ಇತ್ತೀಚಿನ ಸುದ್ದಿ
ಅಪಘಾತ: ಖ್ಯಾತ ನಟ ಅರವಿಂದ ಬೋಳಾರ್ ಗಾಯ; ಆಸ್ಪತ್ರೆಗೆ ದಾಖಲು
30/01/2023, 19:18

ಮಂಗಳೂರು(reporterkarnataka.com): ನಗರದ ಪಂಪ್ ವೆಲ್ ಬಳಿ ನಡೆದ ಅಪಘಾತದಲ್ಲಿ ಖ್ಯಾತ
ಚಿತ್ರನಟ,ರಂಗಭೂಮಿ ಹಾಸ್ಯ ಕಲಾವಿದ ಅರವಿಂದ ಬೋಳಾರ್ ಗಾಯಗೊಂಡಿದ್ದಾರೆ.
ಅವರು ಸಂಚರಿಸುತ್ತಿದ್ದ ಹೊಂಡಾ ಆಕ್ಟಿವ್ ಸ್ಕಿಡ್ ಆದ ಪರಿಣಾಮ ಈ ಅಪಘಾತ ನಡೆದಿದೆ. ಗಾಯಗೊಂಡ ಅರವಿಂದ ಬೋಳಾರ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.