9:52 AM Wednesday2 - July 2025
ಬ್ರೇಕಿಂಗ್ ನ್ಯೂಸ್
ಬೆಂಗಳೂರು ಕಾಲ್ತುಳಿತದ ಪ್ರಕರಣ; ಸಿಎಟಿ ಆದೇಶ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ: ಮುಖ್ಯಮಂತ್ರಿ Karnataka CM | ಮಾಧ್ಯಮಗಳು ನನ್ನನ್ನೂ ಸೇರಿ ಅಧಿಕಾರಸ್ಥರ ಓಲೈಕೆ ಮಾಡಬಾರದು: ಮುಖ್ಯಮಂತ್ರಿ… Kodagu | ಕುಶಾಲನಗರದ ಕೂಡಿಗೆಯಲ್ಲಿ ಚಿನ್ನದಂಗಡಿ ಮಾಲೀಕನ ಮನೆಗೆ ಕನ್ನ: 14 ಲಕ್ಷ… ಕವಿಕಾದಲ್ಲಿ 14 ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್ ಪರಿವರ್ತಕ ದುರಸ್ತಿ ಕೇಂದ್ರ: ಇಂಧನ… Kodagu Crime | ಸುಳ್ಳು ಕೊಲೆ ಕೇಸ್ ಮೂಲಕ ಅಮಾಯಕ ಜೈಲಿಗೆ: ಇನ್ಸ್​ಪೆಕ್ಟರ್,… ಜೆಡಿಎಸ್ ಇನ್ನೊಬ್ಬರ ಹೆಗಲ ಮೇಲೆ ಕೈ ಹಾಕೊಂಡೇ ಅಧಿಕಾರಕ್ಕೆ ಬರಬೇಕು, ಸ್ವಂತ ಶಕ್ತಿಯಿಂದ… Karnataka CM | ಸರಕಾರ 5 ವರ್ಷ ಬಂಡೆಯಂತೆ ಭದ್ರವಾಗಿರುತ್ತದೆ: ಮೈಸೂರಿನಲ್ಲಿ ಸಿಎಂ… ಮಾಂಸಕ್ಕಾಗಿ ಜಿಂಕೆ ಕೊಲ್ಲುತ್ತಿದ್ದ ಪಾಪಿಯ ಬಂಧನ: 10 ಜಿಂಕೆ,1 ಕಾಡು ಹಂದಿ ಮಾಂಸ,… Shivamogga | ಯುವತಿಗೆ ಲೈಂಗಿಕ ಕಿರುಕುಳ: ಮೆಗ್ಗಾನ್ ಆಸ್ಪತ್ರೆ ವೈದ್ಯ ಡಾ.ಅಶ್ವಿನ್ ಹೆಬ್ಬಾರ್… Chikkamagaluru | 3 ದಿನಗಳು ಕಳೆದರೂ ನಾಪತ್ತೆಯಾದ ಫಾರೆಸ್ಟ್ ಗಾರ್ಡ್ ಪತ್ತೆ ಇಲ್ಲ:…

ಇತ್ತೀಚಿನ ಸುದ್ದಿ

ಮಂಗಳೂರು: ಕಿಕ್ಕಿರಿದ ಪ್ರೇಕ್ಷಕರಿಂದ ಸಂಪನ್ನಗೊಂಡ `ಅಲನಿ ಮೆಲೊಡಿ ನೈಟ್’: 9ರ ಹರೆಯದ ಬಾಲೆಯಿಂದ 9 ಹಾಡುಗಳ ರಂಜನೆ!

07/01/2025, 18:02

ಮಂಗಳೂರು(reporterkarnataka.com): ಮಾಂಡ್ ಸೊಭಾಣ್ ತಿಂಗಳ ವೇದಿಕೆ ಸರಣಿಯ 277ನೇ ಹಾಗೂ 24 ನೇ ವರ್ಷದ ಮೊದಲ ಕಾರ್ಯಕ್ರಮ ಜನವರಿ 5 ರಂದು ಶಕ್ತಿನಗರದ ಕಲಾಂಗಣದಲ್ಲಿ ನಡೆಯಿತು. ಬಯಲು ರಂಗ ಮಂದಿರವು ಪ್ರೇಕ್ಷಕರಿಂದ ತುಂಬಿ ತುಳುಕಿದ್ದು, ಒಂಬತ್ತರ ಹರಯದ ಬಾಲೆ ಅಲನಿ ಡಿಸೋಜ ಈ ಸಂಗೀತ ರಸಮಂಜರಿಯಲ್ಲಿ ಒಂಬತ್ತು ಹಾಡುಗಳನ್ನು ಹಾಡಿ ಮನ ರಂಜಿಸಿದಳು.

ಕಾರ್ಯಕ್ರಮದಲ್ಲಿ ಮೊದಲಿಗೆ ಮಾಂಡ್ ನಾಟಕ ತಂಡದ ರಜತ ಮಹೋತ್ಸವ ಸಂದರ್ಭದಲ್ಲಿ ಆಯೋಜಿಸುವ ಕೊಂಕಣಿ ನಾಟಕ `ಸರ್ದಾರ್ ಸಿಮಾಂವ್’ ಇದರ ಬ್ಯಾನರ್ ಬಿಡುಗಡೆಯನ್ನು ಕಲಾಂಗಣ ಚೇರ್’ಮ್ಯಾನ್ ರೊನಾಲ್ಡ್ ಮೆಂಡೊನ್ಸಾ ನೆರವೇರಿಸಿದರು. ಮಾಂಡ್ ಸೊಭಾಣ್ ಗುರಿಕಾರ ಎರಿಕ್ ಒಝೇರಿಯೊ `ಗುಮಟ್’ ಸಂಗೀತ ವಾದ್ಯವನ್ನು ಅಲನಿಗೆ ನೀಡಿ ಕೊಂಕಣಿ ಗಾಯನ ಪರಂಪರೆಯನ್ನು ಮುಂದುವರೆಸುವಂತೆ ಕೋರಿ ಶುಭ ಹಾರೈಸಿದರು. ದುಬಾಯಿಯ ಉದ್ಯಮಿ ಮತ್ತು ದಾನಿ ವಿಜಯ್ ಡಿಸೋಜ ಇವರು ಗಂಟೆ ಬಾರಿಸಿ ಚಾಲನೆ ನೀಡಿದರು. ವೇದಿಕೆಯಲ್ಲಿ ಮಾಂಡ್ ಸೊಭಾಣ್ ಪದಾಧಿಕಾರಿಗಳಾದ ಲುವಿ ಜೆ ಪಿಂಟೊ, ಕೇರನ್ ಮಾಡ್ತಾ ಹಾಗೂ ಮಾಂಡ್ ನಾಟಕ ತಂಡದ ಪರವಾಗಿ ಅರುಣ್ ರಾಜ್ ರೊಡ್ರಿಗಸ್, ವಿದ್ದು ಉಚ್ಚಿಲ್ ಮತ್ತು ವಿಕಾಸ್ ಕಲಾಕುಲ್ ಉಪಸ್ಥಿತರಿದ್ದರು.
ನಂತರ ತಾಕೊಡೆಯ ಒಂಬತ್ತು ವರ್ಷದ ಬಾಲ ಗಾಯಕಿ ಆಲನಿ ಲಿಯೊರಾ ಡಿಸೋಜ ಮೇರು ಗೀತರಚನಕಾರರಾದ ಚಾಫ್ರಾ ಡಿಕೋಸ್ತಾ, ವಿಲ್ಫಿ ರೆಬಿಂಬಸ್, ಕ್ಲೊಡ್ ಡಿಸೋಜ, ಕ್ರಿಸ್ ಪೆರಿ, ಎರಿಕ್ ಒಝೇರಿಯೊ, ಮೆಲ್ವಿನ್ ಪೆರಿಸ್ ಮತ್ತು ಲೋಯ್ಡ್ ರೇಗೊ ಇವರ ಒಂಬತ್ತು ಹಾಡುಗಳನ್ನು ಹಾಡಿ ಕಲಾಂಗಣದಲ್ಲಿ ಕಿಕ್ಕಿರಿದು ತುಂಬಿದ ಜನರ ಮನ ರಂಜಿಸಿದಳು. ಮೇವಿಶ್ ಇವರ ಸಂಗೀತ ನಿರ್ದೇಶನದಲ್ಲಿ ಸಚಿನ್ ಸಿಕ್ವೇರಾ (ಡ್ರಮ್ಸ್), ಜೇಸನ್ ಡಿಸೋಜ (ಲೀಡ್ ಗಿಟಾರ್), ಆಶ್ವಿನ್ ಕೊರೆಯಾ (ಬೇಸ್ ಗಿಟಾರ್), ಶೊನ್ ಬ್ರಾಸ್ಲಿನ್ (ವಯೊಲಿನ್) ಮತ್ತು ಅಶ್ವಿಲ್ ಕುಲಾಸೊ (ಕೀಬೋರ್ಡ್) ಇವರು ಸಂಗೀತ ನೀಡಿದರು.
ತರಬೇತುದಾರರಾದ ಶಿಲ್ಪಾ ಕುಟಿನ್ಹಾ, ಯುವ ಗಾಯಕ ಆರ್ವಿನ್ ಡಿಕುನ್ಹಾ, ಮತ್ತು ಬ್ಲೂ ಏಂಜಲ್ಸ್ ಗಾಯನ ತಂಡವು ಗಾಯನದಲ್ಲಿ ಸಹಕರಿಸಿದರು. ರೋಶನ್ ಕುಲ್ಶೇಕರ್ ಇವರ ಸಂಗಡ ಮಕ್ಕಳಾದ ಸಂಜನಾ ಮತಾಯಸ್, ಏಂಜಲ್ ಕುಟಿನ್ಹಾ, ಅನಿಕಾ ಡಿಸೋಜ ಮತ್ತು ಶನನ್ ಡಿಕೋಸ್ತಾ ಇವರು ಸುಂದರವಾಗಿ ನಿರೂಪಿಸಿದರು. ಅಲನಿಯ ತಾಯಿ ಲೊಲಿಟಾ ಸಲ್ಡಾನ್ಹಾ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದವರಿಗೆ ನೆನಪಿನ ಕಾಣಿಕೆ ನೀಡಿದರು. ತಂದೆ ಅಜಯ್ ಗ್ಲೆನ್ ಡಿಸೋಜ ಧನ್ಯವಾದವನ್ನಿತ್ತರು.

*ಅಲನಿ ಮೆಲೊಡಿ ನೈಟಾಂತ್ ಪರ್ಜಳ್ಳೆಂ ಗಾಯಾನಾಚೆಂ ನವೆಂ ನಕ್ತಿರ್*

2025 ಜನೆರ್ 05 ವೆರ್ ಆಯ್ತಾರಾ ಸಾಂಜೆರ್ ಕೊಂಕ್ಣಿ ಸಾದರ್ ಕಲೆಚೆಂ ಕೇಂದ್ರ್ ಕಲಾಂಗಣಾಚ್ಯೆ ಉಗ್ತ್ಯೆ ರಂಗ್ ಮಾಂಚಿಯೆರ್ ಸಾದರ್ ಜಾಲ್ಲಿ ಜನೆರ್ ಮ್ಹಯ್ನ್ಯಾಳಿ ಮಾಂಚಿ (277) ನವೆಂಸಾಂವಾಕ್ ಸಾಕ್ಸ್ ಜಾಲಿ. ಎಕಾ ನೆಣ್ತುಲ್ಯಾ ಬಾಳ್ ತಾಲೆಂತಾಂಕ್ ಹುಮೆದ್ ಭರ್ಚ್ಯಾಕ್, ಪಯ್ಸ್ ಪಯ್ಸ್ ಥಾವ್ನ್ ಲೋಕ್ ಆಯಿಲ್ಲೊ. ಮಾಂಚಿ ಶಿಂಕ್ಳೆಕ್ 24 ಚಿ ಪ್ರಾಯ್ ಸುರ್ವಾತ್ಚ್ಯಾ ಸುವಾಳ್ಯಾರ್ ನೋವ್ ವರ್ಸಾಂಚ್ಯಾ ಆಲನಿ ಲಿಯೊರಾ ಡಿಸೋಜಾನ್ `ಅಲನಿ ಮೆಲೊಡಿ ನೈಟ್’ ಸಂಗೀತ್ ಕಾರ್ಯೆಂ ಆಪ್ಲ್ಯಾ ಗಾಯಾನಾಚ್ಯಾ ತಾಲೆಂತಾನ್ ಪರ್ಜಳಾಯ್ಲೆಂ. ಸಹೃದಯಿ ಪ್ರೇಕ್ಷಕಾಂ ಥಾವ್ನ್ ಕಲಾಂಗಣ್ ಭರುನ್ ವೊಮ್ತಲೆಂ. ಸಬಾರ್ ತೆಂಪಾ ಉಪ್ರಾಂತ್, ಎಕಾ ಕೊಂಕ್ಣಿ ಕಾರ್ಯಾಂತ್ ಜಾಗೊ ನಾಸ್ತಾನಾ, ಜಾಯ್ತೊ ಲೋಕ್ ನಿರಾಶೆನ್ ಪಾಟಿಂ ಗೆಲೊ. ಕೊನ್ಸರ್ಟ್ ಶೈಲೆರ್ ಸೊಭ್ಲಲ್ಯೆ ವೆದಿರ್ ಆಪ್ಲ್ಯಾ ಮೊವಾಳ್ ಬಾಳ್ ತಾಳ್ಯಾನ್ ಆಲನಿನ್ ಗಾಯ್ತಾನಾ, ಶಿಳೊಣ್ಯೊ ಆನಿ ತಾಳಿಯಾಂ ಶಿಂವೊರಾಂನಿ ಕಲಾಂಗಣಾವಯ್ಲೆಂ ಮಳಬ್ ಶಿಂದುನ್ ಗೆಲೆಂ. ತೆಂ ಗಾಯಾನ್ ಶೆತಾಚೆಂ ನವೆಂ ನಕ್ತಿರ್ ಜಾವ್ನ್ ಪರ್ಜಳ್ಳೆಂ.
