4:25 AM Thursday14 - November 2024
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ನಕ್ಸಲ್ ಚಟುವಟಿಕೆ ಪ್ರಕರಣ; ಇಬ್ಬರು ಶಂಕಿತ ನಕ್ಸಲರು ಸೇರಿ 4 ಮಂದಿ… ಬೆಂಗಳೂರು ಸೈಂಟ್ ಜೋಸೆಫ್ ವಿವಿಯ ಫ್ಯಾಕಲ್ಟಿ ಡೆವಲಪ್ ಮೆಂಟ್ ಪ್ರೋಗ್ರಾಂ: ಹೆಲ್ತ್ ಕೇರ್… ಶ್ರೀನಿವಾಸಪುರ ತಾಲೂಕು ವಕೀಲರಿಂದ ಅನಿರ್ದಿಷ್ಟ ಪ್ರತಿಭಟನೆ: ನ್ಯಾಯಾಲಯ ಕಲಾಪಕ್ಕೆ ಬಹಿಷ್ಕಾರ ಪವಿತ್ರ ಯಾತ್ರಾ ಸ್ಥಳ ಸುತ್ತೂರು ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ರಂಗಸ್ವಾಮಿ ಅವಿರೋಧ… ತುಮಕೂರಿನಲ್ಲಿ ರಾಜ್ಯಮಟ್ಟದ ಪತ್ರಕರ್ತರ ಕ್ರೀಡಾಕೂಟ-2024: ಸಿಎಂ ಸಿದ್ದರಾಮಯ್ಯ ಲಾಂಛನ ಅನಾವರಣ ಮೂಡಿಗೆರೆ: ಮದುವೆ ಸಮಾರಂಭದಲ್ಲಿ 3 ಲಕ್ಷ ರೂ. ಮೌಲ್ಯದ ಚಿನ್ನ ಎಗರಿಸಿದ ಖದೀಮರು ಸಂಡೂರು ವಿಧಾನಸಭೆ ಉಪ ಚುನಾವಣೆ: ಶೇ.76.24ರಷ್ಟು ಮತದಾನ ಕಾಫಿನಾಡಿನಲ್ಲಿ ಮತ್ತೆ ನಕ್ಸಲ್ ಚಟುವಟಿಕೆ?: ನಕ್ಸಲ್ ನಿಗ್ರಹ ಪಡೆಯಿಂದ ಕೂಂಬಿಂಗ್ ಆರಂಭ ಗಣಿ ಮಾಫಿಯಾ, ಹಣದ ಶಕ್ತಿ, ಸುಳ್ಳು ಪ್ರಚಾರದಿಂದ ರಕ್ಷಿಸಲು ಮತ ಚಲಾಯಿಸಿ: ಗೋಪಿನಾಥ್… ಶ್ವಾನವನ್ನು ಬೆನ್ನಟ್ಟಿ ಬಾವಿಗೆ ಬಿದ್ದ 10ರ ಹರೆಯದ ಚಿರತೆ; ಅರಣ್ಯ ಇಲಾಖೆಯಿಂದ ರಕ್ಷಣೆ

ಇತ್ತೀಚಿನ ಸುದ್ದಿ

ಆಸ್ಪತ್ರೆಯಲ್ಲಿ ನಾಪತ್ತೆಯಾದ ಪುಟ್ಟ ಬಾಲಕಿ: ಸಿಡಿಪಿಓ ಅಧಿಕಾರಿಗಳ ಕಾರ್ಯಾಚರಣೆಯಿಂದ ಕೆಲವೇ ತಾಸಿನಲ್ಲಿ ಪೋಷಕರ ಮಡಿಲಿಗೆ

07/11/2024, 15:05

ಮೋಹನ್ ನಂಜಗೂಡು ಮೈಸೂರು

info.reporterkarnataka@gmail.com

ತಾಯಿ ಮತ್ತು ಅಜ್ಜಿಯ ಜೊತೆ ಆಸ್ಪತ್ರೆಗೆ ಧಾವಿಸಿದ್ದ ಪುಟ್ಟ ಬಾಲಕಿ ನಾಪತ್ತೆಯಾಗಿದ್ದ ಕೆಲವೇ ಗಂಟೆಗಳಲ್ಲಿ ಸಿ ಡಿ ಪಿ ಓ ಭವ್ಯಶ್ರೀ ಮತ್ತು ಸಿಬ್ಬಂದಿಗಳ ಜಾಗೃತಿಯಿಂದ ಪೋಷಕರ ಕೈ ಸೇರಿ ಪೋಷಕರಲ್ಲಿ ಕಾಡಿದ್ದ ಆತಂಕ ದೂರವಾದ ಘಟನೆ ನಂಜನಗೂಡಿನಲ್ಲಿ ನಡೆದಿದೆ
ನಂಜನಗೂಡು ನಗರದ ನೀಲಕಂಠ ನಗರ ಬಡಾವಣೆಯ ಯೋಗೇಶ್ ಎಂಬುವರ ಪತ್ನಿ ಸೌಭಾಗ್ಯ ತನ್ನ ತಾಯಿ ಮತ್ತು ನಾಲ್ಕು ವರ್ಷದ ಪುಟ್ಟ ಮಗುವಿನ ಜೊತೆಗೂಡಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಸಲುವಾಗಿ ದಾವಿಸಿದ್ದರು.


