4:10 PM Thursday15 - May 2025
ಬ್ರೇಕಿಂಗ್ ನ್ಯೂಸ್
ಲೋಕಾಯುಕ್ತ ಅಧಿಕಾರಿಗಳಿಂದ ಮತ್ತೆ ಭ್ರಷ್ಟರ ಭೇಟೆ: ಬೆಂಗಳೂರು, ಮಂಗಳೂರು ಸಹಿತ 7 ನಗರಗಳ… ಮಂಗಳೂರು: ಸರ್ವೆ ಇಲಾಖೆಯ ಅಧಿಕಾರಿ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ದಾಳಿ;… Bangalore | ಗ್ರಾಹಕರ ದೂರು ನಿರ್ವಹಣೆಗೆ ಡಿಜಿಟಲ್ ಪೋರ್ಟಲ್: ಬೆಸ್ಕಾಂ ಎಂಡಿ ಡಾ.ಎನ್.… Bangalore | ಮೇ 15ರಂದು ಬಿಜೆಪಿಯಿಂದ ತಿರಂಗಾ ಯಾತ್ರೆ, ಪಕ್ಷದ ಚಿಹ್ನೆ ಪ್ರದರ್ಶನವಿಲ್ಲ Bangalore | ರಾಜ್ಯದ ಯೋಜನೆಗಳಿಗೆ ಕೇಂದ್ರ ಸರ್ಕಾರದ ಅನುದಾನ ಬಿಡುಗಡೆ: ಮಹತ್ವದ ಸಭೆ Bangalore | ಅಕ್ಟೋಬರ್ ನಲ್ಲಿ ಅಂಗನವಾಡಿ ಸುವರ್ಣ ಮಹೋತ್ಸವ ಆಚರಣೆ: ಸಚಿವೆ ಲಕ್ಷ್ಮೀ… ಮೋಸ್ಟ್‌ ವಾಂಟೆಡ್‌ ಉಗ್ರರನ್ನು ನಿರ್ನಾಮ ಮಾಡಿದ್ದೇವೆ: ಹುಬ್ಬಳ್ಳಿ ಎಬಿವಿಪಿ ಕಾರ್ಯಕ್ರಮದಲ್ಲಿ ಪ್ರಹ್ಲಾದ್ ಜೋಶಿ Chitradurga | ಕಂದಾಯ ಗ್ರಾಮ ರಚನೆ ಪ್ರಕ್ರಿಯೆ ಪೂರ್ಣಗೊಳಿಸಲು ಜೂನ್ 30ರ ಗಡುವು ಎಲ್ಲರನ್ನೂ ನಗಿಸುತ್ತಿದ್ದ ಆತ ಇಂದು ಎಲ್ಲರೂ ಅಳುವಂತೆ ಮಾಡಿದ: ನಗು ನಗುತಲೇ ಹೊರಟು… Bangalore | ಕ್ಯಾನ್ಸರ್ ತಡೆಗೆ ಪರಿಣಾಮಕಾರಿ ಕಾರ್ಯಕ್ರಮ ಅವಶ್ಯ: ಮಾಜಿ ಡಿಸಿಎಂ ಡಾ.…

ಇತ್ತೀಚಿನ ಸುದ್ದಿ

ಅಕ್ರಮ ಆಸ್ತಿ ಪ್ರಕರಣ: ಮಾಜಿ ಕಾರ್ಪೊರೇಟರ್ ಗೆ ಸೇರಿದ 3.35 ಕೋಟಿ ಆಸ್ತಿ ಇಡಿ ಮುಟ್ಟುಗೋಲು

03/08/2022, 11:08

ಬೆಂಗಳೂರು(reporterkarnataka.com): ಅಕ್ರಮ ಆಸ್ತಿ ಪ್ರಕರಣದಲ್ಲಿ ಇಡಿ ಬೆಂಗಳೂರಿನ ಆಜಾದ್ ನಗರ ಮಾಜಿ ಕಾರ್ಪೊರೇಟರ್ ಸಿ.ಜಿ.ಗೌರಮ್ಮ ಅವರಿಗೆ ಸೇರಿದ 3.35 ಕೋಟಿ ರೂ.ಗಳ ಸ್ಥಿರಾಸ್ತಿಯನ್ನು ಜಾರಿ ) ಜಪ್ತಿ ಮಾಡಿದೆ.

