4:38 AM Saturday4 - October 2025
ಬ್ರೇಕಿಂಗ್ ನ್ಯೂಸ್
ಗ್ಯಾರಂಟಿ ಯೋಜನೆಗಳ ಯಶಸ್ಸು ಬಿಜೆಪಿಗರ ಆತಂಕಗೊಳಿಸಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ Kodagu | ಡಿವೈಎಸ್ಪಿ ಮೇಲೆ ಹಲ್ಲೆ ಪ್ರಕರಣ: ಆರೋಪಿಗೆ ಅ. 16 ರವರೆಗೆ… ಹೆತ್ತಬ್ಬೆಯನ್ನೇ ಕೊಂದ ಪಾಪಿ ಪುತ್ರ: ಅಡುಗೆ ಮಾಡಿಲ್ಲ ಎಂಬ ಕಾರಣಕ್ಕೆ ಹತ್ಯೆ; ಆರೋಪಿಯ… Kodagu | ಮಂಜಿನ ನಗರಿ ಮಡಿಕೇರಿಯಲ್ಲಿ ಜನೋತ್ಸವಕ್ಕೆ ಜನಜoಗುಳಿ: ದಶ ಮಂಟಪಗಳಿಂದ ಶೋಭಾ… Bangaluru | ವೈದ್ಯ ದಂಪತಿಯಿಂದ ಮನೆಯಲ್ಲೇ ನವದುರ್ಗೆಯರ ಆರಾಧನೆ: ಸಾಲು ಸಾಲು ದಸರಾ… ಮಡಿಕೇರಿ ದಸರಾ ಶೋಭಯಾತ್ರೆಗೆ ತೆರೆ: ದಶಮoಟಪಗಳ ತೀರ್ಪುಗಾರರ ವಿರುದ್ದ ಆಕ್ರೋಶ; ಪ್ರತಿಭಟನೆ ಮುಂದಿನ ವರ್ಷವೂ ನಾನೇ ದಸರಾ ಪುಷ್ಪಾರ್ಚನೆ ಮಾಡುತ್ತೇನೆ: ಸಿಎಂ ಸಿದ್ದರಾಮಯ್ಯ ಭರವಸೆಯ ನುಡಿ ಮೈಸೂರು ದಸರಾ: ಅರಮನೆ ಆವರಣದಲ್ಲಿ ಯದುವೀರ್ ಒಡೆಯರ್ ರಿಂದ ಶಮಿ ಪೂಜೆ ವಿಶ್ವ ವಿಖ್ಯಾತ ಮೈಸೂರು ದಸರಾ: ಜಂಬೂ ಸವಾರಿಗೆ ಗಜಪಡೆ ಸಜ್ಜು ಮೈಸೂರು ಅರಮನೆಗೆ ಬೆಳ್ಳಿ ರಥದಲ್ಲಿ ಹೊರಟ ಚಾಮುಂಡಿ ದೇವಿ: ಬಿಗಿ ಬಂದೋಬಸ್ತ್

ಇತ್ತೀಚಿನ ಸುದ್ದಿ

ಅಂಬೇಡ್ಕರ್ ಅವರನ್ನು ಒಂದು ಪಂಗಡಕ್ಕೆ ಸೀಮಿತಗೊಳಿಸುತ್ತಿರುವುದು ದುರದೃಷ್ಟಕರ: ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಸಚಿನ್ ಬಾನಳ್ಳಿ

14/01/2025, 21:22

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಕೆಲವು ಪ್ರತ್ಯೇಕವಾದಿ ಮನಸುಗಳು ಭಾಷಣ ಮಾಡುವ ನೆಪದಲ್ಲಿ ಡಾ.ಬಿ. ಆರ್. ಅಂಬೇಡ್ಕರ್ ಅವರನ್ನು ಒಂದು ವರ್ಗ ಪಂಗಡಕಕ್ಕೆ ಸೀಮಿತ ಗೊಳಿಸುತ್ತಿರುವುದು ದುರದೃಷ್ಟಕರ ಎಂದು ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಸಚಿನ್ ಬಾನಳ್ಳಿ ಹೇಳಿದ್ದಾರೆ.
ಅವರು ಹೇಳಿಕೆಯಲ್ಲಿ ತಿಳಿಸಿ ಕಳೆದ ವಾರ ಭೀಮ ಕೋರೆಗಾವ್ ವಿಜಯೋತ್ಸವವನ್ನು ಮೂಡಿಗೆರೆಯಲ್ಲಿ ಎಲ್ಲಾ ಜನಾಂಗ ಮತ್ತು ಪಕ್ಷದ ಪ್ರಮುಖರು ಸೇರಿಕೊಂಡು ವಿಜ್ರಂಭಣೆಯಿಂದ ಆಚರಿಸಲಾಗಿತ್ತು. ಯಾವುದೇ ಅಹಿತಕರ ಘಟನೆಗಳು ನಡೆದಂತೆ ಮುನ್ನೆಚ್ಚರಿಕೆ ಕೈಗೊಳ್ಳಲಾಗಿತ್ತು. ಇದರ ಮಧ್ಯೆ ಅಂಬೇಡ್ಕರ್ ಧ್ಯೇಯ ಸಿದ್ಧಾಂತ, ಭೀಮಾ ಕೋರೆಗಾವ್ ಯುದ್ಧದ ಇತಿಹಾಸ ಮತ್ತು ದೇಶದ ಜನತೆಗೆ ಬಾಬಾಸಾಹೇಬರು ನೀಡಿದ ಕೊಡುಗೆಯನ್ನು ವಿಶ್ವಕ್ಕೆ ಸಾರಬೇಕಾದ ಹಾಗು ದಿನವು ಇವರ ಮಾನವಿಯ ಮೌಲ್ಯವನ್ನು ಹೆಚ್ಚಿಸಬೇಕಾದ ಈ ದಿನಗಳಲ್ಲಿ ಪ್ರಮುಖ ಭಾಷಣಕಾರ ಅಂದು ಸಮಾಜವನ್ನು ಒಡೆಯುವ ಮನಸ್ಥಿತಿಯ ಯೋಜನೆಯೊಂದಿಗೆ ಬಿಜೆಪಿ ಸಂಘ ಪರಿವಾರ ಮತ್ತು ಕೆಲವು ಜಾತಿ ಸಮಾಜದವರನ್ನು ದೋಷಿಸುವುದಕ್ಕೆ ಬಳಸಿಕೊಂಡಿದ್ದು ನಾಚಿಕೆಗೇಡು. ಇದು ಭಾರತರತ್ನಗೆ ಮಾಡಿದ ಅವಮಾನ. ವಿದೇಶಿಯರು ಮತ್ತು ಭಾರತೀಯರು ದೇಶಭಕ್ತ, ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರಿಗೆ ಯಾವುದೇ ಜಾತಿ ಮತ ಭೇದವಿಲ್ಲದೆ ಗೌರವ ನೀಡುತ್ತಿದ್ದು. ಇದೆಲ್ಲವನ್ನು ಗೊತ್ತಿದ್ದರು ಸಮಾಜ ಒಡೆಯುವ ಕಾರ್ಖಾನೆಯಲ್ಲಿ ಪಳಗಿಕೊಂಡು. ಇನ್ನೊಬ್ಬರ ಸಿದ್ದಾಂತದ ಅಳ ತಿಳಿಯದೆ ಪ್ರಶಸ್ತಿ. ಅಧಿಕಾರದ ಆಸೆಗೆ.ಮಲೆನಾಡಿನ ಒಗ್ಗಟ್ಟನ್ನು ಒಡೆಯುವ ಕುತಂತ್ರ ಮಾಡುತ್ತಿದ್ದು. ಜೊತೆಗೆ ಇವರಿಗೆ ಕುಮ್ಮಕ್ಕು ಕೊಡುವ ಮನಸ್ಥಿತಿಯವರು ಜೈಕಾರ ಹಾಕುತಿರುವುದು ಖಂಡನೀಯ. ದೇಶದಲ್ಲಿ ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಅನಿಷ್ಠಗಳನ್ನು ಖಂಡಿಸುವ ಕಾರ್ಯವಾಗಬೇಕೆ ಹೊರತು ಅವರನ್ನು ಒಂದು ವರ್ಗಕ್ಕೆ ಸೀಮಿತಗೊಳಿಸುವ ಕೆಲಸ ಬೇಡ ಎಂದು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು