8:24 AM Wednesday26 - November 2025
ಬ್ರೇಕಿಂಗ್ ನ್ಯೂಸ್
ಸಂತಾನ ಹರಣ ಚಿಕಿತ್ಸೆ ಬಳಿಕವೂ ಗರ್ಭಿಣಿಯಾದ ಪತ್ನಿ: ಪತಿಯಿಂದ ವೈದ್ಯರಿಗೆ ಬೆದರಿಕೆ ಆರೋಪ:… ರಾಜ್ಯದ ಕ್ರಿಕೆಟ್ ಪಟುಗಳಿಗೆ ತಲಾ 10 ಲಕ್ಷ ನಗದು ಬಹುಮಾನ ಜತೆಗೆ ಸರ್ಕಾರಿ… ಹೈವಿಷನ್ ಇಂಡಿಯಾ ಜತೆ ಕೊರಿಯನ್ ಸಂಸ್ಥೆ ಜಿಟಿಟಿಸಿ ಒಪ್ಪಂದಕ್ಕೆ ಸಹಿ |ರಾಜ್ಯದ ಪ್ರವಾಸಿ… ಗಗನಯಾನಿಯಾಗಲು ದೈಹಿಕ, ಮಾನಸಿಕ ಆರೋಗ್ಯ ಬಹಳ ಮುಖ್ಯ: ಶುಭಾಂಶು ಶುಕ್ಲಾ Kodagu | ಅಪಘಾತಕ್ಕೆ ಈಡಾಗಿ ಗಂಭೀರ ಸ್ಥಿತಿಯಲ್ಲಿ ಪುತ್ರ: ನೊಂದ ತಾಯಿ ಕೆರೆಗೆ… ಅಕ್ರಮ‌ ಆಸ್ತಿ ಸಂಪಾದನೆ ಆರೋಪ: ಕೊಡಗು ಪಿಡಬ್ಲ್ಯುಡಿ ಎಂಜಿನಿಯರ್ ಕಚೇರಿ, ಮನೆ ಮೇಲೆ… Yadagiri | ವಿದ್ಯುತ್ ಕಳ್ಳತನ ನಿಯಂತ್ರಣ, ಟಿಸಿಗಳ ಸಮರ್ಪಕ ನಿರ್ವಹಣೆಗೆ ಇಂಧನ ಸಚಿವ… ಹಿಂದೂ ಧರ್ಮ ಮತ್ತು ಭಾರತೀಯತೆ ಎರಡೂ ಒಂದೇ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಉಡುಪಿಗೆ ನ.28ರಂದು ಪ್ರಧಾನಿ ಮೋದಿ ಭೇಟಿ: ಸಾರ್ವತ್ರಿಕ ರಜೆ ಘೋಷಿಸಲು ಶಾಸಕ ಯಶ್… ಬಾಲಿವುಡ್‌ನ ದಿಗ್ಗಜ ನಟ ಧರ್ಮೇಂದ್ರ ನಿಧನ: ಭಾರತೀಯ ಚಿತ್ರರಂಗದ ‘ಹೀ-ಮ್ಯಾನ್’ಗೆ ವಿದಾಯ

ಇತ್ತೀಚಿನ ಸುದ್ದಿ

ಅರಣ್ಯ ಇಲಾಖೆಯ ಮಹಿಳಾ ಅಧಿಕಾರಿ ವರ್ಗಾವಣೆ: ವಿಜಿಲೆನ್ಸ್ ಕಮಿಟಿಯಿಂದ ಸೂಕ್ತ ತನಿಖೆಗೆ ಮಾಜಿ ಸಚಿವ ಖಾದರ್ ಒತ್ತಾಯ

