ಇತ್ತೀಚಿನ ಸುದ್ದಿ
ಆರ್ಯಾಪು ಗ್ರಾಪಂ 2ನೇ ವಾರ್ಡ್ ಉಪ ಚುನಾವಣೆ: ಪುತ್ತಿಲ ಪರಿವಾರ ಅಭ್ಯರ್ಥಿ ಸುಬ್ರಹ್ಮಣ್ಯ ಬಲ್ಯಾಯ ಗೆಲುವು
26/07/2023, 12:48
ಪುತ್ತೂರು(reporterkarnataka.com): ಆರ್ಯಾಪು ಹಾಗೂ ನಿಡ್ನಳ್ಳಿ ಗ್ರಾಮ ಪಂಚಾಯತ್‌ನಲ್ಲಿ ತೆರವಾದ ಎರಡು ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಆರ್ಯಾಪು ಗ್ರಾಮ ಪಂಚಾಯತ್ ವಾರ್ಡ್ ನಲ್ಲಿ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿ ಸುಬ್ರಹ್ಮಣ್ಯ ಬಲ್ಯಾಯ ದೊಡ್ಡಡ್ಕ ಜಯಗಳಿಸಿದ್ದಾರೆ.
ಇಬ್ಬರು ಸದಸ್ಯರ ನಿಧನದಿಂದಾಗಿ ತೆರವಾಗಿರುವ ಎರಡು ಸ್ಥಾನಗಳಿಗೆ ಜು.23 ರಂದು ಉಪಚುನಾವಣೆ ನಡೆದಿತ್ತು.
ಪುತ್ತೂರು ತಾಲೂಕು ಕಚೇರಿಯಲ್ಲಿ ನಡೆದ ಮತ ಎಣಿಕೆ ನಡೆಯಿತು. ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಆರ್ಯಾಪು ಗ್ರಾಮ ಪಂಚಾಯತ್ ನಲ್ಲಿ ಪುತ್ತಿಲ ಪರಿವಾರ ಪಾಲಾಗಿದೆ. ಆರ್ಯಾಪು ಗ್ರಾಪಂನ ವಾರ್ಡ್-2ಕ್ಕೆ ನಡೆದ ಉಪ ಚುನಾವಣೆಯಲ್ಲಿ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿ ಸುಬ್ರಹ್ಮಣ್ಯ ಬಲ್ಯಾಯ ಅವರು 499 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಒಟ್ಟು 1237 ಮತದಾರರ ಪೈಕಿ 999 ಮತಗಳು ಚಲಾವಣೆಯಾಗಿತ್ತು.