ್ಯರು, ಸಾರ್ವಜನಿಕರು, ದೇಶಾಭಿಮಾನಿಗಳು ಪಾಲ್ಗೊಂಡಿದ್ದರು.
ಪಟ್ಟಣದ ವಿವಿಧೆಡೆ ವಿವಿಧ ವಾಧ್ಯ ವೃಂದದವರು, ಕುಂಭ ಹೊತ್ತು ಸಾಗಿದ ಮಹಿಳೆಯರೊಂದಿಗೆ ಚನ್ನಮ್ಮನ ಜ್ಯೋತಿಯಾತ್ರೆಯ ಭವ್ಯ ಮೆರವಣಿಗೆ ಜರುಗಿತು. ಬಳಿಕ ಜ್ಯೋತಿಯಾತ್ರೆಯನ್ನು ಬಿಳ್ಕೋಡಲಾಯಿತು.

ಇತ್ತೀಚಿನ ಸುದ್ದಿ

ಜಾಹೀರಾತು