ಇತ್ತೀಚಿನ ಸುದ್ದಿ
ಅಮ್ಮನಕೇರಿ: ಶಾಸಕ ಸಂತೋಷ ಲಾಡ್ ರಿಂದ ಗ್ರಾಮ ದೀಪೋತ್ಸವ; ಬಡವರ ಮನೆಗೆ ಸುಣ್ಣಬಣ್ಣ
05/11/2021, 13:25

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ
info.reporterkarnataka@gmail.com
ಜಿಲ್ಲೆಯ ಕೂಡ್ಲಿಗಿ ತಾಲೂಕು ಅಮ್ಮನಕೇರಿ ಗ್ರಾಮದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಮಾಜಿ ಸಚಿವ ಹಾಗೂ ಶಾಸಕ ಸಂತೋಷ ಲಾಡ್
ಅವರು ಗ್ರಾಮಸ್ಥರು ಹಾಗೂ ಕಾಂಗ್ರೆಸ್ ಕಾರ್ಯಕರ್ತರೊಡಗೂಡಿ “ಗ್ರಾಮ ದೀಪೋತ್ಸವ” ಆಚರಿಸಿದರು.
ಅಮ್ಮನಕೇರಿ ಶ್ರೀಬಸವೇಶ್ವರ ದೇವಸ್ಥಾನ ಹಾಗೂ ಶ್ರೀಕಣವಿಬಸವೇಶ್ವರ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದರು. ನಂತರ ಸಂತೋಷ ಲಾಡ್ ರವರು ಕಾರ್ಯಕರ್ತರೊಂದಿಗೆ ಅಮ್ಮನಕೇರಿ ಗ್ರಾಮದ ದಲಿತ ಹಾಗೂ ಕಡು ಬಡವರ ಮನೆಗಳಿಗೆ ಬಣ್ಣ ಹಚ್ಚಿದರು. ಗ್ರಾಮದ ದೇವಸ್ಥಾನಗಳಿಗೆ ಸುಣ್ಣ ಬಣ್ಣ ಬಳಿಸಿದರು ಮತ್ತು ಗ್ರಾಮದಲ್ಲಿ, ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ದೊರಕಿಸುವಂತೆ ಸ್ಥಳೀಯ ಆಡಳಿತಕ್ಕೆ ಅವರು ತಾಕೀತು ಮಾಡಿದರು. ಅವರೊಂದಿಗೆ ಶಾಸಕ ತುಕಾರಾಂ ಹಾಗೂ ಲೋಕೇಶ ನಾಯಕ್ ಅವರು ಸಾಥ್ ನೀಡಿದರು. ಕಾಂಗ್ರೇಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಹಾಗೂ ಜನಪ್ರತಿನಿಧಿಗಳು ಗ್ರಾಮಸ್ಥರು ಇದ್ದರು.