ತನ್ನ ತಾಯಿಯ ಜೊತೆ ಸೌಭಾಗ್ಯ ವೈದ್ಯರ ಬಳಿ ತೆರಳಿದ ಸಂದರ್ಭ ಹೊರ ಭಾಗದಲ್ಲಿ ನಿಂತಿದ್ದ ಪುಟ್ಟ ಬಾಲಕಿ ತಬ್ಬಿಬ್ಬಾಗಿ ಆಸ್ಪತ್ರೆಯಿಂದ ಹೊರನಡೆದಿದೆ.
ತನ್ನ ಅಜ್ಜಿ ಮತ್ತು ತಾಯಿ ನನ್ನನ್ನು ಬಿಟ್ಟು ಹೋಗಿದ್ದಾರೆ ಎಂಬ ಆತಂಕದಲ್ಲಿ ಪುಟ್ಟ ಬಾಲಕಿ ಆಸ್ಪತ್ರೆಯಿಂದ ಸರಿಸುಮಾರು ಒಂದು ಕಿಲೋಮೀಟರ್ ದೂರದ ಹುಲ್ಲಹಳ್ಳಿ ಮುಖ್ಯರಸ್ತೆಯ ಕೆನರಾ ಬ್ಯಾಂಕ್ ಬಳಿಯ ಅಂಗಡಿ ಮುಂಭಾಗದಲ್ಲಿ ತಾಯಿ ಮತ್ತು ಅಜ್ಜಿಯ ಹುಡುಕಾಟದಲ್ಲಿ ತಲ್ಲಿನನಾಗಿದ್ದಳು. ನಾಲ್ಕು ವರ್ಷದ ಪುಟ್ಟ ಬಾಲಕಿಯ ಚಲನವಲನವನ್ನು ನೋಡಿದ ಅಂಗಡಿಯ ಮಾಲೀಕರು ನಗರದ ಸಿಡಿಪಿಓ ಭವ್ಯಶ್ರೀ ರವರ ದೂರವಾಣಿಗೆ ಕರೆ ಮಾಡಿ ವಿಚಾರ ಮುಟ್ಟಿಸಿದ್ದು ಕೂಡಲೇ ಧಾವಿಸಿದ ಸಿಡಿಪಿಓ ಭವ್ಯಶ್ರೀ ಮತ್ತು ಸಾಂತ್ವನ ಇಲಾಖೆಯ ಸಾವಿತ್ರಿ ನಾಲ್ಕು ವರ್ಷದ ಪುಟ್ಟ ಬಾಲಕಿಯನ್ನು ವಶಕ್ಕೆ ಪಡೆದು ಸರಿ ಸುಮಾರು ಎರಡು ಗಂಟೆಗಳ ಕಾಲ ಮಗುವಿನ ಪೋಷಕರ ಹುಡುಕಾಟದಲ್ಲಿ ತೊಡಗಿದ್ದಾರೆ. ನಂತರ ಮಗು ಬಂದ ದಾರಿಯಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಧಾವಿಸಿದ ಬಳಿಕ ಮಗು ನೇರವಾಗಿ ತನ್ನ ಅಜ್ಜಿಯ ಬಳಿ ತೆರಳಿದೆ. ಪುಟ್ಟ ಬಾಲಕಿಗಾಗಿ ಹುಡುಕಾಟ ನಡೆಸುತ್ತಿದ್ದ ಪೋಷಕರು ನಿರಾಳವಾಗಿ ಸಿಡಿಪಿಓ ಮತ್ತು ಸಿಬ್ಬಂದಿಗಳಿಗೆ ಹ್ಯಾಟ್ಸಾಫ್ ಹೇಳಿದ್ದಾರೆ. ಒಟ್ಟಾರೆ ಸಿಡಿಪಿಓ ಇಲಾಖೆ ಅಧಿಕಾರಿಗಳ ಜಾಗೃತಿಯಿಂದ ಪುಟ್ಟ ಬಾಲಕಿ ತಾಯಿಯ ಮಡಿಲು ಸೇರಿದಂತಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು