10:37 PM Friday10 - January 2025
ಬ್ರೇಕಿಂಗ್ ನ್ಯೂಸ್
ರಾಜ್ಯದಲ್ಲಿ ಪ್ರತಿಯೊಂದಕ್ಕೂ ರೇಟ್ ಫಿಕ್ಸ್ ಆಗಿದೆ: ಕೇಂದ್ರ ಸಚಿವ ಕುಮಾರಸ್ವಾಮಿ ಆರೋಪ ಸಂಕಷ್ಟಕ್ಕೀಡಾದ ಬಿಗ್ ಬಾಸ್ ಸೀಸನ್ 11: ಶೋ ನಿಲ್ಲಿಸುವಂತೆ ಬೆಂಗಳೂರು ಜಿಪಂ ಸಿಇಒ… ಶೃಂಗೇರಿ ದೇಗುಲಕ್ಕೆ ನಾಳೆ ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ: ಸುವರ್ಣ ಮಹೋತ್ಸವದಲ್ಲಿ ಭಾಗಿ ಸುಪ್ರೀಂ ಕೋರ್ಟ್ ತೀರ್ಪು ಉಲ್ಲಂಘನೆ: ಸರಕಾರಿ ನೌಕರರ ಸಂಘಕ್ಕೆ ಚುನಾವಣೆಗೆ ಸಿವಿಲ್ ಕೋರ್ಟ್… ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರಕಾರಿ ಬಸ್: ಪ್ರಯಾಣಿಕರಲ್ಲಿ ಆತಂಕ ಬಳ್ಳಾರಿಯಲ್ಲಿ ಜೀನ್ಸ್ ಪಾರ್ಕ್ ಸ್ಥಾಪನೆ, ರಾಹುಲ್ ಗಾಂಧಿ ಕೊಟ್ಟಿದ್ದ ಭರವಸೆ ಸಾಕಾರ: ಸಚಿವ… ನಿಮ್ಹಾನ್ಸ್‌ನಲ್ಲಿ ಕರ್ನಾಟಕ ಆಡಳಿತ ಸೇವೆಯ ಅಧಿಕಾರಿಯ ನೇಮಕಾತಿಗೆ ಕ್ರಮ ಕೈಗೊಳ್ಳಿ: ಮುಖ್ಯಮಂತ್ರಿ ಸೂಚನೆ ದೇಸಿ ತಿನಿಸಿನ ಬೇಡಿಕೆ ಹೆಚ್ಚಸಲು ಕ್ರಮ: ಸಚಿವ ಎನ್. ಚಲುವರಾಯಸ್ವಾಮಿ ನಂಜನಗೂಡು: ಶಿವಶರಣ ಒಕ್ಕಲಿಗರ ಮುದ್ದಣನವರ ಪ್ರಪ್ರಥಮ ಜಯಂತಿ ಆಚರಣೆ ಬಳ್ಳಾರಿ: ಎಲ್ಲ ರೈಲುಗಳ ಆರಂಭಕ್ಕಾಗಿ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯಿಂದ ಒಂದು ತಿಂಗಳ…

ಇತ್ತೀಚಿನ ಸುದ್ದಿ

ಅರಣ್ಯ ಒತ್ತುವರಿ ತೆರವು: ತೀರ್ಥಹಳ್ಳಿಯಲ್ಲಿ ಆಗಸ್ಟ್ 19ರಂದು ಬೃಹತ್ ಪ್ರತಿಭಟನೆ

14/08/2024, 17:46

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ

info.reporterkarnataka@gmail.com

ಈಗಾಗಲೇ ಅರಣ್ಯ ಒತ್ತುವರಿ ತೆರವು ಬಗ್ಗೆ ನಾವೆಲ್ಲರೂ ಸಭೆ ನಡೆಸಿದ್ದೇವೆ. ಅದೊಂದು ಅವೈಜ್ಞಾನಿಕ ಒತ್ತುವರಿ ತೆರವು ಪ್ರಕ್ರಿಯೆ ಆಗಿದೆ. ಈ ಕಾರಣಕ್ಕೆ ಆಗಸ್ಟ್ 19ಕ್ಕೆ ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ ಎಂದು ರೈತ ಸಂಘದ ಮುಖಂಡರಾದ ಕಂಬಳಿಗೆರೆ ರಾಜೇಂದ್ರ ಹೇಳಿದರು.
ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಅವೈಜ್ಞಾನಿಕ ಒತ್ತುವರಿ ತೆರವು ಖಂಡಿಸಿ 19ರಂದು ಪಕ್ಷಾತೀತವಾಗಿ ಪ್ರತಿಭಟನೆ ನಡೆಯಲಿದೆ. ಈ ಪ್ರತಿಭಟನೆಗೆ ರೈತ ಸಂಘ, ಸಮಾನ ಮನಸ್ಕರು, ಕರ್ನಾಟಕ ರಕ್ಷಣಾ ವೇದಿಕೆ, ದಲಿತ ಸಂಘರ್ಷ ಸಮಿತಿ ಸೇರಿ ಹಲವು ಸಂಘಟನೆಗಳು ಭಾಗಿಯಾಗಲಿವೆ ಎಂದರು.
ತೀರ್ಥಹಳ್ಳಿಯ ವಿಚಾರಗಳನ್ನು ರಾಜ್ಯದ ಪ್ರತಿಯೊಬ್ಬರು ಗಮನವಿಟ್ಟು ನೋಡುತ್ತಾರೆ. ಹಾಗಾಗಿ ಈ ಪ್ರತಿಭಟನೆ ಮಹತ್ವದ್ದಾಗಿದೆ. ಇಲ್ಲಿ
ಯಾರು ಬೇರೆ ಕಡೆಯಿಂದ ಬಂದು ವಲಸೆ ಸಾಗುವಳಿ ಮಾಡಿದವರಲ್ಲ, ಇಲ್ಲಿ ಇದ್ದಂತಹವರೇ ಸಾಗುವಳಿ ಮಾಡಿ ಬೆಳೆ ಬೆಳೆದವರು. ಅಂತವರ ಭೂಮಿಯನ್ನು ತೆರವು ಮಾಡುವುದು ಸರಿಯಲ್ಲ.
ಅರಣ್ಯ ಇಲಾಖೆಯವರೇ ಒತ್ತುವರಿ ಮಾಡುತ್ತಾರೆ.
ಇಲ್ಲಿನ ಜನರಿಗೆ ರಸ್ತೆ, ಮನೆ, ಕುಡಿಯಲು ನೀರಿನ ವ್ಯವಸ್ಥೆ, ಅದಕ್ಕೂ ಮೀರಿ ಮತದಾನದ ಹಕ್ಕು ಕೊಡುತ್ತಾರೆ. ಇದೆಲ್ಲಾ ಆದ ಮೇಲೆ ಕಟ್ಟಿಕೊಂಡ ಮನೆ ಒತ್ತುವರಿ ಜಾಗ ಎಂದು ಹೇಳುತ್ತಾರೆ. ಇದರಲ್ಲಿ ನ್ಯಾಯ ಎಲ್ಲಿದೆ? ಎಂದು ಪ್ರಶ್ನೆ ಮಾಡಿದರು.
ಕಾಡನ್ನು ಕಡಿದು ಎಂಪಿಎಂ ಕಾರ್ಖಾನೆ ಮಾಡಿದ್ದಾರೆ. ಅಂತಹ ಎಷ್ಟೋ ಕಾಡುಗಳನ್ನು ಕಡಿದಿದ್ದಾರೆ. ಮೊದಲು ಅಂತಹ ಜಾಗದಲ್ಲಿ ಕಾಡನ್ನು ಬೆಳಸಿ. ಅದನ್ನು ಬಿಟ್ಟು ಒತ್ತುವರಿ ಜಾಗವನ್ನು ಒತ್ತಾಯ ಪೂರ್ವಕವಾಗಿ ತೆರವು ಮಾಡುವುದು ಸರಿಯಲ್ಲ. ಲೇಔಟ್ ಹಾಗೂ ನೂರಾರು ಎಕರೆ ಒತ್ತುವರಿ ಮಾಡಿದವರನ್ನು ಕೇಳುವುದಿಲ್ಲ. ಆದರೆ ರೈತರ ಸಮಸ್ಯೆಯನ್ನು ಸರ್ಕಾರ ಸರಿಪಡಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕೋಡ್ಲು ವೆಂಕಟೇಶ್, ಹೋರಬೈಲು ರಾಮಕೃಷ್ಣ, ನೆಂಪೆ ದೇವರಾಜ್, ಶಿವಾನಂದ ಕರ್ಕಿ, ನಿಶ್ಚಲ್ ಜಾದೂಗಾರ್, ಅಭಿಲಾಷ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು