2:23 AM Tuesday16 - December 2025
ಬ್ರೇಕಿಂಗ್ ನ್ಯೂಸ್
1600 ಪಿ.ಎಸ್.ಐ ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ: ಗೃಹ ಸಚಿವ ಡಾ.ಜಿ.ಪರಮೇಶ್ವರ ಸಂಸತ್ ಅಧಿವೇಶನ | ರಾಜ್ಯಸಭೆಯಲ್ಲಿ ವೋಟ್‌ ಚೋರಿ ಚರ್ಚೆ; ಕಾಂಗ್ರೆಸ್‌ ವಿರುದ್ಧ ಗುಡುಗಿದ… Belagavi | ಶ್ಯಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸದನದಲ್ಲಿ ಮುಖ್ಯಮಂತ್ರಿ ಸಂತಾಪ ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಮಹಿಳೆಯರು ಅನ್ಯಾಯದ ವಿರುದ್ದ ಕಿತ್ತೂರು ಚೆನ್ನಮ್ಮ, ದುರ್ಗಾದೇವಿ ಆಗಬೇಕು: ಮಾಜಿ ಸಿಎಂ ಬಸವರಾಜ… ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು

ಇತ್ತೀಚಿನ ಸುದ್ದಿ

ಅಮೃತ ಮಹೋತ್ಸವ: ಮರಿಯ ನಿಲಯದ ವಿಶೇಷ ಸಾಮರ್ಥ್ಯವುಳ್ಳ ನಿವಾಸಿಗಳಿಗೆ ಸೋಲಾಪುರ ಚಾದರ, ಸಿಹಿ ತಿಂಡಿ ವಿತರಣೆ

21/08/2022, 19:49

ಮಂಗಳೂರು(reporterkarnataka.com):ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಸೊಸೈಟಿ, ವಲೆನ್ಸಿಯಾ ಶಾಖೆಯ ವತಿಯಿಂದ ಸ್ವಾತಂತ್ರ್ಯ ದಿವಸದ ಅಮೃತ ಮಹೋತ್ಸವದ ಅಂಗವಾಗಿ ಇನ್ಫೆಂಟ್ ಮೇರಿ ಕಾನ್ವೆಂಟಿನ ಮರಿಯ ನಿಲಯದ ವಿಶೇಷ ಸಾಮರ್ಥ್ಯವುಳ್ಳ ನಿವಾಸಿಗಳಿಗೆ ಆಗಸ್ಟ್ 17ರಂದು ಆಯೋಜಿಸಿದ ಕಾರ್ಯಕ್ರಮದಲ್ಲಿ ಸೋಲಾಪುರ ಚಾದರ ಮತ್ತು ಸಿಹಿ ತಿಂಡಿ ವಿತರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿ ಸೋಜ ಮಾತನಾಡಿ, “ಸಮಾಜ ಸೇವೆ ಮಾಡುವಲ್ಲಿ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಸೊಸೈಟಿ ಯಶಸ್ವಿಯಾಗಿದೆ”, ಗಳಿಸಿದ್ದಲ್ಲಿ ಒಂದು ಪಾಲನ್ನು ಸಮಾಜಕ್ಕೆ ನೀಡಬೇಕು ಎನ್ನುವ ವ್ಯವಸ್ಥಾಪಕ ನಿರ್ದೇಶಕರಾದ ಜಾರ್ಜ್ ಫೆರ್ನಾಂಡಿಸ್‌ರವರ ಕಲ್ಪನೆಯನ್ನು ಶ್ಲಾಘಿಸಿದರು. 

ಅತಿಥಿ ನಿವೃತ್ತ ಹಿರಿಯ ಶ್ರೇಣಿ ಅಧಿಕಾರಿ ಸಿಪ್ರಿಯನ್ ಪಿಂಟೋ ಅವರು ಮಾತನಾಡಿ, ಮುಂದೆಯೂ ಸಹಕಾರಿಯಿಂದ ಹಲವಾರು ಸಮಾಜಮುಖಿ ಕಾರ್ಯಗಳು ನಡೆಯಲಿ ಎಂದು ಆಶಿಸಿದರು. 

ಇನ್ಫೆಂಟ್ ಮೇರಿ ಕಾನ್ವೆಂಟಿನ ಸುಪೀರಿಯರ್ ಸಿ| ಸಿಲ್ವಿಯಾರವರು ಸಹಕಾರಿಯ ಬೆಳವಣಿಗೆಗೆ ಶುಭ ಹಾರೈಸಿದರು.  

ಅಭಿವೃದ್ಧಿ ವ್ಯವಸ್ಥಾಪಕರಾದ ಜೀವನ್ ಡಿ ಸೋಜ ಅವರು ಮಾತನಾಡುತ್ತಾ, ನಮ್ಮ ಸಹಕಾರಿ 9 ಜಿಲ್ಲೆಗಳಲ್ಲಿ, 111 ಶಾಖೆಗಳ ಮೂಲಕ ಕರ್ತವ್ಯ ನಿರ್ವಹಿಸಿದ್ದು ಇಂತಹ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ನಮಗೆಲ್ಲರಿಗೂ ಸಂತಸದ ವಿಚಾರ, ಇದಕ್ಕೆಲ್ಲಾ ಮೂಲ ಕಾರಣ ನಮ್ಮ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಜಾರ್ಜ್ ಫೆರ್ನಾಂಡಿಸ್‌ರವರು, ಅವರ ಸಹಕಾರವಿಲ್ಲದೆ ಸಂಸ್ಥೆ ಇಂತಹ ತೀರ್ಮಾನ ಕೈಗೊಳ್ಳಲು ಅಸಾಧ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 


ಶಾಖಾ ವ್ಯವಸ್ಥಾಪಕರಾದ ಪ್ರಜ್ವಲ್ ಜೆರೋಮ್ ಫ್ರೊಂಟೇರೊ, ಸಮಾಜ ಸೇವಕರಾದ ಆಸ್ಟನ್ ಡಿ ಕ್ಹುನಾ, ಹುಸೈನ್, ಹಬೀಬುಲ್ಲಾ ಹಾಗೂ ವಲೆನ್ಸಿಯಾ ಶಾಖೆಯ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮರಿಯ ನಿಲಯದ ನಿವಾಸಿಗಳು ಪ್ರಾರ್ಥನಾ ಗೀತೆಯನ್ನು ಹಾಡಿದರು. ದೀಪವನ್ನು ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಪೂರ್ಣಶ್ರೀ ಸ್ವಾಗತಿಸಿದರು.

ರೀಮಾ ಲೂವಿಸ್ ವಂದಿಸಿದರು. ಎಲ್ವಿಟಾ ರೀಮಾ ಕಾರ್ಯಕ್ರಮ ನಿರೂಪಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು