ಇತ್ತೀಚಿನ ಸುದ್ದಿ
ಆಗುಂಬೆ ಹೋಬಳಿಯ ನಿವಾಸಿ, ಕಾಲೇಜು ವಿದ್ಯಾರ್ಥಿ ನದಿಗೆ ಹಾರಿ ಆತ್ಮಹತ್ಯೆ
18/12/2024, 21:30
ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ
info.reporterkarnataka@gmail.com
ತುಂಗಾ ಕಾಲೇಜಿನಲ್ಲಿ ಡಿಗ್ರಿ ಓದುತ್ತಿದ್ದ ಯುವಕನೋರ್ವ ವಾರಳಿ ಬಳಿ ನದಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾನೆ.
ತಾಲೂಕಿನ ಆಗುಂಬೆ ಹೋಬಳಿ ಹೊನ್ನೇತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾರಳ್ಳಿಯ ಧ್ರುವ (20) ವಾರಳ್ಳಿ ಬಳಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮ ಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಮೃತನು ವಾರಳ್ಳಿ ದಿನೇಶ್ ರವರ ಮಗ ಎಂದು ತಿಳಿದು ಬಂದಿದೆ. ಮುಳುಗು ತಜ್ಞ ಕುರುವಳ್ಳಿ ಪ್ರಮೋದ್ ಪೂಜಾರಿ ಮೃತ ದೇಹವನ್ನು ಹೊರ ತರುವಲ್ಲಿ ಯಶಸ್ವಿಯಾಗಿದ್ದು ಆಗುಂಬೆ ಪೊಲೀಸ್ ಠಾಣೆ ಪಿ ಎಸ್ ಐ ರಂಗನಾಥ್ ಅಂತರಗಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.