ಗೌರಮ್ಮ ಮತ್ತು ಪತಿ ಸಿ.ಗೋವಿಂದರಾಜು ವಿರುದ್ಧ ಕರ್ನಾಟಕ ಲೋಕಾಯುಕ್ತ ಪೊಲೀಸರು ಸಲ್ಲಿಸಿದ ಆರೋಪಪಟ್ಟಿ ಆಧಾರದ ಮೇಲೆ ಇಡಿ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ಸಂಬಂಧ ತನಿಖೆ ಕೈಗೊಂಡಿದ್ದರು.

ಭ್ರಷ್ಟಾಚಾರ ತಡೆ ಕಾಯ್ದೆ, 1988 ರ ಸೆಕ್ಷನ್ 13 (2) ಮತ್ತು ಭಾರತೀಯ ದಂಡ ಸಂಹಿತೆಯ 120 (ಬಿ) ಅಡಿಯಲ್ಲಿ ಅಪರಾಧಕ್ಕಾಗಿ ಬೆಂಗಳೂರಿನ ಆಜಾದ್ ನಗರದ ವಾರ್ಡ್ ನಂ.141ನ ಮಾಜಿ ಕಾರ್ಪೊರೇಟರ್ ಸಿ.ಜಿ.ಗೌರಮ್ಮ ಮತ್ತು ಅವರ ಪತಿ ಸಿ.ಗೋವಿಂದರಾಜು ವಿರುದ್ಧ ಬೆಂಗಳೂರಿನ ಕರ್ನಾಟಕ ಲೋಕಾಯುಕ್ತ ಪೊಲೀಸರು ಸಲ್ಲಿಸಿದ ಚಾರ್ಜ್ಶೀಟ್ ಆಧಾರದ ಮೇಲೆ ಜಾರಿ ನಿರ್ದೇಶನಾಲಯವು ಮನಿ ಲಾಂಡರಿಂಗ್ ತನಿಖೆಯನ್ನು ಪ್ರಾರಂಭಿಸಿತು.

ಸಿ.ಜಿ. ಗೌರಮ್ಮ ಅವರು ಕಾರ್ಪೊರೇಟರ್ ಆಗಿ ಈ ಅವಧಿಯಲ್ಲಿ ತಮ್ಮ ಅಧಿಕೃತ ಹುದ್ದೆಯನ್ನು ದುರುಪಯೋಗಪಡಿಸಿಕೊಂಡು ತಮ್ಮ ಪತಿ ಸಿ.ಗೋವಿಂದರಾಜು ಅವರೊಂದಿಗೆ ಶಾಮೀಲಾಗಿ ಅಪರಾಧದ ಆದಾಯವನ್ನು ಸೃಷ್ಟಿಸಿದ್ದಾರೆ. ಅದನ್ನು ನಗದು ರೂಪದಲ್ಲಿ ಅವರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡುವ ಮೂಲಕ ಮತ್ತು ವಿವಿಧ ಸ್ಥಿರಾಸ್ತಿಗಳನ್ನು ನಗದು ರೂಪದಲ್ಲಿ ಪಡೆಯುವ ಮೂಲಕ ಅಪರಾಧದ ಆದಾಯವನ್ನು ಲಪಟಾಯಿಸಿದ್ದಾರೆ ಎಂದು ಇಡಿ ತನಿಖೆಯಿಂದ ತಿಳಿದುಬಂದಿದೆ.

ಸಿ.ಜಿ. ಗೌರಮ್ಮ ಮತ್ತು ಅವರ ಪತಿ ಸಿ. ಗೋವಿಂದರಾಜು ಅವರು 2010-11 ರಿಂದ 2012-13ರ ಹಣಕಾಸು ವರ್ಷದಲ್ಲಿ 3.46 ಕೋಟಿ ರೂ.ಗಳ ಅಕ್ರಮ ಆಸ್ತಿಯನ್ನು ಗಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಸ್ಥಿರ ಆಸ್ತಿಗಳಲ್ಲಿ ಕೃಷಿ ಭೂಮಿ, ವಸತಿ ನಿವೇಶನಗಳು ಮತ್ತು ವಾಣಿಜ್ಯ ನಿವೇಶನಗಳು ಸೇರಿವೆ. ಈ ಪ್ರಕರಣದಲ್ಲಿ ಆಜಾದ್ ನಗರದ ಮಾಜಿ ಕಾರ್ಪೊರೇಟರ್ ಸಿ.ಜಿ ಗೌರಮ್ಮ ಅವರಿಗೆ ಸಂಬಂಧಿಸಿದಂತ 3.35 ಕೋಟಿ ರೂ ಸ್ಥಿರಾಸ್ತಿಯನ್ನು ಮುಟ್ಟುಗೋಲು ಹಾಕಿದೆ.

ಇತ್ತೀಚಿನ ಸುದ್ದಿ

ಜಾಹೀರಾತು