ಇತ್ತೀಚಿನ ಸುದ್ದಿ
ಅಸೈಗೋಳಿ: ಆಶಾ, ಅಂಗನವಾಡಿ, ಸ್ತ್ರೀಶಕ್ತಿ ಕಾರ್ಯಕರ್ತರ ತರಬೇತಿ ಶಿಬಿರ, ಸಮ್ಮಿಲನ 2022
20/03/2022, 18:57
ಮಂಗಳೂರು(reporterkarnataka.com): ಜೆಸಿಐ ಮಂಗಳಗಂಗೋತ್ರಿ ವತಿಯಿಂದ ಅಸೈಗೋಳಿ ಗುರು ಎಜುಕೇಶನ್ ಸೆಂಟರ್ ನಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಆಶಾ, ಅಂಗನವಾಡಿ ಹಾಗೂ ಸ್ತ್ರೀಶಕ್ತಿ ಕಾರ್ಯಕರ್ತರಿಗೆ ತರಬೇತಿ ಶಿಬಿರ ಹಾಗೂ ಸಮ್ಮಿಲನ 2022 ಕಾರ್ಯಕ್ರಮವು ನಡೆಯಿತು.
ಜೆಸಿಐ ಮಂಗಳಗಂಗೋತ್ರಿ ಘಟಕದ ಅಧ್ಯಕ್ಷರಾದ ಕಮಲಾಕ್ಷ ಡಿ ಶೆಟ್ಟಿಗಾರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಡಿಸ್ಟ್ರಿಕ್ಟ್ ಲಯನೆಸ್
ಕೋರ್ಡಿನೆಟರ್ 2011-12, ಲಯನ್ ವಿಜಯಲಕ್ಷ್ಮಿ ಪ್ರಸಾದ್ ರೈ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು . ಮಹಿಳೆಯೊಬ್ಬಳು ಮನೆಯ ನಾಲ್ಕು ಗೋಡೆಗಳ ನಡುವಿನ ಕೆಲಸಕ್ಕೆ ಮಾತ್ರ ಸೀಮಿತವಾಗಿದ್ದ ಕಾಲವೊಂದಿತ್ತು. ಈಗ ಶೈಕ್ಷಣಿಕವಾಗಿ ಸಾಮಾಜಿಕವಾಗಿ ಎಲ್ಲಾ ರಂಗದಲ್ಲೂ ತೊಡಗಿಸಿಕೊಳ್ಳುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ತಿಳಿಸಿದರು.
ವಲಯ ನಿರ್ದೇಶಕರಾದ ಬಾದ್ ಶಾ ಸಾಂಬಾರ್ ತೋಟ, ವಾರ್ಷಿಕ ಕಾರ್ಯಕ್ರಮಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದರು. ಜೆಸಿ ಪ್ರೋವಿಷನಲ್ ಝೋನ್ ಟ್ರೈನರ್ ಅಕ್ಷತಾ ಶೆಟ್ಟಿ ಯವರು ಮಹಿಳೆಯರಿಗೆ ತರಬೇತಿಯನ್ನು ನೀಡಿದರು .
