ಇತ್ತೀಚಿನ ಸುದ್ದಿ
ಅಜೆಕಾರು: ಹುಬ್ಬಳ್ಳಿಯಿಂದ ಕಾರ್ಕಳ ಕಡೆಗೆ ಸಾಗುತ್ತಿದ್ದ ಲಾರಿ ಪಲ್ಟಿ; ಚಾಲಕನಿಗೆ ತೀವ್ರ ಗಾಯ
21/02/2022, 15:17
ಕಾರ್ಕಳ(reporterkarnataka.com): ಅಜೆಕಾರು ಕೈಕಂಬ ಸಮೀಪದ ಮಾರಿಗುಡಿ ಬಳಿ ಹುಬ್ಬಳ್ಳಿಯಿಂದ ಕಾರ್ಕಳ ಕಡೆ ಸಾಗುತ್ತಿದ್ದ ಲಾರಿಯೊಂದು ತಿರುವಿನಲ್ಲಿ ಅಪಘಾತಕ್ಕೀಡಾದ ಪರಿಣಾಮ ಲಾರಿ ಚಾಲಕ ತೀವ್ರ ಗಾಯಗೊಂಡಿದ್ದಾರೆ.
ಲಾರಿಯಲ್ಲಿ ಡ್ರೈವರ್ ಹಾಗೂ ನಿರ್ವಾಹಕ ಇಬ್ಬರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