ಇತ್ತೀಚಿನ ಸುದ್ದಿ
ಅಡ್ಯಾರು: ವೀರಾಂಜನೇಯ ಸ್ವಾಮಿ ದೇಗುಲದ ಶ್ರೀ ವೀರಾಂಜನೇಯ ಸ್ವಾಮಿ ನೂತನ ವಿಗ್ರಹ ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮ ಕಲಶೋತ್ಸವ ಸಮಾರೋಪ
18/04/2025, 21:16

ಮಂಗಳೂರು(reporterkarnataka.com): ನಗರದ ಹೊರವಲಯದ ಅಡ್ಯಾರಿನಲ್ಲಿ ನೂತನವಾಗಿ ನಿರ್ಮಾಣವಾಗಿರುವ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದ ಶ್ರೀ ವೀರಾಂಜನೇಯ ಸ್ವಾಮಿಯ ನೂತನ ವಿಗ್ರಹ ಪ್ರತಿಷ್ಠೆ ಹಾಗೂ ಅಷ್ಟಬಂಧ ಬ್ರಹ್ಮ ಕಲಶೋತ್ಸವದ ಸಮಾರೋಪ ಸಮಾರಂಭ ನಡೆಯಿತು.
ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕ ಡಾ. ವೈ. ಭರತ್ ಶೆಟ್ಟಿ ಅವರು ಮಾತನಾಡಿ, ಹಿಂದೂ ಧರ್ಮದ ಪ್ರತಿಯೊಂದು ನಂಬಿಕೆಯೂ ವೈಜ್ಞಾನಿಕವಾಗಿ ಸತ್ಯ ಎಂಬುದು ಸಾಬೀತಾಗಿದೆ, ನಮ್ಮ ನಂಬಿಕೆಯನ್ನು ಮೂಢನಂಬಿಕೆ ಎನ್ನುವವರಿಗೆ ಹನುಮಾನ್ ಚಾಲೀಸಾದಂತಹ ಪವಿತ್ರ ಮಂತ್ರಗಳೇ ಉತ್ತರ. ಇಂತಹ ಶ್ರದ್ಧಾ ಕೇಂದ್ರಗಳ ಮೂಲಕ ಹಿಂದೂ ಧರ್ಮವನ್ನು ಹಾಗೂ ಹಿಂದುತ್ವವನ್ನು ಕಲಿಸಿ, ಬೆಳೆಸಿ, ಉಳಿಸುವಂತಹ ಕಾರ್ಯವನ್ನು ನಾವೆಲ್ಲರೂ ಮಾಡೋಣ ಎಂದರು.