ಇತ್ತೀಚಿನ ಸುದ್ದಿ
ಅನಾಥವಾದ ಕುದುರೆಮುಖ ಲೇಬರ್ ಕಾಲೋನಿಯ 60 ಕಾರ್ಮಿಕ ಕುಟುಂಬಗಳು!: ಕುಡಿಯಲು ನೀರೂ ಇಲ್ಲ, ಬೆಳಕಿಗೆ ಕರೆಂಟೂ ಇಲ್ಲ!!
08/08/2023, 15:20
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕುದುರೆಮುಖ ಲೆಬರ್ ಕಾಲೋನಿಗೆಯ 60 ಕಾರ್ಮಿಕ ಕುಟುಂಬಗಳು ತೀವ್ರ ಸಂಕಷ್ಟದಲ್ಲಿದ್ದು, ಅಧಿಕಾರಿಗಳ ಭೇಟಿ ನೀಡಿ ಕಾರ್ಮಿಕರ ನಾಯಿಪಾಡಿನ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ಕುಡಿಯೋ ನೀರು, ವಿದ್ಯುತ್ ಸೌಲಭ್ಯವಿಲ್ಲದೆ ಬಡ ಕಾರ್ಮಿಕ ಕುಟುಂಬಗಳು ಜೀವನ ನಡೆಸುತ್ತಿವೆ. ಕುದುರೆಮುಖ ಕಬ್ಬಿಣ ಕಾರ್ಖಾನೆ ಇದ್ದಾಗ ಕೂಲಿ ಮಾಡುತ್ತಿದ್ದ ಕಾರ್ಮಿಕರು
ಕಂಪನಿ ಮುಚ್ಚಿದ ಮೇಲೆ ಅಲ್ಲೇ ವಾಸವಾಗಿದ್ದಾರೆ. ಭಾರೀ ಮಳೆಯಿಂದ ಮನೆಗಳ ಗೋಡೆಗಳು ಬಿದ್ದು ಹೋಗಿವೆ. ಅವರನ್ನೆಲ್ಲ ಕಳಸಕ್ಕೆ ಸ್ಥಳಾಂತರ ಮಾಡಲು ಈಗಾಗಲೇ ಜಾಗ ನೋಡಿದ್ದರೂ ಸ್ಥಳಾಂತರ ಪ್ರಕ್ರಿಯೆ ಇನ್ನೂ ನಡೆದಿಲ್ಲ. ಕಾರ್ಮಿಕ ಕುಟುಂಬಗಳು
ಯಾವುದೇ ಮೂಲಭೂತ ಸೌಕರ್ಯವಿಲ್ಲದೆ ಬದುಕುತ್ತಿವೆ.
ತಾಪಂ ಇಓ, ಪಟ್ಟಣ ಪಂಚಾಯ್ತಿ ಚೀಫ್ ಆಫೀಸರ್, ಕಂದಾಯ ಇಲಾಖೆಯ ಅಧಿಕಾರಿಗಳು, ಸಂಸೆ ಹಾಗೂ ಕಳಸ ಗ್ರಾಪಂ ಪಿಡಿಓ ಭೇಟಿ ನೀಡಿದ್ದಾರೆ.
3-4 ದಿನದಲ್ಲಿ ನೀರು, ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಆದೇಶ ನೀಡಿದ್ದಾರೆ. ಶೀಘ್ರದಲ್ಲೇ ಸ್ಥಳಾಂತರ ಮಾಡುವ ಭರವಸೆಯನ್ನೂ ಅಧಿಕಾರಿಗಳು ನೀಡಿದ್ದಾರೆ.