29/01/2022, 22:40

ಮಂಗಳೂರು(reporterkarnataka.com): ರಕ್ಷಿತಾರಣ್ಯದಿಂದ ಯಾವುದೇ ಭಯವಿಲ್ಲದೇ ಮರ ಕಡಿದುಕೊಂಡು ಹೋದವರನ್ನು ತಡೆಯಲು ಯತ್ನಿಸಿದ ಅಧಿಕಾರಿಯನ್ನೇ ವರ್ಗಾವಣೆ ಮಾಡಿರುವುದು ಅತ್ಯಂತ ಗಂಭೀರವಾದ ವಿಚಾರ. ಈ ಬಗ್ಗೆ ರಾಜ್ಯ ಸರಕಾರಕ್ಕೆ ಪತ್ರ ಬರೆದು ವಿಜಿಲೆನ್ಸ್ ಕಮಿಟಿಯಿಂದ ಸಂಪೂರ್ಣವಾಗಿ ತನಿಖೆ ಮಾಡಬೇಕೆಂದು ಆಗ್ರಹಿಸುತ್ತೇನೆ ಎಂದು ಶಾಸಕ ಯು.ಟಿ.ಖಾದರ್ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಿಸರ್ವ್ ಫಾರೆಸ್ಟ್ ನಿಂದ ವ್ಯಕ್ತಿಯೋರ್ವರು ನೂರಾರು ಮರ ಕಡಿದು ಸಾಗಿಸುತ್ತಿರುವಾಗ ವಾಹನಕ್ಕೆ ಮುಟ್ಟುಗೋಲು ಹಾಕಲಾಗಿದೆ. ಈ ಸಂದರ್ಭ ಆತನ ಬಿಡುಗಡೆಗೆ ರಾಜಕೀಯ ಒತ್ತಡ ತಂದಾಗ, ಬಿಡುಗಡೆ ಮಾಡದ ವಲಯ ಅರಣ್ಯಾಧಿಕಾರಿಯನ್ನು ವರ್ಗಾವಣೆ ಮಾಡಿರುವ ಮಾಹಿತಿ ಇದೆ. ರಿಸರ್ವ್ ಫಾರೆಸ್ಟ್ ನಿಂದ ಒಬ್ಬರು ಯಾವುದೇ ಭಯವಿಲ್ಲದೇ ಮರ ಕಡಿದುಕೊಂಡು ಹೋಗುತ್ತಾರೆ, ಅದನ್ನು ತಡೆಯಲು ಯತ್ನಿಸಿದ ಅಧಿಕಾರಿಯನ್ನು ವರ್ಗಾವಣೆ ಮಾಡುತ್ತಾರೆ ಅಂದ್ರೆ ಇದು ಬಹಳ ಗಂಭೀರವಾದ ವಿಚಾರ. ಈ ಬಗ್ಗೆ ರಾಜ್ಯ ಅರಣ್ಯ ವಿಜಿಲೆನ್ಸ್ ಸ್ಕ್ಯಾಡ್ ನಿಂದ ಸೂಕ್ತ ತನಿಖೆಗೆ ಆಗ್ರಹಿಸಿ ಪತ್ರ ಬರೆಯುವುದಾಗಿ ಖಾದರ್ ನುಡಿದರು.

ಉಡುಪಿ ಅರಣ್ಯ ಸಂಚಾರಿ ದಳದಲ್ಲಿ ವಲಯ ಅರಣ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಂಧ್ಯಾ ಎಂಬವರನ್ನು ಶಾಸಕ ಹರೀಶ್ ಪೂಂಜ, ವಿನಾಕಾರಣ ರಾಜಕೀಯ ದ್ವೇಷದಿಂದ ಬೀದರ್ ಗೆ ವರ್ಗಾಯಿಸಿರುವ ಬಗ್ಗೆ ಆರೋಪವಿದೆ. ಈ ಸಂಬಂಧ ಅಧಿಕಾರಿ ಸಂಧ್ಯಾ ಬಿಲ್ಲವ ಸಂಘಕ್ಕೆ ದೂರು ನೀಡಿರುವ ಪ್ರತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, `ತಾಲೂಕಿನ ಅಕ್ರಮ ಮರಗಳ ಸಾಗಾಟಗಾರರ ಮರಮಟ್ಟು ಹಾಗೂ ವಾಹನ ಇಲಾಖೆ ವಶಪಡಿಸಿದೆ. ಮೇಲಿನ ಅಧಿಕಾರಿಗಳ ಆದೇಶದ ಮೇರೆಗೆ ಅಕ್ರಮ ಮರ ದಾಸ್ತಾನುಗಳಿಗೆ ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದೇನೆ. ಆದರೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವೈಯಕ್ತಿಕ ದ್ವೇಷದಿಂದ, ಅಕ್ರಮ ಮರಗಳ್ಳರಿಗೆ ಅನುಕೂಲ ಮಾಡಿಕೊಡುವ ಎದ್ದೇಶದಿಂದ ದ ಬೀದರ್ ಗೆ

ವರ್ಗಾಯಿಸಿರುತ್ತಾರೆ’ ಎಂಬುದಾಗಿ ಆರೋಪಿಸಿದ್ದು, ನ್ಯಾಯ ನೀಡುವಂತೆ ಕೋರಿದ್ದಾರೆ. ಇದರೊಂದಿಗೆ ಅಧಿಕಾರಿಯನ್ನು ವರ್ಗಾವಣೆ ಮಾಡುವಂತೆ ಕೋರಿ ಶಾಸಕ ಹರೀಶ್ ಪೂಂಜ ಸಿಎಂಗೆ ಬರೆದ ಪತ್ರ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇತ್ತೀಚಿನ ಸುದ್ದಿ

ಜಾಹೀರಾತು