7:25 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಾಂಗ್ಲಾದ ಹಿಂದುಗಳಿಗೆ ನ್ಯಾಯ ದೊರಕಿಸಿ: ಕುಂದಾಪುರ ಬಿಜೆಪಿ ಪ್ರತಿಭಟನೆಯಲ್ಲಿ ಆಗ್ರಹ

24/10/2021, 09:29

ಕುಂದಾಪುರ(reporterkarnataka.com): ನಾವು ಕೊಟ್ಟ ಭಿಕ್ಷೆ ಜಾಸ್ತಿಯಾಗಿದೆ. ಈ ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಿರಂತರ ಹಲ್ಲೆ, ಅತ್ಯಾಚಾರಗಳು ನಡೆಯುತ್ತಿದೆ ಎಂದು ಬಿಜೆಪಿ ಕ್ಷೇತ್ರಾಧ್ಯಕ್ಷ ಶಂಕರ್ ಅಂಕದಕಟ್ಟೆ ಹೇಳಿದರು.

ಶನಿವಾರ ಯುವ ಬ್ರಿಗೇಡ್ ಕುಂದಾಪುರ ವತಿಯಿಂದ ನಡೆದ ಪಂಜಿನ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನವರಾತ್ರಿಯ ದುರ್ಗಾ ಪೂಜೆಯ ದಿನದಿಂದ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಹಲ್ಲೆ, ಹಿಂದು ಮಂದಿರಗಳನ್ನು ಧ್ವಂಸ ಮಾಡಿದ್ದಾರೆ. ಎಲ್ಲೆಲ್ಲಿ ಹಿಂದುಗಳ ಮನೆ ಇದೆಯೋ ಅಲ್ಲೆಲ್ಲಾ ಇಸ್ಲಾಂ ಜಿಹಾದಿಗಳು ಮನೆಗೆ ನುಗ್ಗಿ ಹಿಂದು ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡಿ ಮನೆಗಳನ್ನು ಧ್ವಂಸ ಮಾಡಿದ್ದಾರೆ‌. ಆ ದೇಶದ ಹಿಂದುಗಳಿಗೆ ಸಾಂತ್ವಾನ ಹೇಳಲು ಭಾರತದಲ್ಲಿ ಪ್ರತಿಭಟನೆ ಹಾಗೂ ಪಂಜಿನ ಮೆರವಣಿಗೆಯನ್ನು ನಡೆಸುತ್ತಿದ್ದೇವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಾಂಗ್ಲಾದೇಶದ ಹಿಂದುಗಳಿಗೆ ನ್ಯಾಯ ದೊರಬೇಕು ಎಂದು ಆಗ್ರಹಿಸಿದರು.


ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ಪ್ರಭಾಕರ್, ಸಂತೋಷ್ ಶೆಟ್ಟಿ ಜಿಕೆ ಗಿರೀಶ್, ಭಜರಂಗದಳ ಮುಖಂಡ ಗಿರೀಶ್ ಕುಂದಾಪುರ, ಶೇಖರ್ ಪೂಜಾರಿ, ರತ್ನಾಕರ್ ಕುಂದಾಪುರ, ರಾಜೇಶ್ ಕಡಿಗೆ ಮನೆ ಪ್ರದೀಪ್ ಬಸ್ರೂರು, ನಿರಂಜನ್, ಸತೀಶ್ ಶೆಟ್ಟಿ, ಸುನಿಲ್ ಕುಮಾರ್,ಸುರೇಂದ್ರ ಸಂಗಮ್, ಕರಣ್ ಉಪ್ಪಿನಕುದ್ರು, ಸತೀಶ್ ಶೆಟ್ಟಿ ಉಪಸ್ಥಿತರಿದ್ದರು.

ನಗರದ ಶಾಸ್ತ್ರಿ ಸರ್ಕಲ್ ನಿಂದ ಪ್ರಾರಂಭವಾದ ಪಂಜಿನ ಮೆರವಣೆಗೆ ನಗರದಾದ್ಯಂತ ಸಂಚರಿಸಿ ಶಾಸ್ತ್ರಿ ವೃತ್ತದಲ್ಲಿ ಕೊನೆಗೊಂಡಿತು

ಇತ್ತೀಚಿನ ಸುದ್ದಿ

ಜಾಹೀರಾತು