ಸಮ್ಮಿಲನ-2022 ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣವನ್ನು ಪ್ರೊಫೆಸರ್ ಬಿಕೆ ಸರೋಜಿನಿ, ಪ್ರಾಧ್ಯಾಪಕರು ಕೈಗಾರಿಕಾ ರಸಾಯನಶಾಸ್ತ್ರ ಮಂಗಳೂರು ವಿಶ್ವವಿದ್ಯಾನಿಲಯ ಇವರು ಮಾಡಿದರು. ” ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ”. ಮಾತೆಯಾಗಿ, ಸತಿಯಾಗಿ ಎಲ್ಲ ರಂಗದಲ್ಲಿ ಮಹಿಳೆಯರ ಸಾಧನೆ ಅಪಾರ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಮತಿ ಗಂಗಾಬಾಯಿ ನಿವೃತ್ತ ಮುಖ್ಯ ಶಿಕ್ಷಕಿ ಸರಕಾರಿ ಪ್ರಾಥಮಿಕ ಶಾಲೆ ರಾಜಗುಡ್ಡೆ , ಲಲಿತಾ ಎಸ್ ರಾವ್ ಮಾಜಿ ಉಪಾಧ್ಯಕ್ಷರು ಕೊಣಾಜೆ ಗ್ರಾಮ ಪಂಚಾಯತ್, ಸ್ವರ್ಣಲತಾ ರವೀಂದ್ರ ರೈ ಲಯನೆಸ್ ಪೂರ್ವ ಅಧ್ಯಕ್ಷರು ಮಂಗಳಗಂಗೋತ್ರಿ, ಮುತ್ತಕ್ಕ ಮಾಜಿ ಗ್ರಾಮ ಪಂಚಾಯತ್ ಸದಸ್ಯರು ಕೊಣಾಜೆ ಇವರು ಪಾಲ್ಗೊಂಡಿದ್ದರು.
ಶೈಕ್ಷಣಿಕವಾಗಿ ಸಾಮಾಜಿಕವಾಗಿ ಉತ್ತಮ ಸಾಧನೆಯನ್ನು ಮಾಡಿದ ಸರಕಾರಿ ಪ್ರಾಥಮಿಕ ಶಾಲೆ ಬಗಂಬಿಲದ ಶಿಕ್ಷಕಿಯಾದ ಪ್ರತಿಮಾ ಹೆಬ್ಬಾರ್ ಇವರಿಗೆ” ಜೆಸಿ ಮಹಿಳಾ ಸಾಧನ ಪುರಸ್ಕಾರ” ವನ್ನು ನೀಡಿ ಗೌರವಿಸಲಾಯಿತು.ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಗೌರವ ಸಲಹೆಗಾರರಾದ ರವೀಂದ್ರ ರೈ ಕಲ್ಲಿ ಮಾರು , ಆನಂದ ಕೆ ಅಸೈಗೋಳಿ, ನಿಕಟಪೂರ್ವ ಅಧ್ಯಕ್ಷ ಫ್ರಾಂಕೀ ಫ್ರಾನ್ಸಿಸ್ ಕುಟಿನ್ನ, ಪೂರ್ವಾಧ್ಯಕ್ಷ ಹರೀಶ್ ಕುಮಾರ್, ಕೋಶಾಧಿಕಾರಿ ನಳಿನಿ ಗಟ್ಟಿ , ಉಪಾಧ್ಯಕ್ಷೆ ಪ್ರತಿಮಾ ಹೆಬ್ಬಾರ್ , ನಿರ್ದೇಶಕರಾದ ಆರೀಫ್ ಕಲ್ಕಟ್ಟ ಜುಬೈದ, ಪ್ರೀತಮ್ ನೊರೋನ್ನ , ಕಾರ್ಯಕಾರಿ ಸಮಿತಿ ಸದಸ್ಯರಾದ ಪೂರ್ಣಿಮಾ ಶೆಟ್ಟಿ, ನಿಮಿತ ಕುಮಾರಿ, ಜೋಯ್ಸ್ ಮೇರಿ ಕುವೆಲ್ಲೊ, ಕವಿತಾ, ರೆಹಮಾನ್ ಕೊಣಾಜೆ,ಚನಿಯಪ್ಪ. ಅವರು ಉಪಸ್ಥಿತರಿದ್ದರು.
ಕಾರ್ಯಕ್ರಮಗಳ ನಿರ್ದೇಶಕರಾಗಿ ಗೀತಾ ಸಲ್ಡಾನ ಮತ್ತು ಪವಿತ್ರ ಗಣೇಶ್ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಪ್ರಧಾನ ಕಾರ್ಯದರ್ಶಿ ಜಯಲಕ್ಷ್ಮಿ ಜಿ ವಂದಿಸಿದರು.