ಇತ್ತೀಚಿನ ಸುದ್ದಿ
ಅನುಮತಿ ಪಡೆಯದೆ ವಿಜಯೋತ್ಸವ: ಪುತ್ತಿಲ ಪರಿವಾರ ವಿರುದ್ಧ ಶಾಂತಿಭಂಗ ಪ್ರಕರಣ ದಾಖಲು
27/07/2023, 21:34
ಪುತ್ತೂರು(reporterkarnataka.com): ಪೊಲೀಸ್ ಅನುಮತಿ ಪಡೆಯದೆ ಸಾರ್ವಜನಿಕವಾಗಿ ವಿಜಯೋತ್ಸವ ಆಚರಿಸಿದ ಹಿನ್ನೆಲೆಯಲ್ಲಿ ಪುತ್ತಿಲ ಪರಿವಾರದ ಸಂಘಟನೆಯ ವಿರುದ್ಧ ಶಾಂತಿಭಂಗ ಪ್ರಕರಣ ದಾಖಲಿಸಲಾಗಿದೆ.
ಆರ್ಯಾಪು ಗ್ರಾಪಂ 2ನೇ ವಾರ್ಡ್ ಗೆ ನಡೆದ ಉಪ ಚುನಾವಣೆಯಲ್ಲಿ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿ ಸುಬ್ರಹ್ಮಣ್ಯ ಬಲ್ಯಾಯ ಗೆಲುವು ಸಾಧಿಸಿದ್ದರು. ಈ ಹಿನ್ನೆಲೆಯಲ್ಲಿ ಪುತ್ತೂರು ಮಿನಿ ವಿಧಾನಸೌಧದಿಂದ ಮುಕ್ರಂಪಾಡಿವರೆಗೆ ವಿಜಯೋತ್ಸವ ಮೆರವಣಿಗೆ ನಡೆಸಲಾಗಿತ್ತು. ವಿಜಯೋತ್ಸವದಲ್ಲಿ ಡಿಜೆ ಬಳಸಲಾಗಿತ್ತು. ಪೂರ್ವಾನುಮತಿ ಇಲ್ಲದೆ ವಿಜಯೋತ್ಸವ ನಡೆಸಿದ ಕಾರಣ ಪುತ್ತೂರು ನಗರ ಠಾಣೆಯಲ್ಲಿ ಶಾಂತಿಭಂಗ ಪ್ರಕರಣ ದಾಖಲಿಸಲಾಗಿದೆ.