ಇತ್ತೀಚಿನ ಸುದ್ದಿ
ಅಡಿಕೆಗೆ ಎಲೆಚುಕ್ಕಿ ರೋಗ: ಕಂಗಾಲಾದ ರೈತರ ಕೈಹಿಡಿಯಲು ಮುಂದಾಗಿದೆ ರಾಜ್ಯ ಸರಕಾರ
07/10/2022, 10:36
ಬೆಂಗಳೂರು(reporter Karnataka.com): ಅಡಿಕೆ ತೋಟಗಳಿಗೆ ಎಲೆಚುಕ್ಕಿ ರೋಗದಿಂದ ಕಂಗಲಾಗಿರುವ ರೈತರಿಗೆ ರಾಜ್ಯ ಸರಕಾರವು ಮೊದಲನೇ ಸಿಂಪರಣೆಗಾಗಿ ರೈತರಿಗೆ ಉಚಿತವಾಗಿ ಸಸ್ಯ ಸಂರಕ್ಷಣಾ ಔಷಧಿಗಳನ್ನು ವಿತರಿಸಲು ಮುಂದಾಗಿದೆ. ಈ ಬಗ್ಗೆ ಆದೇಶ ನೀಡಲಾಗಿದೆ.
ರಾಜ್ಯದ ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲಿ ಹವಾಮಾನ ವೈಪರೀತ್ಯದಿಂದ ಕೊಲೆಟೋಟ್ರಿಕಮ್ ಗ್ಲೋಯೋಸ್ಪೊರಿಯಿಡ್ಡ್ ಎಂಬ ಶಿಲೀಂಧ್ರದಿಂದ ಎಲೆ ಚುಕ್ಕಿ ರೋಗವು ತೀವ್ರವಾಗಿ ಗಾಳಿಯಲ್ಲಿ ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ರೈತರಿಗೆ ಹಾನಿಗೊಳಗಾದ ಅಡಿಕೆ ತೋಟಗಳ ಮೊದಲನೇ ಸಿಂಪರಣೆಗಾಗಿ ರೈತರಿಗೆ ಉಚಿತವಾಗಿ ಸಸ್ಯ ಸಂರಕ್ಷಣಾ ಔಷಧಿಗಳನ್ನು ವಿತರಿಸಲು ತೀರ್ಮಾನಿಸಿದೆ.