ಇತ್ತೀಚಿನ ಸುದ್ದಿ
ಆರದಿರಲಿ ಬದುಕು ಆರಾಧನಾ ಸಂಸ್ಥೆಯ ಅಕ್ಟೋಬರ್ ತಿಂಗಳ ಸಹಾಯ ಧನ ಹಸ್ತಾಂತರ
06/11/2021, 11:57

ಮೂಡುಬಿದರೆ(reporterkarnataka.com):
ಜನಸೇವೆಯೇ ಜನಾರ್ಧನ ಸೇವೆ ಎಂಬಂತೆ ಆರದಿರಲಿ ಬದುಕು ಆರಾಧನ ಸಂಸ್ಥೆ ಯು ಪ್ರತಿ ತಿಂಗಳು ಸಹಾಯ ನೀಡುತ್ತಾ ಬಂದಿದ್ದು,
ಅಕ್ಟೋಬರ್ ತಿಂಗಳ ಸಹಾಯವನ್ನು ನಗರದ ಬೊಂದೇಲ್ ಕೃಷ್ಣ ನಗರ ಭಜನಾ ಮಂದಿರ ದ ಸಮೀಪದ ಜಾನ್ ಕೊರ್ಡೆರೋ ಅವರಿಗೆ ನೀಡಲಾಯಿತು.
ಜಾನ್ ಕೊರ್ಡೆರೋ ಅವರು ಅಪಘಾತದಲ್ಲಿ ಕೈ ಹಾಗು ಕಾಲು ಕಳೆದು ಕೊಂಡು ತೇಜಸ್ವಿನಿ ಆಸ್ಪತ್ರೆ ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಡು ಬಡತನದ ಅವರ ಪರಿಸ್ಥಿತಿ ಯನ್ನು ಅರಿತು ಸಹಾಯ ನೀಡಿ ಸಹಕರಿಸಿದೆ. ಈ ಸಂದರ್ಭದಲ್ಲಿ ಸಂಸ್ಥೆ ಯ ಸದಸ್ಯರಾದ ಪ್ರಸಾದ್ ನಾಯಕ್ ಉಡುಪಿ, ದೇವಿ ಪ್ರಸಾದ್ ಶೆಟ್ಟಿ, ಪದ್ಮಶ್ರೀ ಭಟ್, ನವೀನ್
ಪುತ್ತೂರು, ವಿವೇಕ್ ಪ್ರಭು, ಅಭಿಷೇಕ್ ಶೆಟ್ಟಿ, ಐಕಳ, ಶ್ರೀನಿವಾಸ ಬಜಪೆ, ನಾಗರಾಜ ಶೆಟ್ಟಿ ಅಂಬೂರಿ ಉಪಸ್ಥಿತರಿದ್ದರು.