3:37 PM Wednesday11 - December 2024
ಬ್ರೇಕಿಂಗ್ ನ್ಯೂಸ್
30ನೇ ವರ್ಷದ ಆಳ್ವಾಸ್ ವಿರಾಸತ್‌ಗೆ ಅದ್ಧೂರಿಯ ಚಾಲನೆ, ಮೇಳೈಸಿದ ವೈಭವ; ವಿಶ್ವವನ್ನೇ ಹೃದಯದಲ್ಲಿ… ಅರಂತೋಡು: ಗೋಕಳ್ಳರ ಹಿಡಿದು ಪೊಲೀಸರಿಗೊಪ್ಪಿಸಿದ ಸ್ಥಳೀಯರು; 7 ದನಗಳು ಪೊಲೀಸರ ವಶಕ್ಕೆ ಬೆಳಗಾವಿ ಸುವರ್ಣ ಸೌಧಕ್ಕೆ ಪಂಚಮಸಾಲಿ ಪ್ರತಿಭಟನಾಕಾರರಿಂದ ಮುತ್ತಿಗೆ ಯತ್ನ: ಪೊಲೀಸ್ ಲಾಠಿಚಾರ್ಜ್ ಗೆ… ಪಂಚಮಸಾಲಿ 2ಎ ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್ ಆದೇಶ ಸದನದ ಮುಂದೆ ಮಂಡಿಸುವೆ:… ಮುರುಡೇಶ್ವರ: ಬಾಲಕಿಯರ ರಕ್ಷಿಸಲಾಗದೆ ಅಸಹಾಯಕರಾದ ಲೈಫ್ ಗಾರ್ಡ್; ಸಚಿವ ವೈದ್ಯರೇ ಏನು ಮಾಡುತ್ತಿದ್ದೀರಿ? ಕಾಫಿನಾಡಲ್ಲಿ ಅಪರೂಪದ ರಕ್ತ ಕನ್ನಡಿ ಹಾವು ಪತ್ತೆ: ಉರಗ ಸಂತತಿಯಲ್ಲೇ ಮೋಸ್ಟ್ ಡೇಂಜರಸ್… ಮಹಿಳೆಯರ, ಯುವತಿಯರ ಬಗ್ಗೆ ಅಸಭ್ಯ ಪದ, ಅಶ್ಲೀಲ ಚಿತ್ರ: ಕೊನೆಗೂ ಸೆರೆ ಸಿಕ್ಕ… ಬೆಳ್ತಂಗಡಿ: ಗೃಹಿಣಿಯ ಬೆದರಿಸಿ ಕತ್ತಿನಿಂದ ಕರಿಮಣಿ ಸರ ಎಳೆದು ಆರೋಪಿ ಪರಾರಿ ಬೆಳಗಾವಿ ಅಧಿವೇಶನ: ಜಲಜೀವನ ಮಿಷನ್ ಅನುಷ್ಠಾನ ಕುರಿತು ಸರಕಾರದ ಗಮನ ಸೆಳೆದ ಶಾಸಕ… ಬೆಳಗಾವಿ ಅಧಿವೇಶನ: ಸಂಸತ್ತಿಗೆ ಆಯ್ಕೆಯಾದ ಇಬ್ಬರು ಮಾಜಿ ಸಿಎಂಗಳಿಗೂ ಆಸನದ ವ್ಯವಸ್ಥೆ!

