ಇತ್ತೀಚಿನ ಸುದ್ದಿ
ಸ್ಮಶಾನ ಜಾಗ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕ್ರಮ: ವಿಧಾನಸಭೆಯಲ್ಲಿ ಸಚಿವ ಕೃಷ್ಣ ಬೈರೇಗೌಡ
12/08/2025, 19:32

ಬೆಂಗಳೂರು(reporterkarnataka.com): ಸ್ಮಶಾನ ಜಾಗವನ್ನು ಸರ್ವೆ ಮಾಡಿಸಿ,ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ವಿಧಾನಸಭಾ ಅಧಿವೇಶನದಲ್ಲಿ ಗಮನ ಸೆಳೆಯುವ ಸೂಚನೆ ವೇಳೆಯಲ್ಲಿ ಸದಸ್ಯರಾದ ಎಂ.ಸತೀಶ್ ರೆಡ್ಡಿ ಅವರು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸರ್ವೇ ನಂ. 43ಕ್ಕೆ ಒಳಪಟ್ಡಿರುವ ಸರ್ಕಾರಿ ಸ್ಮಶಾನ ಜಾಗವನ್ನು ಹೊಸದಾಗಿ ಪೋಡಿ ಮಾಡಿ, ಸರ್ವೇ ನಂ. 118 ಎಂಬ ಹೆಸರಿನಲ್ಲಿ ಸರ್ಕಾರಿ ಅಧಿಕಾರಿಗಳ ಸಹಭಾಗಿತ್ವದೊಂದಿಗೆ ಖಾಸಗಿ ವ್ಯಕ್ತಿಗಳ ಹೆಸರಿಗೆ ಬದಲಾಯಿಸಿಕೊಂಡು ಒತ್ತುವರಿ ಮಾಡಿರುವ ಬಗ್ಗೆ ಗಮನ ಸೆಳೆದ ವಿಷಯಕ್ಕೆ ಸಚಿವರು ಉತ್ತರಿಸಿದರು.