ಕಾರ್ಯಾಚ್ಯೆ ಸುರ್ವೆರ್ ಕಲಾಂಗಣ್ ಚೇರ್’ಮ್ಯಾನ್ ರೊನಾಲ್ಡ್ ಮೆಂಡೊನ್ಸಾನ್ ಮಾಂಡ್ ನಾಟಕ್ ಪಂಗ್ಡಾಚ್ಯಾ ರುಪ್ಯೋತ್ಸವಾ ಖಾತಿರ್ ಆಸಾ ಕರುಂಕ್ ಯೆವ್ಜಿಲ್ಲ್ಯಾ ನಾಟಕಾಚೆಂ ಬ್ಯಾನರ್ ಮೆಕ್ಳಿಕ್ ಕೆಲೆಂ. ವಿಜೆಪಿ ಸಲ್ಡಾನ್ಹಾಚ್ಯಾ ಜಲ್ಮಾ ಶತಮಾನೋತ್ಸವಾ ಸಂದರ್ಭಾರ್ ತಾಚ್ಯಾ ಕಾದಂಬರಿಂಚೆರ್ ಆಧಾರಿತ್ `ಸರ್ದಾರ್ ಸಿಮಾಂವ್’ ನಾಟಕ್ ಕರೆಜ್ಮಾಚ್ಯಾ ಆಯ್ತಾರಾಂನಿ ಖೆಳಯ್ತಲೆ. ಚಡಿತ್ ಮಾಹೆತ್ ಫುಡೆಂ ಲಾಭ್ತಲಿ. ಮಾಂಡ್ ಸೊಭಾಣ್ ಗುರ್ಕಾರ್ ಎರಿಕ್ ಒಝೇರಿಯೊನ್ ಗುಮಟ್ ದೀವ್ನ್ ಆಲನಿಕ್ ಉಲ್ಲಾಸಿಲೆಂ ಆನಿ ಕೊಂಕ್ಣಿ ದಾಯ್ಜ್ ಫುಡೆಂ ವರುಂಕ್ ಉಲೊ ದಿಲೊ. ರೊನಾಲ್ಡ್ ಮೆಂಡೊನ್ಸಾನ್ ಇಟಲಿ ಥಾವ್ನ್ ಹಾಡ್ಲಲಿ ವಿಶಿಶ್ಟ್ ಟ್ರೋಫಿ ಆಲನಿಕ್ ಹಾತಾಂತರ್ ಕೆಲಿ.
ಉದ್ಯಮಿ ವಿಜಯ್ ಡಿಸೋಜ ದುಬಾಯ್ ಹಾಣೆಂ ಘಾಂಟ್ ವ್ಹಾಜೊವ್ನ್ ಕಾರ್ಯಾಕ್ ಚಲಾವಣ್ ದಿಲೆಂ. ವೆದಿರ್ ಲುವಿ ಪಿಂಟೊ, ಕೇರನ್ ಮಾಡ್ತಾ, ಅರುಣ್ ರಾಜ್ ರೊಡ್ರಿಗಸ್, ವಿದ್ದು ಉಚ್ಚಿಲ್ ಆನಿ ವಿಕಾಸ್ ಕಲಾಕುಲ್ ಹಾಜರ್ ಆಸ್ಲಲೆ.
ಉಪ್ರಾಂತ್ ಫುಡ್ಲಿಂ ದೋನ್ ವರಾಂ ಅಲನಿನ್ ಆಪ್ಲ್ಯಾ ಮಧುರ್ ತಾಳ್ಯಾನ್ ಗಾವ್ನ್, ಹಾಜರ್ ಆಸ್ಲಲ್ಯಾ ಪ್ರೇಕ್ಷಕಾಂಕ್ ಧಲಯ್ಲೆಂ ಆನಿ ಬಸ್’ಲ್ಲೆಕಡೆಚ್ ನಾಚಯ್ಲೆಂ. ಕಾರ್ಯಾಂತ್ ತಾಣೆಂ ಚಾಫ್ರಾ ಡಿಕೋಸ್ತಾ, ವಿಲ್ಫಿ ರೆಬಿಂಬಸ್, ಕ್ಲೊಡ್ ಡಿಸೋಜ, ಕ್ರಿಸ್ ಪೆರಿ, ಎರಿಕ್ ಒಝೇರಿಯೊ, ಮೆಲ್ವಿನ್ ಪೆರಿಸ್ ಆನಿ ಲೊಯ್ಡ್ ರೇಗೊ ಹಾಂಚಿಂ ಪದಾಂ ಗಾಯ್ಲಿಂ. ಮೇವಿಶ್ ಹಾಚ್ಯಾ ಸಂಗೀತ್ ನಿರ್ದೇಶನಾ ಖಾಲ್ ಸಚಿನ್ ಸಿಕ್ವೇರಾ (ಡ್ರಮ್ಸ್), ಜೇಸನ್ ಡಿಸೋಜ (ಲೀಡ್ ಗಿಟಾರ್), ಆಶ್ವಿನ್ ಕೊರೆಯಾ (ಬೇಸ್ ಗಿಟಾರ್), ಶೊನ್ ಬ್ರಾಸ್ಲಿನ್ (ವಯೊಲಿನ್) ಆನಿ ಅಶ್ವಿಲ್ ಕುಲಾಸೊ (ಕೀಬೋರ್ಡ್) ಹಾಣಿಂ ಸಂಗೀತಾಚೊ ಆತ್ವೊ ಸಂಸಾರ್ ಉಗಡ್ಲೊ ಆನಿ ಸಾಂಜ್ ಯಾದ್’ಗಾರ್ ಕೆಲಿ.
ಶಿಲ್ಪಾ ಕುಟಿನ್ಹಾ, ಆರ್ವಿನ್ ಡಿಕುನ್ಹಾ, ಆನಿ ಬ್ಲೂ ಏಂಜಲ್ಸ್ ಕೊಯರ್ ಪಂಗ್ಡಾನ್ ಗಾಯಾನಾಂತ್ ಸಾಂಗಾತ್ ದಿಲೊ. ಪ್ರಮುಖ್ ನಿರ್ವಾಹಕ್ ರೋಶನ್ ಕುಲ್ಶೇಕರ್ ಹಾಚೆಸವೆಂ ಸಂಜನಾ ಮತಾಯಸ್, ಏಂಜಲ್ ಕುಟಿನ್ಹಾ, ಅನಿಕಾ ಡಿಸೋಜ ಆನಿ ಶನನ್ ಡಿಕೋಸ್ತಾ ಹಾಣಿಂ ಭೊವ್ ಸೊಭಿತ್ ರಿತಿನ್ ಕಾರ್ಯೆಂ ಸಾಂಬಾಳ್ಳೆಂ.
ಕಾರ್ಯಾಕ್ ಆಧಾರ್ ದಿಲ್ಲ್ಯಾಂಕ್ ಅಲನಿಚಿಂ ವ್ಹಡಿಲಾಂ ಅಜಯ್ ಗ್ಲೆನ್ ಡಿಸೋಜ ಆನಿ ಲೊಲಿಟಾ ಸಲ್ಡಾನ್ಹಾ ಹಾಣಿಂ ಉಗ್ಡಾಸಾಚಿ ಕಾಣಿಕ್ ದೀವ್ನ್ ಮಾನ್ ಕೆಲೊ.

ಇತ್ತೀಚಿನ ಸುದ್ದಿ

ಜಾಹೀರಾತು