ಇತ್ತೀಚಿನ ಸುದ್ದಿ
ಅರಬ್ಬಿ ಸಮುದ್ರದತ್ತ ಮೋಡ; ನೈಋತ್ಯ ಮುಂಗಾರು ಮತ್ತೆ ವಿಳಂಬ ಸಾಧ್ಯತೆ: ಹವಾಮಾನ ಇಲಾಖೆ
27/05/2022, 20:19
ತಿರುವನಂತಪುರ(reporterkarnataka.com): ನೈಋತ್ಯ ಮುಂಗಾರು ವಿಳಂಬವಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಅಂಡಮಾನ್‌ಗೆ ತಲುಪಿರುವ ಮಾನ್ಸೂನ್ ನೈಋತ್ಯ ದಿಕ್ಕಿನಲ್ಲಿ ಅರಬ್ಬಿ ಸಮುದ್ರದ ಕಡೆಗೆ ಚಲಿಸುವ ಸಾಧ್ಯತೆಯಿದೆ. ಮಾರುತಗಳು ಸ್ಥಿರತೆ ಮತ್ತು ವೇಗವನ್ನು ಪಡೆದರೆ ಮಾತ್ರ ಕೇರಳಕ್ಕೆ ಮಾನ್ಸೂನ್ ಆಗಮನದ ಪರಿಸ್ಥಿತಿಗಳು ಅನುಕೂಲಕರವಾಗುತ್ತವೆ ಎಂದು ಹವಾಮಾನ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ
ನೈಋತ್ಯ ಮತ್ತು ಆಗ್ನೇಯ ಅರೇಬಿಯನ್ ಸಮುದ್ರ, ಮಾಲ್ಡೀವ್ಸ್, ಕೊಮೊರಿನ್, ದಕ್ಷಿಣ, ಪೂರ್ವ-ಮಧ್ಯ ಮತ್ತು ಬಂಗಾಳ ಕೊಲ್ಲಿಯ ಈಶಾನ್ಯ ಭಾಗಗಳಲ್ಲಿ ನೈಋತ್ಯ ಮಾನ್ಸೂನ್ ಮತ್ತಷ್ಟು ಮುನ್ನಡೆಯಲು ಮುಂದಿನ 48 ಗಂಟೆಗಳಲ್ಲಿ ಪರಿಸ್ಥಿತಿಗಳು ಅನುಕೂಲಕರವಾಗಿವೆ.
ಹವಾಮಾನ ಇಲಾಖೆ ಬಿಡುಗಡೆ ಮಾಡಿರುವ ಬುಲೆಟಿನ್‌ನಲ್ಲಿ ತಿಳಿಸಿದೆ.
ಜೂನ್ ತಿಂಗಳಿನಿಂದ ಸೆಪ್ಟೆಂಬರ್‌ವರೆಗೆ ಮಾನ್ಸೂನ್ ಅವಧಿಯಲ್ಲಿ ದೇಶಾದ್ಯಂತ ಸಾಮಾನ್ಯ ಮಳೆಯಾಗುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಶೇಕಡಾ 75ರಷ್ಟು ಮಳೆಯಾಗುವ ನಿರೀಕ್ಷೆ ಇದೆ