ಇತ್ತೀಚಿನ ಸುದ್ದಿ
ಅಂಕಲಿ ಮಠದ ಜಾತ್ರೋತ್ಸವ ರದ್ದು: ಮನೆಯಲ್ಲೇ ಸಂಭ್ರಮ ಆಚರಿಸಿಕೊಳ್ಳಲು ವೀರಭದ್ರ ಮಹಾಸ್ವಾಮೀಜಿ ಕರೆ
31/05/2021, 18:04
ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ
info.reporterkarnataka@gmail.com
ರಾಯಚೂರು ಜಿಲ್ಲೆಯ ಸುಕ್ಷೇತ್ರ ಅಂಕಲಿ ಮಠದ ಜಾತ್ರೆ ಪ್ರತಿ ವರ್ಷದಂತೆ ಒಂದು ಮತ್ತು ಎರಡನೇ ತಾರೀಖಿನಂದು ಬಹಳ ವಿಜ್ರಂಭಣೆಯಿಂದ ನಡೆಯಬೇಕಿತ್ತು. ಆದರೆ ಕೊರೊನಾ ಹಿನ್ನೆಲೆಯಲ್ಲಿ
ಈ ಬಾರಿ ಜಾತ್ರೆಯನ್ನು ರದ್ದು ಮಾಡಲಾಗಿದೆ. ಭಕ್ತಾದಿಗಳು ಮನೆಯಲ್ಲೇ ಆಚರಿಸುವಂತೆ ಮಹಾ ಸ್ವಾಮೀಜಿ ಮನವಿ ಮಾಡಿದ್ದಾರೆ.
ಕೋವಿಡ್ 19 ತಡೆಗಟ್ಟಲು ಸಾಮಾಜಿಕ ಅಂತರವನ್ನು ಕಾಪಾಡುವ ನಿಟ್ಟಿನಲ್ಲಿ ಮಹಾಸ್ವಾಮೀಜಿ ವೀರಭದ್ರ ಮಹಾ ಶಿವಾಚಾರ್ಯರು ಜಾತ್ರೆ ರದ್ದು ಮಾಡಲಾಗಿದೆ. ಭಕ್ತಾದಿಗಳು ಮನೆಯಲ್ಲಿ ದೇವರನ್ನು ನೆನೆದು ಪೂಜ್ಯರನ್ನು ಸ್ಮರಿಸಿ ಹಬ್ಬ ಆಚರಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.
ಕೊರೊನಾ ಕುರಿತು ಸರಕಾರದ ನಿಯಮಗಳನ್ನು ಪಾಲಿಸಬೇಕು, ಸಾಮಾಜಿಕ ಅಂತರ ಕಾಪಾಡುವುದರ ಜತೆ ಮುಖಕ್ಕೆ ಮಾಸ್ಕ್ ಧರಿಸಿ ನಿಮ್ಮ ಜೀವನವನ್ನು ರಕ್ಷಿಸಿಕೊಳ್ಳಿ ಎಂದು ಮಹಾಸ್ವಾಮೀಜಿ ಭಕ್ತ ಜನತೆಯಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.ಸುಕ್ಷೇತ್ರ ಅಂಕಲಿ ಮಠ ಕರ್ನಾಟಕದಲ್ಲಿ
ಬಹಳಷ್ಟು ಪ್ರಖ್ಯಾತಿ ಹೊಂದಿರುವ ಕ್ಷೇತ್ರವಾಗಿದೆ. ಪೂಜ್ಯ ನಿರುಪಾದಿ ಮಹಾಸ್ವಾಮಿಗಳು, ಅಡವಿ ಸಿದ್ದರು ಮಹಾಸ್ವಾಮಿಗಳು ಮಠಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು. ಪ್ರತಿವರ್ಷವೂ ಮಹಾರಾಷ್ಟ್ರ, ಆಂಧ್ರ ಹಾಗೂ ಹೊರ ದೇಶಗಳಿಂದ ಭಕ್ತರು ದೇವರ ಹಾಗೂ ಗುರುವಿನ ದರ್ಶನಕ್ಕೆ ಆಗಮಿಸುತ್ತಿದ್ದರು. ಆದರೆ ಈ ಬಾರಿ ಎಲ್ಲವೂ ಭಣಭ಼ಣ.