ಇತ್ತೀಚಿನ ಸುದ್ದಿ
Breaking | ಅಂಗನವಾಡಿ ಕಟ್ಟಡ ಕಳಪೆ ಕಾಮಗಾರಿ: ಎಸಿಬಿಗೆ ದೂರು ನೀಡಿದಾತನ ಮೇಲೆ ಹಲ್ಲೆ: ಗ್ರಾಪಂ ಸದಸ್ಯರ ತಂಡದಿಂದ ಕೃತ್ಯ ಆರೋಪ
05/09/2021, 19:11
ವಿಜಯನಗರ(reporterkarnataka.com):
ಜಿಲ್ಲೆಯ ಕೂಡ್ಲಿಗಿ ತಾಲೂಕು ಮಾಕನಡಕು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರಿಹಟ್ಟಿ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಅಂಗನವಾಡಿ ಕೇಂದ್ರ ಬಿ ಕಟ್ಟಡದ ನಿರ್ಮಾಣ ಕಾಮಗಾರಿ ಕಳಪೆಯಾಗಿದೆ ಎಂದು ಲೋಕಾಯುಕ್ತರಿಗೆ ದೂರು ನೀಡಿದ್ದ ಅಜ್ಜಪ್ಪ ಎಂಬವರ ಮೇಲೆ ಹಲ್ಲೆ ನಡೆಸಲಾಗಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಳಪೆ ಕಾಮಗಾರಿ ಬಗ್ಗೆ ಕುರಿಹಟ್ಟಿ ಗ್ರಾಮದ ಅಜ್ಜಪ್ಪ ಎಂಬುವರು ಕೆಲ ದಿನಗಳ ಹಿಂದೆ ಲೋಕಾಯುಕ್ತರಿಗೆ ಮತ್ತು ಎಸಿಬಿಯವರಿಗೆ ದೂರು ನೀಡಿ ತನಿಖೆಗೆ ಒತ್ತಾಯಿಸಿದ್ದರು. ಸ್ಥಳೀಯರಾದ ಅಜ್ಜಪ್ಪರವರ ದೂರಿನ ಮೇರೆಗೆ ಸ್ಥಳೀಯ ಮುಖಂಡರು ಮತ್ತು ದೂರುದಾರರ ಸಮಕ್ಷಮದಲ್ಲಿ ತಾಪಂ ಸಹಾಯಕ ನಿರ್ದೇಶಕರು ಸೆ 3ರಂದು ಸ್ಥಳ ಪರಿಶೀಲನೆ ನಡೆಸಿದ್ದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯೆ ಓಬಮ್ಮ ಮತ್ತು ಅವರ ಪತಿ ಪಾಪಣ್ಣ ಹಾಗೂ
ಇತರ ಕೆಲವರು ತನ್ನ ಮೇಲೆ ಮಾರಣಾಂತಿಕ ಹಲ್ಯೆ ನಡೆಸಿದ್ದಾರೆ ಎಂದು ದೂರುದಾರ ಅಜ್ಜಪ್ಪರವರು ತಿಳಿಸಿದ್ದಾರೆ.
ಈ ಸಂಬಂಧಿಸಿದಂತೆ ಅವರು ಕೂಡ್ಲಿಗಿ ಸಾರ್ವಜನಿಕ ಅಸ್ಫತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು, ಅವರು ದಾಳಿ ಮಾಡಿದವರ ವಿರುದ್ಧ ಆಸ್ಪತ್ರೆಗೆ ಬಂದ ಹೊಸಹಳ್ಳಿ ಪೊಲೀಸರಿಗೆ ಹೇಳಿಕೆ ನೀಡಿರುವುದಾಗಿ ಅವರು ತಿಳಿಸಿದ್ದಾರೆ.
ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಅವರು ಮಾಧ್ಯಮದ ಮೂಲಕ ಕೋರಿದ್ದಾರೆ. ತಮ್ಮ ಮೇಲೆ ಹಲ್ಲೆ ಮಾಡಿದ್ದ ಆರೋಪಿಗಳಿಂದ ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕು. ಆರೋಪಿಗಳನ್ನ ಬಂಧಿಸಬೇಕು ಹಾಗೂ ಗ್ರಾಪಂ ಸದಸ್ಯೆ ಹಾಗೂ ಅವರ ಪತಿ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ.
ರಾಜ್ಯ ಪಾಲರು, ಜಿಲ್ಲಾಧಿಕಾರಿಗಳು, ಜಿಲ್ಲಾಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿಗಳು ಅಧಿಕಾರ ದುರುಪಯೋಗಪಡಿಸಿಕೊಳ್ಳುತ್ತಿರುವ ಗ್ರಾಮ ಪಂಚಾಯಿತಿ ಸದಸ್ಯೆ ಓಬಮ್ಮಳ ಪತಿ ಪಾಪಣ್ಣ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಓಬಮ್ಮ ಅವರ ಸದಸ್ಯತ್ವ ರದ್ದುಗೊಳಿಸಬೇಕೆಂದು ಅಜ್ಜಪ್ಪ ಅವರು ರಾಜ್ಯಪಾಲರಲ್ಲಿ ಕೋರಿದ್ದಾರೆ.