ಇತ್ತೀಚಿನ ಸುದ್ದಿ

ಅರಣ್ಯ ಇಲಾಖೆ ನೋಟಿಸ್: ಭೂಮಿಯ ಹಕ್ಕು ಉಳಿಸಿಕೊಳ್ಳಲು ರೈತರ ಸಭೆಯಲ್ಲಿ ತೀರ್ಮಾನ

11/12/2024, 12:38

ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ

info.reporterkarnataka@gmail.com

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮುತ್ತಕಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರ ಸಭೆಯಲ್ಲಿ ರೈತರು ಕಾನೂನು ಬದ್ದವಾಗಿ ಭೂಮಿಯ ಹಕ್ಕು ಪಡೆದು ಮೂರು ನಾಲ್ಕು ದಶಕಗಳಿಂದ ಅನುಭವ ದಲ್ಲಿರುವ ಭೂಮಿಗೆ ಅರಣ್ಯ ಇಲಾಖೆಯವರು ನೋಟೀಸ್ ಜಾರಿ ಮಾಡಿರುವುದನ್ನು ವಿರೋಧಿಸಿ ಮುತ್ತಕಪಲ್ಲಿ,
ಪಾತೂರು,ಕಾರಂಗೀ, ಗಂಗನತ್ತ, ಎಮ್ಮನೂರು, ಚನ್ನಯ್ಯಗಾರಿಪಲ್ಲಿ ರೈತರು ತಮ್ಮ ಭೂಮಿಯ ಹಕ್ಕು ಉಳಿಸಿಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಪಿ.ಆರ್.ಸೂರಿ ಮಾತನಾಡಿ ಕೋಲಾರ ಜಿಲ್ಲೆಯ ಅರಣ್ಯ ಅಧಿಕಾರಿಗಳು ರಾಜ್ಯ ಸರ್ಕಾರದ ಇತ್ತೀಚಿನ ಆದೇಶಗಳಾದ ಜಂಟಿ ಸರ್ವೆ ಆಗುವ ತನಕ ಮತ್ತು ಮೂರು ಎಕರೆ ಒಳಗಿನ ಒತ್ತುವರಿ ರೈತರಿಗೆ ಯಾವುದೇ ಕಾರಣಕ್ಕೂ ತೆರುವು ಮಾಡಬಾರದನ್ನುವ ಕಾನೂನನ್ನು ಉಲ್ಲಂಘನೆ ಮಾಡಿ ರೈತರಿಗೆ ನೋಟೀಸ್ ಜಾರಿ ಮಾಡಿರುವುದನ್ನು ಖಂಡಿಸಿದರು.
ಇಲ್ಲಿನ ರೈತರು ಅರಣ್ಯಕ್ಕೆ ಹೋಗಿಲ್ಲ. ಬದಲಿಗೆ ಅರಣ್ಯ ಇಲಾಖೆಯವರೆ ಕಾನೂನು ಬಾಹಿರವಾಗಿ ನಕ್ಷೆ ತಯಾರಿಸಿಕೊಂಡು ರೈತರಿಗೆ ತೊಂದರೆ ಕೊಡುತ್ತಿದ್ದಾರೆ. ರೈತರ ಭೂಮಿ ಮೊದಲಿಗೆ ಸರ್ಕಾರದ ಕಂದಾಯ ಭೂಮಿ ಗೋಮಾಳವಾಗಿದ್ದರಿಂದ ಸರ್ಕಾರ ಕಾನೂನು ಬದ್ದವಾಗಿ ರೈತರ ಹೆಸರಿಗೆ ಮಂಜೂರು ಮಾಡಲಾಗಿದೆ. ಅರಣ್ಯ ಇಲಾಖೆಯವರ ದೌರ್ಜನ್ಯಕ್ಕೆ ರೈತರು ಹೆದರಬಾರದು ಸಂಘಟಿತ ಹೋರಾಟ ನಡೆಸಬೇಕೆಂದು ತಿಳಿಸಿದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾತಕೋಟ ನವೀನ್ ಕುಮಾರ್ ಮಾತನಾಡಿ ಇಡೀ ರಾಜ್ಯದಲ್ಲಿ ಅರಣ್ಯ ಭೂಮಿ, ಬಗರ್ ಹುಕ್ಕುಂ ಸಾಗುವಳಿ ಸಕ್ರಮ, ರೈತವಿರೋಧಿ ಭೂಸ್ವಾಧೀನ ಪ್ರಶ್ನೆಗಳ ಪರಿಹಾರಕ್ಕೆ ಮುಂದಿನ ತಿಂಗಳು ಬೆಂಗಳೂರಿಗೆ ರೈತರ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಹೇಳಿದರು.
ಭೂಮಿ ಹೋರಾಟ ಸಮಿತಿ ಕಾರ್ಯದರ್ಶಿ ಸೈಯದ್ ಫಾರೂಖ್ ಮಾತನಾಡಿ ಜಿಲ್ಲೆಯಲ್ಲಿ ಭೂಮಿ ಕಳೆದುಕೊಂಡ ಸಾವಿರಾರು ರೈತರ ಬಗ್ಗೆ ಎಂದು ಬಾಯಿ ಬಿಚ್ಚಿದ ರೈತ ನಾಯಕ ರೊಬ್ಬರು ಅರಣ್ಯ ಇಲಾಖೆ ಪರ ವಕಾಲತ್ತು ವಹಿಸಿ ಮಾತನಾಡುವುದು ರೈತ ಕುಲಕ್ಕೆ ಬಗೆದ ದ್ರೋಹವಾಗಿದೆ ಎಂದರು.
ಮುಖಂಡರಾದ ವೆಂಕಟ್ರಾಮ ರೆಡ್ಡಿ, ಚಂದ್ರಶೇಖರ ರೆಡ್ಡಿ, ಶ್ರೀನಿವಾಸರೆಡ್ಡಿ, ಮುತ್ತಕಪಲ್ಲಿ ಹನುಮಪ್ಪ, ಯಮ್ಮನೂರು ನಾಗರಾಜ್, ರಾಮಕೃಷ್ಣಪ್ಪ, ಮುಜಾಮಿಲ್, ಗಂಗನತ್ತ ಪೆದ್ದನಾರಾಯಣಪ್ಪ,ಪೆದ್ದಣ್ಣ ಮುಂತಾದವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು