ಇತ್ತೀಚಿನ ಸುದ್ದಿ
ಏ.8: ಡಾ.ಪ್ರಭಾಕರ್ ನೀರ್‌ಮಾರ್ಗ ಅವರ ಕಾದಂಬರಿ ’ಕಣ್ಮಣಿ’ ಬಿಡುಗಡೆ
06/04/2022, 20:38

ಮಂಗಳೂರು(reporterkarnataka.com) : ಹಿರಿಯ ಸಾಹಿತಿ ಡಾ.ಪ್ರಭಾಕರ್ ನೀರ್‌ಮಾರ್ಗ ಅವರ 27ನೇ ಕೃತಿ ’ಕಣ್ಮಣಿ’ ಕಾದಂಬರಿಯು ಏ.8 ರಂದು ಬಿಡುಗಡೆಗೊಳ್ಳಲಿದೆ.
ನಗರದ ಬಂಟ್ಸ್ ಹಾಸ್ಟೇಲ್ ಸಮೀಪದ ಮ್ಯಾಪ್ಸ್ ಕಾಲೇಜಿನಲ್ಲಿ ತುಳು ಪರಿಷತ್ ವತಿಯಿಂದ ಶುಕ್ರವಾರ ಅಪರಾಹ್ನ 3.೦೦ ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಮಂಗಳೂರು ವಿ.ವಿ .ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಉದಯ ಬಾರ್ಕೂರ್ ಅವರು ಕೃತಿ ಬಿಡುಗಡೆ ಮಾಡುವರು.
ತುಳು ಪರಿಷತ್ ಗೌರವ ಅಧ್ಯಕ್ಷ ಸ್ವರ್ಣ ಸುಂದರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಮ್ಯಾಪ್ಸ್ ಕಾಲೇಜು ಅಧ್ಯಕ್ಷ ದಿನೇಶ್ ಕುಮಾರ್ ಆಳ್ವಾ ಹಾಗೂ ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಉಪಾಧ್ಯಕ್ಷೆ ವಿಜಯಲಕ್ಷ್ಮಿ ಬಿ.ಶೆಟ್ಟಿ ಅವರು ಅತಿಥಿಗಳಾಗಿ ಭಾಗವಹಿಸುವರು. ಮಂಗಳೂರು ವಿ.ವಿ.ಕನ್ನಡ ವಿಭಾಗದ ಸಂಶೋಧನಾ ಸಹಾಯಕ ಚೇತನ್ ಮುಂಡಾಜೆ ಅವರು ಕೃತಿ ಪರಿಚಯ ಮಾಡುವರು ಎಂದು ತುಳು ಪರಿಷತ್ ಪ್ರಧಾನ ಕಾರ್ಯದರ್ಶಿ ಬೆನೆಟ್ ಜಿ. ಅಮನ್ನ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.