ಇತ್ತೀಚಿನ ಸುದ್ದಿ
ಅಪಾಯಕ್ಕೆ ಅಹ್ವಾನ ನೀಡುತ್ತಿರುವ ಮರ; ಸಂಬಂಧ ಪಟ್ಟ ಅಧಿಕಾರಿಗಳು ತಕ್ಷಣ ಗಮನಿಸಲಿ..
05/07/2025, 21:35

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ
info.reporterkarnataka@gmail.com
ತೀರ್ಥಹಳ್ಳಿಯ ಮೇಲಿನಕುರುವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಆವರಣದ ಎದುರು ರಸ್ತೆಯ ಪಕ್ಕ ಮರವೊಂದು ಒಣಗಿ ನಿಂತಿದ್ದು ಇದು ರಸ್ತೆಯಲ್ಲಿ ಓಡಾಡುವ ಜನರಿಗೆ ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
ಈ ರಸ್ತೆಯಲ್ಲಿ ಈಗಾಗಲೇ ಶಾಲಾ ಮಕ್ಕಳು ವಯೋವೃದ್ಧರು ಸಾರ್ವಜನಿಕರು ಸೇರಿದಂತೆ ಅನೇಕರು ನಿತ್ಯ ಓಡಾಟ ನಡೆಸುತ್ತಿದ್ದು ಒಣಗಿ ನಿಂತ ಮರದ ಕೊಂಬೆಗಳು ಯಾವುದೇ ಮುನ್ಸೂಚನೆ ಇಲ್ಲದೆ ಮಳೆಗಾಳಿಗೆ ಬಿದ್ದು ಅನಾಹುತವಾಗುವ ಮುಂಚೆ ಸಂಬಂಧ ಪಟ್ಟ ಅಧಿಕಾರಿಗಳು ಗಮನಿಸಿ ತಕ್ಷಣ ಈ ಮರವನ್ನು ತೆರವುಗೊಳಿಸಬೇಕಾಗಿ ಸಾರ್ವಜನಿಕರಿಂದ ಮಾತು ಕೇಳಿ ಬರುತ್ತಿದೆ.