ಇತ್ತೀಚಿನ ಸುದ್ದಿ
ಅಚಲವಾದ ಶ್ರದ್ದೆಯಿಂದ ದೇವರ ಅನುಗ್ರಹ ಪ್ರಾಪ್ತಿ: ಮಹಾಲಿಂಗೇಶ್ವರ ದೇವರ ವರ್ಧಂತ್ಯುತ್ಸವದಲ್ಲಿ ಶ್ರೀ ಸಚ್ಚಿದಾನಂದ ಸರಸ್ವತಿ
28/04/2022, 20:10

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಋಷಿಮುನಿಗಳ ಮಾತಿನಲ್ಲಿ, ಗುರುಗಳ ಉಪದೇಶದಲ್ಲಿ ಅಚಲವಾದ ಶ್ರದ್ದೆ ಇದ್ದವರಿಗೆ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಹರಿಹರಪುರದ ಶ್ರೀ ಆದಿಶಂಕರಾಚಾರ್ಯ ಶ್ರೀ ಶಾರದಾಲಕ್ಷ್ಮಿನರಸಿಂಹ ಪೀಠಾಧೀಶ್ವರರಾದ
ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳು ಹೇಳಿದರು.
ಮರ್ಕಲ್‍ನ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಶ್ರೀ ಮಹಾಲಿಂಗೇಶ್ವರ ದೇವರ ವರ್ಧಂತ್ಯುತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡಿದರು.
ಅಚಲವಾದ ಶ್ರದ್ದೆಯೇ ದೇವರ ಅನುಗ್ರಹಕ್ಕೆ ಮೊದಲ ಸೂತ್ರವಾಗಿದೆ. ದೇವರು ಎಲ್ಲಾ ಮಾನವರಲ್ಲಿ ಕೂಡ ಸಮಾನವಾಗಿ ಆತ್ಮರೂಪದಲ್ಲಿ ನೆಲೆಸಿದ್ದಾನೆ. ಎಲ್ಲಾ ಮಾನವರಲ್ಲಿ ದೇವರನ್ನು ನೋಡಬೇಕಿದೆ. ಇಂತಹ ಪವಿತ್ರ ದೃಷ್ಟಿಯಿಂದ ಸಹಮಾನವರನ್ನು ನೋಡುವ ದೃಷ್ಟಿ ಬೆಳೆಸಿಕೊಂಡಾಗ ಅವರು ಹೆಚ್ಚಿ ಇವರು ಕಡಿಮೆ ಎನ್ನುವ ತುಚ್ಚವಾದ ಭಾವನೆ ಮನಸ್ಸಿನಲ್ಲಿ ಬರುವುದಿಲ್ಲ. ಬಡವ ಶ್ರೀಮಂತ, ವಿದ್ಯಾವಂತ, ಅಧಿಕಾರವಂತ ಎಲ್ಲಾ ಭೇಧವನ್ನು ಬಿಟ್ಟು ಎಲ್ಲರನ್ನು ಸಮಾನವಾಗಿ ನೋಡಲು ಸಾಧ್ಯವಾಗುತ್ತದೆ ಎಂದರು.
ವರ್ಧಂತ್ಯುತ್ಸವದ ಪ್ರಯುಕ್ತ ಕಲಾ ಹೋಮ, ಶ್ರೀ ರುದ್ರ ಹೋಮ ಸೇರಿದಂತೆ ವಿವಿಧ ಪೂಜಾ ವಿಧಿವಿಧಾನಗಳು ವಿಜೃಂಭಣೆಯಿಂದ ನಡೆದವು.
ಈ ಸಂದರ್ಭದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ನಾಗರಾಜ್ ಮರ್ಕಲ್, ಕಾರ್ಯದರ್ಶಿ ವಿಜೇಂದ್ರ ಮರ್ಕಲ್, ಖಜಾಂಚಿ ಲೋಕೇಶ್, ಉಪಾಧ್ಯಕ್ಷರಾದ ಗಜೇಂದ್ರ, ಸುಬ್ಬರಾಯ, ಅರುಣ, ಹಾಲಪ್ಪ, ವೀರಪ್ಪ, ರಮೇಶ್, ಮುಖಂಡರಾದ ರಾಮದಾಸಗೌಡ, ಗ್ರಾಮಸ್ಥರಾದ ಶಶಿಕುಮಾರ್, ದೀಪಕ್, ಯೋಗೇಶ್, ಅಶ್ವತ್ ಮರ್ಕಲ್ ಮುಂತಾದವರು ಇದ್ದರು.