ಇತ್ತೀಚಿನ ಸುದ್ದಿ
ಏಪ್ರಿಲ್ 27ರಂದು ಧರ್ಮಸ್ಥಳದಲ್ಲಿ 50ನೇ ವರ್ಷದ ಉಚಿತ ಸಾಮೂಹಿಕ ವಿವಾಹ
25/01/2022, 19:15
ಧರ್ಮಸ್ಥಳ(reporterkarnataka.com): ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 50ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಏಪ್ರಿಲ್ 27ರಂದು ನಡೆಯಲಿದೆ.
ವರದಕ್ಷಿಣೆ ಮತ್ತು ದುಂದುವೆಚ್ಚವನ್ನು ತಡೆಯುವ ನಿಟ್ಟಿನಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆ 1972 ರಲ್ಲಿ ಉಚಿತ ಸಾಮೂಹಿಕ ವಿವಾಹ ಆರಂಭಿಸಿದ್ದರು.
ಇದೀಗ ಪ್ರತಿ ವರ್ಷದಂತೆ ಈ ವರ್ಷ ಏಪ್ರಿಲ್ 27ಕ್ಕೆ ನಡೆಯಲಿದೆ.
ಏಪ್ರಿಲ್ 15ರೊಳಗೆ ಮಾಹಿತಿ ಮತ್ತು ಸೂಕ್ತ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಬೇಕು. ವರನಿಗೆ ಧೋತಿ , ಶಾಲು ಮತ್ತು ವಧುವಿಗೆ ಸೀರೆ ,ರವಕೆ ಕಣ ಹಾಗೂ ಮಂಗಳಸೂತ್ರ, ಹೂವಿನ ಹಾರ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ:08258-266644 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು.